ವಾಟರ್ ಟ್ಯಾಂಕರ್ ವಾಹನ ಹರಿದು 3 ವರ್ಷದ ಬಾಲಕಿ ಸಾವು

ಬೆಂಗಳೂರು: ಬೆಳಗ್ಗೆಯಷ್ಟೇ ಶಾಲಾ ಬಸ್ ಹರಿದು ಬಾಲಕಿ ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದ್ದು, ನೀರಿನ ಟ್ಯಾಂಕರ್ ವಾಹನ ಹರಿದು ಮೂರು ವರ್ಷದ ಬಾಲಕಿ ಬಲಿಯಾಗಿರುವ ಘಟನೆ ಬೆಂಗಳೂರಿನ ಶ್ವೇತಾ ರೆಸಿಡೆನ್ಸಿ ಎದುರು ನಡೆದಿದೆ.
ಸಮೃತ ಬಾಲಕಿಯನ್ನು ಮೂರು ವರ್ಷದ ಪ್ರತೀಕ್ಷಾ ಎಂದು ಗುರುತಿಸಲಾಗಿದೆ. ಸರ್ಜಾಪುರ ರಸ್ತೆಯಲ್ಲಿನ ಶ್ವೇತಾ ರೆಸಿಡೆನ್ಸಿ ಅಪಾರ್ಟ್ ಮೆಂಟ್ ಮುಂದೆ ಈ ಅವಘಡ ಸಂಭವಿಸಿದ್ದು, ನೀರನ್ನು ಅನ್ ಲೋಡ್ ಮಾಡಿ ಟ್ಯಾಂಕರ್ ವಾಹನ ರಿವರ್ಸ್ ತೆಗೆದುಕೊಳ್ಳುತ್ತಿದ್ದಾಗ ಅಪಘಾತ ಸಂಭವಿಸಿದೆ. ನೀರಿನ ಟ್ಯಾಂಕರ್ ಹಿಂದೆ ಇದ್ದ ಬಾಲಕಿಯನ್ನು ಗಮನಿಸದೇ ಚಾಲಕ ಟ್ಯಾಂಕರ್ ವಾಹನ ಹಿಂದೆ ತೆಗೆದಿದ್ದಾನೆ. ಟ್ಯಾಂಕರ್ ವಾಹನ ಚಕ್ರಕ್ಕೆ ಸಿಲುಕಿದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದಾಳೆ. ಮಗುವನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಹೆಚ್ ಎಸ್ ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////