Belagavi News In Kannada | News Belgaum

ಮನೆ ಸಾಲ ತಿರಿಸಲಾಗದೇ ವ್ಯಕ್ತಿ ಮನನೊಂದು ಆತ್ಮಹತ್ಯೆ

ಬೆಳಗಾವಿ: ಸಾಲದ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ಮನನೊಂದು ನೇಣಿಗೆ ಶರಣಾಗಿರುವ  ಘಟನೆ ವಡಗಾವಿಯ ಯಳ್ಳೂರ ರಸ್ತೆಯಲ್ಲಿ ನಡೆದಿದೆ.

ಅನಗೋಳದ  ಮಹಾವೀರ ಜೀನಪ್ಪ ಸುಟನ್ನವರ  (56)  ಮೃತ ವ್ಯಕ್ತಿ.ಸ್ಥಳಕ್ಕೆ ಗ್ರಾಮೀಣ ಠಾಣೆ ಎಸಿಪಿ ಗಣಪತಿ ಗುಡಾಜಿ, ಸಿಪಿಐ ಶ್ರೀನಿವಾಸ್ ಹಂಡಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ಸಾಲ ಭಾದೆಯೇ ಕಾರಣ ಎನ್ನಲಾಗುತ್ತಿದೆ.

ಮನೆ ಕಟ್ಟುವ ಸಲುವಾಗಿ ಕೈ-ಸಾಲ  ಮಾಡಿಕೊಂಡಿದ್ದ,  ಮನೆಯಲ್ಲಿನ ತಾಪತ್ರೆ ಮತ್ತಷ್ಟೂ ಬಿಗಡಾಯಿಸಿದ್ದು, ಇದನ್ನು ನೀಗಿಸಲಾಗದೇ ಮನನೊಂದು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಕಣ್ಣಿರು ಇಟ್ಟಿದ್ದಾರೆ.//////