Belagavi News In Kannada | News Belgaum

ಅಮೇರಿಕಾದ ಪ್ರತಿಷ್ಠಿತ ಥಾಮಸ್ ಜೆಫರ್‍ಸನ್ ವಿಶ್ವವಿದ್ಯಾಲಯದಿಂದ ಡಾ.ಪ್ರಭಾಕರ ಕೋರೆಯವರಿಗೆ ಗೌರವ ಡಾಕ್ಟರೇಟ್

ದೇಶದ ಹೆಮ್ಮೆಯ ಕೆಎಲ್‍ಇ ಸಂಸ್ಥೆಯು 1916ರಲ್ಲಿ ಉತ್ತರ ಕರ್ನಾಟಕದ ಭಾಗದಲ್ಲಿ ಶಿಕ್ಷಣವನ್ನು ಸ್ವಾವಲಂಬನೆಗೈಯಲು ಏಳು ಜನ ಶಿಕ್ಷಕ ಸಪ್ತರ್ಷಿಗಳು, ಅವರಿಗೆ ಬೆಂಬಲವಾಗಿ ನಿಂತ ದಾನಿಗಳು ಮಹಾದಾನಿಗಳ ತ್ಯಾಗ-ಪರಿಶ್ರಮದಿಂದ ಸ್ಥಾಪಿತವಾಯಿತು. ಅಂತಹ ಮಹಾನ್ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಸಂಸ್ಥಾಪಕರ ಕನಸು ಆಶಯಗಳನ್ನು ಬಾನೆತ್ತರಕ್ಕೆ ಕೊಂಡ್ಯೊಯ್ದ ಧೀಮಂತ ನಾಯಕರು. 1984ರಲ್ಲಿ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿಯನ್ನು ಹೊತ್ತು ಕೆಎಲ್‍ಇ ಸಂಸ್ಥೆಯನ್ನು ಅಭೂತಪೂರ್ವವಾಗಿ ಬೆಳೆಸಿದರು.

ಅಲ್ಲದೇ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆಯುವಂತೆ ಶ್ರಮವಹಿಸಿದರು. ಇಂದು ಕೆಎಲ್‍ಇ ಸಂಸ್ಥೆಯು 282 ಅಂಗ ಸಂಸ್ಥೆಗಳ ಬೃಹತ್ ಜಾಲದೊಂದಿಗೆ 1,38,000 ವಿದ್ಯಾರ್ಥಿಗಳು, 18,000 ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳನ್ನು ಹೊಂದಿದೆ. ಅತ್ಯಾಧುನಿಕ ಮೂಲಸೌಲಭ್ಯಗಳೊಂದಿಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರ ಜೊತೆಗೆ ಉನ್ನತ ಶಿಕ್ಷಣದ ಮೈಲುಗಲ್ಲಂತೆ ಬೆಳಗಾವಿಯಲ್ಲಿ ಕೆಎಲ್‍ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಅಂಡ್ ರಿಸರ್ಚ್ ಡೀಮ್ಡ್ ವಿಶ್ವವಿದ್ಯಾಲಯ ಹಾಗೂ ಹುಬ್ಬಳ್ಳಿಯಲ್ಲಿ ಕೆಎಲ್‍ಇ ತಾಂತ್ರಿಕ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದ ಕೀರ್ತಿಯೂ ಡಾ.ಕೋರೆಯವರಿಗೆ ಸಲ್ಲುತ್ತದೆ. ಬಹು ಅಂಗಾಂಗ ಕಸಿ ಸೌಲಭ್ಯಗಳನ್ನೂ ಒಳಗೊಂಡಂತೆ 4000 ಕ್ಕೂ ಹೆಚ್ಚು ಹಾಸಿಗೆ ಸಾಮಥ್ರ್ಯದ ಆರೋಗ್ಯ ಸೇವೆ ಸಂಸ್ಥೆಗಳು ಹಾಗೂ ಆರೋಗ್ಯ ಸಂಶೋಧನೆಗೆ ಅವರು ನೀಡಿದ ಕೊಡುಗೆ ಅಪೂರ್ವ ಅನುಪಮವಾಗಿದೆ.

ಕೆಎಲ್‍ಇ ಡೀಮ್ಡ್ ವಿಶ್ವವಿದ್ಯಾಲಯದ ಜವಾಹರಲಾಲ ನೆಹರು ಮೆಡಿಕಲ್ ಕಾಲೇಜಿನ “ಮಹಿಳೆಯರ ಮತ್ತು ಮಕ್ಕಳ ಆರೋಗ್ಯ ಸಂಶೋಧನಾ ಘಟಕ”ವನ್ನು ಸ್ಥಾಪಿಸಲು ಪ್ರಮುಖ ಕಾರಣೀಕರ್ತರು ಡಾ.ಪ್ರಭಾಕರ ಕೋರೆಯವರು. ಈ ಸಂಶೋಧನಾ ಘಟಕವು ಅಮೇರಿಕಾದ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಹೆಲ್ತ್, ಯು.ಕೆ. ವೈದ್ಯಕೀಯ ಸಂಶೋಧನಾ ಮಂಡಳಿ, ವಿಶ್ವ ಆರೋಗ್ಯ ಸಂಸ್ಥೆ, ಜಿನಿವಾ, ಅಮೇರಿಕಾದ ಬಿಲ್ ಅಂಡ್ ಮೆಲಿಂಡಾ ಗೇಟ್ಸ್ ಫೌಂಡೇಶನ್‍ನಿಂದ ಅನುದಾನವನ್ನು ಪಡೆಯುತ್ತಿದೆ. ಲಂಡನ್‍ನ ಕಿಂಗ್ಸ್ ಕಾಲೇಜು, ಅಮೇರಿಕಾದ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯ, ನಾರ್ಥ ಕೆರೊಲಿನಾ ವಿಶ್ವವಿದ್ಯಾಲಯ, ಹಾರ್ವರ್ಡ್ ಟಿ.ಹೆಚ್. ಚಾನ್ ಸ್ಕೂಲ್ ಪಬ್ಲಿಕ್ ಹೆಲ್ತ್ ಮುಂತಾದ ಜಾಗತಿಕ ಸಂಸ್ಥೆಗಳೊಂದಿಗೆ ಸಂಶೋಧನಾ ಸಹಯೋಗ ಸಾಧಿಸಿದೆ.

ಈ ಸಂಶೋಧನಾ ಸಹಯೋಗದಡಿಯಲ್ಲಿ ಕೈಗೊಂಡಿರುವ ಅಧ್ಯಯನಗಳು ಗರ್ಭಾವಸ್ಥೆ, ಹೆರಿಗೆ ಮತ್ತು ಮಗುವಿನ ಬಾಲ್ಯದಲ್ಲಿ ಉಂಟಾಗುವ ಅಸ್ವಸ್ಥತೆ ಹಾಗೂ ಮರಣ ಪ್ರಮಾಣವನ್ನು ತಗ್ಗಿಸಲು, ಅನೇಕ ಸಂಶೋಧನಾ ಅಧ್ಯಯನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಎನ್‍ಐಸಿಹೆಚ್‍ಡಿ ಗ್ಲೋಬಲ್ ನೆಟ್‍ವರ್ಕನಿಂದ ಧನ ಸಹಾಯ ಪಡೆದಿರುವ ಟಿ.ಜೆ.ಯು-ಜೆ.ಎನ್.ಎಂ.ಸಿ.ಯ ಸಂಶೋಧನಾ ಘಟಕವು, ಅವಧಿಪೂರ್ವ ಜನನವನ್ನು ತಡೆಗಟ್ಟಲು ಮತ್ತು ಹೆರಿಗೆಯ ಸಮಯದಲ್ಲಿ ಉಂಟಾಗುವ ಮರಣ ಪ್ರಮಾಣವನ್ನು ಕಡಿಮೆ ಮಾಡಲು ಸಮುದಾಯ ಆಧಾರಿತ, ಬಹು ಕೇಂದ್ರೀಯ, ಬಹುರಾಷ್ಟ್ರ ಪ್ರಯೋಗಗಳನ್ನು ನಡೆಸಿದೆ. ಈ ಸಂಶೋಧನಾ ಫಲಿತಾಂಶಗಳು, ಸಾರ್ವಜನಿಕ ಆರೋಗ್ಯ ನೀತಿಗಳ ಮೇಲೆ ಪ್ರಭಾವ ಬೀರಿರುವುದು ಮಾತ್ರವಲ್ಲದೇ, ಭಾರತ ಸರ್ಕಾರದ ಆರೋಗ್ಯ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳಲ್ಲಿ ಅಳವಡಿಸಲಾಗಿದೆ. ಸಂಶೋಧನಾ ಘಟಕವು ತಾಯಂದಿರ ಮತ್ತು ನವಜಾತ ಶಿಶುಗಳ ಆರೋಗ್ಯ ಸಂಶೋಧನೆಗಾಗಿ “ವಿಶ್ವ ಆರೋಗ್ಯ ಸಂಸ್ಥೆಯ ಸಮನ್ವಯ ಕೇಂದ್ರ”ವೆಂದು ಗುರುತಿಸಲ್ಪಟ್ಟಿದೆ.

ಸಾರ್ವಜನಿಕ ಆರೋಗ್ಯ, ಯುರಾಲಜಿ ಮತ್ತು ಇಂಟಿಗ್ರೇಟಿವ್ ಮೆಡಿಸಿನ್ ಕ್ಷೇತ್ರಗಳಲ್ಲಿ ಕೆಎಲ್‍ಇ ಡೀಮ್ಡ್ ವಿಶ್ವವಿದ್ಯಾಲಯ ಮತ್ತು ಥಾಮಸ್ ಜೆಫರ್‍ಸನ್ ವಿಶ್ವವಿದ್ಯಾಲಯ ನಡುವಿನ ಶೈಕ್ಷಣಿಕ ಮತ್ತು ಸಂಶೋಧನಾ ಸಹಯೋಗವು ಜುಲೈ 2017ರಲ್ಲಿ ಪ್ರಾರಂಭವಾಗಿದ್ದು, ಮುಂದುವರೆದು ನ್ಯುರಾಲಜಿ, ರೇಡಿಯಾಲಜಿ, ನಿಯೋನಟಾಲಜಿ, ಸೈಕಿಯಾಟ್ರಿ, ನರ್ಸಿಂಗ್ ಮತ್ತು ಫಿಜಿಯೋಥೆರಪಿ ಕ್ಷೇತ್ರಗಳನ್ನೂ ಒಳಗೊಂಡು ವಿಸ್ತರಿಸಲಾಗಿದೆ. ಈ ಶೈP್ಷÀಣಿಕ ಸಹಯೋಗವು ಸಂಶೋಧನಾ ಅನುದಾನಗಳ ಅಭಿವೃದ್ಧಿಯ ಜೊತೆಗೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮವನ್ನು ಒಳಗೊಂಡಿದೆ. ಮೇ 26, 2022 ರಂದು ಥಾಮಸ್ ಜೆಫರ್‍ಸನ್ ವಿಶ್ವವಿದ್ಯಾಲಯದಲ್ಲಿ ‘ಭಾರತ ಕೇಂದ್ರ’ವನ್ನು ಸ್ಥಾಪಿಸುವುದರೊಂದಿಗೆ ಕೆಎಲ್‍ಇ ಹಾಗೂ ಟಿಜೆಯು ಗಳ ನಡುವಿನ ಬಲವಾದ ಶೈP್ಷÀಣಿಕ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.

ತಾಯಿ ಮತ್ತು ಮಕ್ಕಳ ಆರೋಗ್ಯ ಸಂಶೋಧನೆಯ ಕ್ಷೇತ್ರದಲ್ಲಿ ಥಾಮಸ್ ಜೆಫರ್‍ಸನ್ ವಿಶ್ವವಿದ್ಯಾಲಯದೊಂದಿಗೆ ಸಾಧಿಸಿದ ಸಹಯೋಗ, ಅಧ್ಯಾಪಕರ ವಿಸ್ತರಣೆಯ ಕಾರ್ಯತಂತ್ರ ಕೆಎಲ್‍ಇ ಮತ್ತು ಟಿ.ಜೆ.ಯು ನಡುವಿನ ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮದ ನಾಯಕತ್ವ ವಹಿಸಿ, ತನ್ಮೂಲಕ ಭಾರತದಲ್ಲಿನ ಹಿಂದುಳಿದ ಪ್ರದೇಶಗಳ ಜನರ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಸಲ್ಲಿಸಿರುವ ನಿಸ್ವಾರ್ಥ ಸೇವೆಯನ್ನು, ಸಮಾಜಕ್ಕೆ ನೀಡಿರುವ ಅನುಪಮ ಕೊಡುಗೆಗಳನ್ನು ಗುರುತಿಸಿ ಅಮೇರಿಕಾದ ಫಿಲಿಡೆಲ್ಫಿಯಾದ ಥಾಮಸ್ ಜೆಫರ್‍ಸನ್ ವಿಶ್ವವಿದ್ಯಾಲಯವು ಮೇ, 25 2022 ರಂದು ನಡೆದ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಡಾ.ಪ್ರಭಾಕರ ಕೋರೆಯವರಿಗೆ “ಡಾಕ್ಟರ್ ಆಫ್ ಸೈನ್ಸ್” ಗೌರವ ಪದವಿಯನ್ನು ಪ್ರದಾನ ಮಾಡಿ ಅಭಿನಂದಿಸಿದೆ.

ಥಾಮಸ್ ಜೆಫರ್‍ಸನ್ ವಿಶ್ವವಿದ್ಯಾಲಯದ ಅಧ್ಯP್ಷÀರು ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಚ್.ರಿಚರ್ಡ್ ಹ್ಯಾವರ್‍ಸ್ಟಿಕ್ ಹಾಗೂ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದ ಶೈP್ಷÀಣಿಕ ವ್ಯವಹಾರಗಳ ಮುಖ್ಯಸ್ಥರು ಹಾಗೂ ಕಾರ್ಯನಿರ್ವಾಹಕ ಉಪಾಧ್ಯP್ಷÀರಾದ ಡಾ.ಮಾರ್ಕ್ ಎಲ್ ಟೈಕೋಸಿನಸ್ಕಿ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಅಮೇರಿಕಾದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಥಾಮಸ್ ಜೆಫರ್‍ಸನ್ ವಿಶ್ವವಿದ್ಯಾಲಯದಿಂದ ಈ ಪದವಿಯನ್ನು ಪಡೆದ ಡಾ.ಪ್ರಭಾಕರ ಕೋರೆಯವರು ಮೊದಲ ಭಾರತೀಯರು ಎಂಬುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ./////