Belagavi News In Kannada | News Belgaum

ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿನಾಯಿಗಳ ದಾಳಿ

ಬೆಂಗಳೂರು: ಈಗಾಗಲೇ ಹಲವು ಬಾರಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ದಾಳಿಗೆ ಸಾರ್ವಜನಿಕರು, ಮಕ್ಕಳು ಗಾಯಗೊಂಡಿದ್ದಾರೆ. ಹೀಗಿದ್ದೂ ಬೀದಿ ನಾಯಿಗಳು ಇರುವಂತ ಸ್ಥಳಗಳಲ್ಲಿ ನಿಯಂತ್ರಣ ಕ್ರಮ ಕೈಗೊಳ್ಳಬೇಕಾದಂತ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯದಿಂದ, ಈಗ 3 ವರ್ಷದ ಬಾಲಕನೊಬ್ಬ ಬೀದಿ ನಾಯಿ ದಾಳಿಗೆ ಒಳಗಾಗುವಂತೆ ಆಗಿದೆ.
ಬೆಂಗಳೂರಿನ ಟಿ ದಾಸರಹಳ್ಳಿಯ ಎಜಿಬಿ ಲೇಔಟ್ ನಲ್ಲಿ 3 ವರ್ಷದ ಬಾಲಕ ರವಿಕುಮಾರ್ ಎಂಬಾತ ಆಟವಾಡುತ್ತಿದ್ದಾಗ, ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿವೆ. ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡ ಬಾಲಕನನ್ನು ವಿಕ್ಟೋರಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಯಾದಗಿರಿ ಮೂಲಕ ಬೀರಪ್ಪ-ಚಂದಮ್ಮ ದಂಪತಿಯ ಪುತ್ರ ರವಿಕುಮಾರ್ ಆಗಿದ್ದಾರೆ.
ಟಿ.ದಾಸರಹಳ್ಳಿಯ ಎಜಿಬಿ ಲೇಔಟ್ ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದರೂ ಬಿಬಿಎಂಪಿ ಅಧಿಕಾರಿಗಳು ನಿಯಂತ್ರಣ ಕ್ರಮ ಕೈಗೊಂಡಿಲ್ಲ. ಹೀಗಾಗಿಯೇ ಇಂದು 3 ವರ್ಷದ ಬಾಲಕ ರವಿಕುಮಾರ್ ದಾಳಿಗೆ ಒಳಗಾಗುವಂತೆ ಆಗಿದೆ ಎಂಬುದಾಗಿ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ./////