Belagavi News In Kannada | News Belgaum

ಹಾಲು ಉತ್ಪಾದಕರಿಗೆ ಯಂತ್ರ ಸಲಕರಣೆಗಳನ್ನು ವಿತರಿಸಿದ ಅಮರನಾಥ ಜಾರಕಿಹೊಳಿ

ಗೋಕಾಕ:  ಹಾಲು ಉತ್ಪಾದಕರಿಗಾಗಿ ಕೆಎಮ್‍ಎಫ್ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗುವಂತೆ ಕೆಎಮ್‍ಎಫ್ ನಿರ್ದೇಶಕ ಅಮರನಾಥ ರಮೇಶ ಜಾರಕಿಹೊಳಿ ಹೇಳಿದರು.

ಅವರು, ನಗರದ ಶಾಕರ ಕಚೇರಿಯಲ್ಲಿ ಕೆಎಮ್‍ಎಫ್ ಹಾಲು ಉತ್ಪಾದಕ ಸದಸ್ಯರಿಗೆ ಕರ್ನಾಟಕ ಹಾಲು ಮಹಾ ಮಂಡಳಿ ಬೆಳಗಾವಿ ವತಿಯಿಂದ ಹಾಲು ಕರಿಯುವ ಹಾಗೂ ಮೇವು ಕಟಾವು ಯಂತ್ರ ಮತ್ತು ಮ್ಯಾಟ್ ಪರೀಕರ ಶೇ.50%. ರಿಯಾಯಿತಿ ದರದಲ್ಲಿ ಅರ್ಹ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.

ಭಾರತ ದೇಶ ಕೃಷಿ ಪ್ರಧಾನ ದೇಶವಾಗಿದ್ದು, ಕೆಎಮ್‍ಎಫ್ ಪ್ರಗತಿಗೆ ರೈತರೆ ಶಕ್ತಿಯಾಗಿದ್ದು,  ಕೆಎಮ್‍ಎಫ್‍ನಿಂದ ಅನೇಕ ಸೌಲಭ್ಯಗಳನ್ನು ವಿತರಣೆ ಮಾಡಲಾಗುತ್ತಿದೆ. ರೈತರ ಏಳ್ಗೆ ಹಾಗೂ ಸ್ವಾವಲಂಭಿ ಬದುಕಿಗೆ ಕೆಎಮ್‍ಎಫ್‍ನಿಂದ ಹಲವಾರು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಭೀಮನಗೌಡ ಪೊಲೀಸಗೌಡರ, ಕೆಎಮ್‍ಎಫ್ ಮ್ಯಾನೇಜರ್ ಯಾಸೀನ ಮುಲ್ಲಾ,   ರವಿ ತಳವಾರ, ಸಚಿನ ಪಡದಲ್ಲಿ, ಎಸ್ ಬಿ ಕರಬನ್ನವರ, ಎಮ್ ಬಿ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು./////