Belagavi News In Kannada | News Belgaum

ಕನ್ನಡಿಗರ ಮೇಲೆ ಹಲ್ಲೆ ಮಾಡಿದ ಎಂಇಎಸ್‌ ಪುಂಡರ ವಿರುದ್ಧ ಕ್ರಮಕ್ಕೆ ಕರವೇ ಆಗ್ರಹ

ಗೋಕಾಕ: ಬೆಳಗಾವಿ ಧಾವಣೆ ಗ್ರಾಮದಲ್ಲಿ ಮದುವೆಯ ಮೆರವಣಿಗೆಯಲ್ಲಿ ಕನ್ನಡ ಹಾಡು ಹಚ್ಚಿದಕ್ಕೆ ಕನ್ನಡಿಗರ ಮೇಲೆ ಹಲ್ಲೆ ಮಾಡಿದ ಎಂ.ಇ.ಎಸ್. ಪುಂಡರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಘಟಪ್ರಭಾ ಇನ್ಸಪೆಕ್ಟರ್‌ ಮುಖಾಂರತ ಬೆಳಗಾವಿ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕರವೇ ರೈತ ಘಟಕದ ಜಿಲ್ಲಾಧ್ಯಕ್ಷ ರೆಹಮಾನ್ ಮೊಕಾಶಿ ಮಾತನಾಡಿ, ಬೆಳಗಾವಿಯ ಧಾವಣಿ ಗ್ರಾಮದಲ್ಲಿ ಮದುವೆಯ ಮೆರವಣಿಗೆ ವೇಳೆ ಕನ್ನಡ ಹಾಡು ಹಚ್ಚಿದರಿಂದ ಎಂ.ಇ.ಎಸ್. ಪುಂಡರು ಕನ್ನಡಿಗರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯವಾಗಿದೆ ಎಂದರು.

ಕನ್ನಡ ನೆಲದಲ್ಲಿ ಕನ್ನಡಗರ ಮೇಲೆ ಎಂಇಎಸ್‌ ಗುಂಡಾಗಳು ಹಲ್ಲೆ ಮಾಡಿರುವುದು ಪ್ರಜಾ ಪ್ರಭುತ್ವದಲ್ಲಿ ಅತಿ
ಕೆಟ್ಟ ಬೆಳವಣಿಗೆಯಾಗಿದ್ದು,  ಇದು ಏಳು ಕೋಟಿ ಕನ್ನಡಿಗರ ಮೇಲೆ ಹಲ್ಲೆಯಾದಂತೆ. ಈ ಕ್ರಮವನ್ನು ಕರ್ನಾಟಕ
ರಕ್ಷಣಾ ವೇದಿಕೆ, ಗೋಕಾಕ ತಾಲೂಕಾ ಘಟಕ ತೀರ್ವವಾಗಿ ಖಂಡಿಸುತ್ತದೆ. ಶೀಘ್ರವೇ  ಪೊಲೀಸ್‌ ಇಲಾಖೆ ಕನ್ನಡಿಗರ ಮೇಲೆ ಹಲ್ಲೆ ಮಾಡಿದ ಎಂಇಎಸ್‌ ಪುಂಡರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಲದೇ  ಹಲ್ಲೆ ಮಾಡಿದ ಗುಂಡಾಗಳನ್ನು ಕರ್ನಾಟಕದಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕರವೇ ಗೋಕಾಕ ತಾಲೂಕು ಅಧ್ಯಕ್ಷ ಶೆಟ್ಟೆಪ್ಪಾ ಗಾಡಿವಡ್ಡರ, ರವಿ ನಾವಿ, ಸಿದ್ದಪ್ಪಾ ಹಣಬರಟ್ಟಿ, ಸಂಜು ಗಾಡಿವಡ್ಡರ, ಸುನೀಲ್‌  ಬೆಳಮರಡಿ, ಶಂಕರ್ ಗಾಡಿವಡ್ಡರ, ಸುನೀಲ್ ಕೊಟಬಾಗಿ, ಸದಾ ಸನದಿ, ವಿಲಾಸ ಮುನ್ನೊಳಿ, ಆನಂದ ಧೂಮಾಳೆ, ನಾಗರಾಜ ಮುತ್ತೆಪ್ಪಗೋಳ, ಭೀಮಸಿ ಮಲ್ಲಾಪುರ ಸೇರಿದಂತೆ ಇತರ  ಕಾರ್ಯಕರ್ತರು ಉಪಸ್ಥಿತರಿದ್ದರು./////