Belagavi News In Kannada | News Belgaum

ಬೆಳಗಾವಿ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯವಿಲ್ಲ: ನಳೀನಕುಮಾರ್ ಕಟೀಲ್ ಸಮರ್ಥನೆ

ಬೆಳಗಾವಿ: ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಗುಂಪುಗಾರಿಕೆ, ಭಿನ್ನಾಭಿಪ್ರಾಯ ಇಲ್ಲ ಎಂದು ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇನ್ನು ನಮ್ಮಲ್ಲಿ ಗುಂಪುಗಾರಿಕೆ, ಭಿನ್ನಾಭಿಪ್ರಾಯಗಳು ಅಂತಾ ಏನೂ ಇಲ್ಲ. ಅಭಿಪ್ರಾಯಗಳಲ್ಲಿ ವ್ಯತ್ಯಾಸಗಳು ಇರುತ್ತವೆ. ಒಂದು ರಾಜಕೀಯ ಪಾರ್ಟಿ, ರಾಜಕೀಯ ವ್ಯವಸ್ಥೆ ಅಡಿಯಲ್ಲಿ ಅಥವಾ ಒಂದು ಮನೆ, ಕುಟುಂಬಗಳಲ್ಲಿ ಅಭಿಪ್ರಾಯಗಳಲ್ಲಿ ವ್ಯತ್ಯಾಸ ಇರುತ್ತದೆ. ಅದನ್ನು ಸರಿ ಮಾಡಿಕೊಂಡು ಎಲ್ಲರೂ ಒಟ್ಟಾಗಿ ಹೋಗುತ್ತದೆ. ಇದಕ್ಕೆ ಪೂರ್ಣವಾಗಿ ಇಡಲು ಬಂದಿದ್ದೇನೆ. ಎಲ್ಲವನ್ನೂ ತೆಗೆದುಕೊಂಡಿದ್ದೇನೆ, ಎಲ್ಲಿಯೂ ಭಿನ್ನಾಭಿಪ್ರಾಯಗಳು ಇಲ್ಲ, ಒಂದೇ ಅಭಿಪ್ರಾಯದಡಿಯಲ್ಲಿ ಈ ಬಾರಿ ಎರಡೂ ಸ್ಥಾನಗಳನ್ನು ಗೆಲ್ಲಬೇಕು ಎಂದು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದಾರೆ ಎಂದರು.
ಮಹಾಂತೇಶ ಕವಟಗಿಮಠ ಸೋಲಿಗೆ ಯಾರು ಕಾರಣ ಎಂಬ ಮಾಧ್ಯಮಗಳ ಪ್ರಶ್ನೆಗೆ ಚುನಾವಣೆಯಿಂದ ಚುನಾವಣೆಯಲ್ಲಿ ವ್ಯತ್ಯಾಸಗಳು ಇರುತ್ತವೆ. ಒಂದೊಂದು ಚುನಾವಣೆಯಲ್ಲಿ ಪೂರ್ಣವಾಗಿ ಗೆಲುವು ಕಾರಣಗಳಿಂದ ಇರುತ್ತದೆ. ಎಲ್ಲಾ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಅಂತಾ ಇಲ್ಲ. ಕೆಲವೊಂದು ವ್ಯತ್ಯಾಸಗಳಿಂದ ಆ ರೀತಿ ಆಗಿರುತ್ತದೆ. ಭಿನ್ನಾಭಿಪ್ರಾಯ, ಗುಂಪುಗಾರಿಕೆಯಿಂದ ಆಗಿದೆ ಅಂತಾ ಅಲ್ಲ. ಮತದಾರರ ಕಾರಣಕ್ಕೋಸ್ಕರ ಆಗಿದೆ ಎಂದು ಸಮರ್ಥಿಸಿಕೊಂಡರು.
ನಮ್ಮಲ್ಲಿ ಕೆಲವೊಂದಿಷ್ಟು ಬಣ ರಾಜಕೀಯ ಇದೆ ಅವುಗಳನ್ನು ವರಿಷ್ಠರ ಗಮನಕ್ಕೆ ತರುತ್ತೇವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಬಗ್ಗೆ ಮಾತನಾಡಿದ ಕಟೀಲ್ ಆ ಚುನಾವಣೆ ಮುಗಿದ ಮೇಲೆ ನಾನೇ ಬಂದು ಎರಡು ಸಭೆ ಮಾಡಿದ್ದೇನೆ. ಚಿಂತನಾ ಸಭೆ ಅಂತಾ ಮಾಡಿದ್ದೇನೆ. ಅವತ್ತು ಭಿನ್ನಾಭಿಪ್ರಾಯಗಳು ಬಂದಿರಲಿಲ್ಲ, ಅಭಿಪ್ರಾಯ ಬೇಧಗಳು ಬಂದಿದ್ದವು. ಈ ಬಗ್ಗೆ ಕುಳಿತು ಸರಿ ಮಾಡಿ ಆ ಸಭೆ ಮಾಡಿ, ಮತ್ತೆ ಎರಡನೇ ಬಾರಿ ಬಂದು ಸಭೆ ಮುಗಿಸಿ ಇಲ್ಲಿರುವ ಎಲ್ಲವನ್ನೂ ಕ್ರೋಢಿಕರಿಸಿ ವ್ಯವಸ್ಥಿತವಾಗಿ ಏನು ಮಾಡಬೇಕೋ ಅದನ್ನು ಮಾಡಿದ್ದೇವೆ ಎಂದು ಕಟೀಲ್ ಸಮಜಾಯಿಷಿ ನೀಡಿದರು.

ಬಿಜೆಪಿ ಸಭೆಗೆ ಸವದಿ-ಬಾಲಚಂದ್ರ ಗೈರು:ವಾಯುವ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ನೇತೃತ್ವದಲ್ಲಿ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಸಚಿವರು, ಸಂಸದರು, ಶಾಸಕರು, ಪದಾಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಭಾಗಿಯಾಗಿದ್ದರು. ಆದರೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಬಾಲಚಂದ್ರ ಜಾರಕಿಹೊಳಿ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಹಿಂದೆ ಬೆಳಗಾವಿ ಬಣ ರಾಜಕೀಯ ಶಮನ ಗೊಳಿಸಲು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಕರೆದ ಸಭೆಗೆ 5 ಬಿಜೆಪಿ ಶಾಸಕರು ಗೈರಾಗಿದ್ದರು. ಅದೇ ರೀತಿ ಇಂದು ನಡೆದ ಬಿಜೆಪಿ ಸಭೆಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮಾಜಿ ಸಚಿವ, ಶಾಸಕ ಬಾಲಚಂದ್ರ ಜಾರಕಿಹೊಳಿ ಗೈರಾಗಿರುವುದು  ಬಿಜೆಪಿ ಪಡಸಾಲೆಯಲ್ಲೇ ಗುಸು.. ಗುಸು.. ಮಾತುಗಳು ಕೇಳಿ ಬಂದವು.//////