Belagavi News In Kannada | News Belgaum

ರಾಕೇಶ್ ಟಿಕಾಯತ್ ಮೇಲಿನ ಹಲ್ಲೆ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ

ಗೋಕಾಕ: ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲಿನ ಹಲ್ಲೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು.

ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್ ಅವರು ನಮ್ಮ ರಾಜ್ಯದಲ್ಲಿ ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ ಅವರ ಮೇಲೆ ಬಂದಿರುವ ಆರೋಪಕ್ಕೆ ಸ್ಪಷ್ಟೀಕರಣ ನೀಡಲು ಬೆಂಗಳೂರಿಗೆ ಆಗಮಿಸಿದ್ದರು. ಸಭೆ ನಡೆಸುತ್ತಿರುವ ಸಂದರ್ಭದಲ್ಲಿ ಕಿಡಿಗೇಡಿಗಳು ಅವರ ಮೇಲೆ ಹಲ್ಲೆ ನಡೆಸಿ ಮಸಿ ಎರಚಿ ಅವಮಾನಿಸಿದ್ದು ಖಂಡನೀಯ. ಅಂತವರನ್ನು ಸರಕಾರ ಗೂಂಡಾ ಕಾಯ್ದೆಯಡಿ ಬಂಧಿಸಬೇಕು. ಕೋಡಿಹಳ್ಳಿ ಅವರ ಮೇಲೆ ಬಂದಿರುವ ಆರೋಪದ ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಶಿದ್ಲಿಂಗಪ್ಪ ಪೂಜೇರಿ, ಕುಮಾರ ತಿಗಡಿ, ಇರ್ಫಾನ ಜಮಾದಾರ, ಬಾಳೇಶ ತಡಸಿ, ರಮೇಶ ತಿಗಡಿ, ಬಾಹುಬಲಿ ಮೇಲ್ಮಟ್ಟಿ, ಮಾರುತಿ ಬೆಳಗಲಿ, ಮಲ್ಲೇಶ ನಾಯಕ, ಅರ್ಜುನ ಬೂಮನ್ನವರ, ಪರಶುರಾಮ ಮಳಲಿ, ಭೀಮಶಿ ಭಗಟಿ, ಮಾಳಪ್ಪ ಭಗಟಿ, ಬಸವರಾಜ ಕಡಕೋಳ, ಮುತ್ತಪ್ಪ ಅಗ್ನಪ್ಪನವರ ಸೇರಿದಂತೆ ಅನೇಕರು ಇದ್ದರು.//////