Belagavi News In Kannada | News Belgaum

ಸ್ಕಿಡ್ ಆಗಿ ಕಮರಿಗೆ ಉರುಳಿದ ವಾಹನ: 7 ಯೋಧರು ದುರ್ಮರಣ

ಲೇಹ್: ತುರ್ತುಕ್ ಸೆಕ್ಟರ್‌ನ ಶ್ಯೋಕ್ ನದಿಗೆ ವಾಹನ ಬಿದ್ದ ಪರಿಣಾಮ 7 ಮಂದಿ ಸೈನಿಕರು ಸಾವನ್ನಪ್ಪಿದ್ದು, ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಶುಕ್ರವಾರ ಲಡಾಖ್‍ನ ತುರ್ತುಕ್ ಸೆಕ್ಟರ್‌ನ ಶ್ಯೋಕ್ ನದಿಯ ಬಳಿ ಸೈನಿಕರು ವಾಹನದಲ್ಲಿ ಪ್ರಯಾಣ ಮಾಡುತ್ತಿದ್ದರು. ಅವರ ವಾಹನ ಸ್ಕಿಡ್ ಆಗಿ ಕಮರಿಗೆ ಉರುಳಿದೆ. ಪರಿಣಾಮ 7 ಯೋಧರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ಕೊಟ್ಟ ಅಧಿಕಾರಿಗಳು, 26 ಸೈನಿಕರ ತಂಡವು ಪರ್ತಾಪುರ್ ಟ್ರಾನ್ಸಿಟ್ ಕ್ಯಾಂಪ್‍ನಿಂದ ತುರ್ತುಕ್‍ನ ಮುಂದಿನ ಪ್ರದೇಶಕ್ಕೆ ಹೋಗುತ್ತಿದ್ದರು. ಈ ವೇಳೆ ಘಟನೆ ನಡೆದಿದೆ. ಗಾಯಗೊಂಡ ಸೈನಿಕರಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ನೀಡಲು ಎಲ್ಲ ಪ್ರಯತ್ನ ನಡೆಯುತ್ತಿವೆ. ಇದಲ್ಲದೆ, ತೀವ್ರವಾದ ಗಾಯಗಳಿಗೆ ಒಳಗಾದವರನ್ನು ಪಶ್ಚಿಮ ಕಮಾಂಡ್‍ಗೆ ಸ್ಥಳಾಂತರಿಸಲು ಭಾರತೀಯ ವಾಯುಪಡೆಯಿಂದ(ಐಎಎಫ್) ವಾಯು ಬೆಂಬಲವನ್ನು ಸಹ ಕೋರಲಾಗಿದೆ.
ನಡೆದಿದ್ದೇನು? 26 ಸೈನಿಕರ ತಂಡವು ಪಾರ್ತಾಪುರದ ಟ್ರಾನ್ಸಿಟ್ ಕ್ಯಾಂಪ್‍ನಿಂದ ಉಪವಲಯದ ಹನೀಫ್‍ನ ಮುಂದಿನ ಸ್ಥಳಕ್ಕೆ ತೆರಳುತ್ತಿತ್ತು. ಈ ವೇಳೆ ವಾಹನವು ರಸ್ತೆಯಲ್ಲಿ ಸ್ಕಿಡ್ ಆಗಿ ಶ್ಯೋಕ್ ನದಿಯಲ್ಲಿ ಬಿದ್ದಿದೆ. ಇದರ ಪರಿಣಾಮವಾಗಿ ಎಲ್ಲರಿಗೂ ಗಾಯಗಳಾಗಿವೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.//////