Belagavi News In Kannada | News Belgaum

ಊಟ ಇಲ್ಲ ಅಂದಿದ್ದಕ್ಕೆ ಹೋಟೆಲ್​ಗೆ ಬೆಂಕಿಯಿಟ್ಟಿ ಕಿಡಿಗೇಡಿಗಳು

ಕೊಪ್ಪಳ: ಊಟ ಇಲ್ಲ ಅಂದಿದ್ದಕ್ಕೆ ಕಿಡಿಗೇಡಿಗಳು ಹೋಟೆಲ್​ಗೆ ಬೆಂಕಿಯಿಟ್ಟಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ನಡೆದಿದೆ.

ಗುಡಿಸಲು ಮಾದರಿಯಲ್ಲಿದ್ದ ಹೋಟೆಲ್​ನ 11 ಕೋಣೆಗಳಿಗೆ ಬೆಂಕಿ ಹಚ್ಚಿ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಸ್ಥಳೀಯರ ಸಹಾಯದಿಂದ ಸಿಬ್ಬಂದಿ ಹೋಟೆಲ್​ನಿಂದ ಹೊರಬಂದಿದ್ದಾರೆ. ಅದೃಷ್ಟವಶಾತ್ ಅವಘಡದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕಿಡಗೇಡಿಗಳು ನಿನ್ನೆ ರಾತ್ರಿ 11 ಗಂಟೆ ಬಳಿಕ ಊಟಕ್ಕೆಂದು ಬಂದಿದ್ದರು. ಈ ವೇಳೆ ಹೋಟೆಲ್​ ಸಿಬ್ಬಂದಿ ಊಟ ಇಲ್ಲ ಅಂದಿದ್ದಕ್ಕೆ ದುಷ್ಕೃತ್ಯ ಎಸಗಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ./////