Belagavi News In Kannada | News Belgaum

ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಬೆಳಗಾವಿಯ ಬಾಲಕಿಗೆ ಕಂಚಿನ ಪದಕ

ಬೆಳಗಾವಿ: ಹಳಿಯಾಳ ಕ್ರೀಡಾ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಬೆಳಗಾವಿಯ ಬಾಲಕಿ ಲಕ್ಷ್ಮೀ ಸಂಜಯ ಪಾಟೀಲ ಮೇ 26 ರಂದು ರಾಂಚಿ ಝಾರ್ಖಂಡ್ ದಲ್ಲಿ ನಡೆಯುತ್ತಿರುವ 15 ವರ್ಷ ವಯೋಮಿತಿ ಒಳಗಿನವರ ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ 54 ಕೆಜಿ ವಿಭಾಗದಲ್ಲಿ ಭಾಗವಹಿಸಿ ಕಂಚಿನ ಪದಕ ಪಡೆಯುವ ಮೂಲಕ ಬೆಳಗಾವಿ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

ಸಾಧನೆಗೈದ ಬಾಲಕಿಗೆ  ಶಾಲೆಯ ಆಡಳಿತ ಮಂಡಳಿ ಹಾಗೂ  ಗ್ರಾಮಸ್ಥರು ಅಭಿನಂದಿಸಿದ್ದಾರೆ. ಇಷ್ಟೇ ಅಲ್ಲದೆ ಲಕ್ಷ್ಮೀ ಪಾಟೀಲ ಹಲವು ಕಡೆ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಕೂಡ ಗೆದ್ದಿದ್ದಾಳೆ. ಅವರು ಇನ್ನೂ ರಾಷ್ಟ್ರಮಟ್ಟದಲ್ಲಿ, ಅಂತರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ನಮ್ಮ ದೇಶಕ್ಕೆ ಹೆಮ್ಮೆತರಲಿ ಎಂಬುವುದು ತಂದೆ ತಾಯಿಯ ಆಶಯವಾಗಿದೆ./////