Belagavi News In Kannada | News Belgaum

ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಸಂವಾದ ವೀಕ್ಷಿಸಿದ ಶಾಸಕ ರಮೇಶ ಜಾರಕಿಹೊಳಿ

ಗೋಕಾಕ: ಪ್ರಧಾನಿ ನರೇಂದ್ರ ಮೋದಿಯವರ ನೇತ್ರತ್ವದ ಕೇಂದ್ರ ಸರಕಾರ ಕಿಸಾನ್ ಸಮ್ಮಾನ ನಿಧಿ ಯೋಜನೆಯ 11ನೇ ಕಂತಿನ ಹಣ ವರ್ಗಾವಣೆ ಉದ್ಧೇಶಿಸಿ ಪ್ರಧಾನಿ ಮೋದಿಯವರು ನಡೆಸಿದ ವಿಡಿಯೋ ಕಾನ್ಫರೇನ್ಸ್ ವೀಕ್ಷಣೆ ಕಾರ್ಯಕ್ರಮವನ್ನು ಶಾಸಕ ರಮೇಶ ಜಾರಕಿಹೊಳಿ ಅವರು ಕಾರ್ಯಕರ್ತರೊಂದಿಗೆ ವೀಕ್ಷಿಸಿದರು.

ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲಗಳ ರೈತ ಮೋರ್ಚಾ ವತಿಯಿಂದ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ಪಕ್ಷದ ನೂರಾರು ಕಾರ್ಯಕರ್ತರೊಂದಿಗೆ ವಿಕ್ಷಣೆ ನಡೆಸಿದರು.

ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ್‌,  ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಉಪಾಧ್ಯಕ್ಷ ಬಸವರಾಜ ಆರೇನ್ನವರ, ಮುಖಂಡರುಗಳಾದ ಅಬ್ಬಾಸ ದೇಸಾಯಿ, ಶಶಿಧರ ದೇಮಶೆಟ್ಟಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ನಗರಸಭೆ ಸದಸ್ಯ ಪ್ರಕಾಶ ಮುರಾರಿ, ಬಾಬು ಮುಳಗುಂದ, ಮಂಜು ಪ್ರಭುನಟ್ಟಿ, ಬಸವರಾಜ ಹಿರೇಮಠ, ತವನರಾಜ ಬೆನ್ನಾಡಿ, ಲಕ್ಕಪ್ಪ ತಹಶೀಲ್ದಾರ, ಲಕ್ಷ್ಮಣ ತಳ್ಳಿ, ಮಲ್ಲಿಕಜಾನ ತಳವಾರ, ಕಿರಣ ಡಮಾಮಗರ, ಶ್ರೀದೇವಿ ತಡಕೋಡ, ವಿರೇಂದ್ರ ಎಕ್ಕೇರಿಮಠ, ಬಿಜೆಪಿ ರೈತ ಮೋರ್ಚಾ ಸೇರಿದಂತೆ ವಿವಿಧ ಮೋರ್ಚಾ ಪದಾಧಿಕಾರಿಗಳು ಇದ್ದರು.//////