Belagavi News In Kannada | News Belgaum

ಇತಿಹಾಸ ಬರೆದ ಮಹಿಳಾ ಶೂಟರ್ಸ್: ಭಾರತಕ್ಕೆ ಚಿನ್ನದ ಪದಕ

ಬಾಕು: ISSF ವಿಶ್ವಕಪ್ 2022ರಲ್ಲಿ ಭಾರತ ಮಹಿಳಾ ಶೂಟರ್ ಗಳು ಇತಿಹಾಸ ಬರೆದಿದ್ದು, ಇದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.
ಅಜೆರ್ಬೈಜಾನ್ ನ ಬಾಕುನಲ್ಲಿ ನಡೆಯುತ್ತಿರುವ  ಅಂತರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಶನ್) ವಿಶ್ವಕಪ್ 2022ರಲ್ಲಿ ಭಾರತ ಮಹಿಳಾ ಶೂಟರ್ ಗಳಾದ ಎಲವೆನಿಲ್ ವಲರಿವನ್, ಶ್ರೇಯಾ ಅಗರ್ವಾಲ್ ಮತ್ತು ರಮಿತಾ ಅವರು ಚಿನ್ನದ ಪದಕ ಜಯಿಸಿದ್ದಾರೆ.
10 ಮೀಟರ್ ಏರ್ ರೈಫಲ್ ಮಹಿಳಾ ವಿಭಾಗದಲ್ಲಿ ಭಾರತ ಮಹಿಳಾ ತಂಡ ಈ ಸಾಧನೆ ಮಾಡಿದ್ದು, ಇದು 10 ಮೀಟರ್ ಏರ್ ರೈಫಲ್ ಶೂಟಿಂಗ್ ವಿಭಾಗದಲ್ಲಿ ಭಾರತದ ಮೊದಲ ಚಿನ್ನದ ಪದಕ ಸಾಧನೆಯಾಗಿದ್ದು, ಅಂತೆಯೇ ಇದು ಬಾಕುದಲ್ಲಿ ನಡೆಯುತ್ತಿರುವ ISSಈ ವಿಶ್ವಕಪ್‌ನಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕವಾಗಿದೆ. ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ಮೂವರು ಶೂಟರ್ ಗಳು ಡೆನ್ಮಾರ್ಕ್ ತಂಡವನ್ನು 17-5 ಅಂತರದಿಂದ ಸೋಲಿಸಿದರು. ಟೋಕಿಯೊ ಒಲಿಂಪಿಯನ್ ಎಲವೆನಿಲ್ ವಲರಿವನ್ ಅವರು ಫೈನಲ್‌ನಲ್ಲಿ ಎಲ್ಲಾ 11 ಸರಣಿಗಳಲ್ಲಿ 10 ಕ್ಕಿಂತ ಹೆಚ್ಚು ಗುರಿಗಳನ್ನು ಯಶಸ್ವಿಯಾಗಿ ಭೇದಿಸಿದರು.
ಭಾರತದ ಈ ಮೂವರು ಶೂಟರ್ ಗಳೂ ಈ ಮೊದಲು ಅರ್ಹತಾ ಹಂತ 1 ರಲ್ಲಿ ದಕ್ಷಿಣ ಕೊರಿಯಾಕ್ಕಿಂತ 944.4 – 0.2 ಅಂಕಗಳ ಅಂತರದಲ್ಲಿ ಅಗ್ರಸ್ಥಾನದಲ್ಲಿದ್ದರು.//////