Belagavi News In Kannada | News Belgaum

ಡೀಸೆಲ್ ಸಿಗದೆ ಗ್ರಾಹಕರ ಪರದಾಟ: ಬಂಕ್‌ಗಳಲ್ಲಿ ನೋ ಸ್ಟಾಕ್ ಬೋರ್ಡ್

ಚಿಕ್ಕಬಳ್ಳಾಪುರ: ಬೇಸಿಗೆಯಲ್ಲಿ ನೀರಿಗೆ ಅಭಾವ ಆಗೋದು ಸಹಜ, ಆದರೀಗ ರಾಜ್ಯದಲ್ಲಿ ಡೀಸೆಲ್ ಅಭಾವ ಶುರುವಾಗಿದೆ.
ರಾಜ್ಯದ ಬಹುತೇಕ ಭಾರತ್ ಪೆಟ್ರೋಲಿಯಂ ಬಂಕ್‌ಗಳಲ್ಲಿ ಡೀಸೆಲ್ ಕೊರತೆ ಎದುರಾಗಿದೆ. ಕಳೆದ 1 ವಾರದಿಂದ ಸಮಸ್ಯೆ ಉಂಟಾಗುತ್ತಿದ್ದು, ಚಿಕ್ಕಬಳ್ಳಾಪುರ ನಗರದ ಬಿಬಿ ರಸ್ತೆಯ ಬಿಪಿಸಿಎಲ್ ಬಂಕ್‌ನಲ್ಲಿ ಡೀಸೆಲ್ ನೋ ಸ್ಟಾಕ್ ಬೋರ್ಡ್ ಕಾಣುತ್ತಿವೆ.
ಬಹುತೇಕ ಬಿಪಿಸಿಎಲ್ ಬಂಕ್‌ಗಳಲ್ಲಿ ಇದೇ ಸಮಸ್ಯೆ ಎದುರಾಗಿದೆ. ಇದ್ರಿಂದ ಅಕ್ಕ ಪಕ್ಕದ ಇಂಡಿಯನ್ ಆಯಿಲ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಸೇರಿದಂತೆ ಖಾಸಗಿ ಬಂಕ್‌ಗಳತ್ತ ಗ್ರಾಹಕರು ಮುಖ ಮಾಡಿದ್ದಾರೆ. ಅಲ್ಲದೇ ಡೀಸೆಲ್  ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದರಿಂದ ಕೆಲ ಬಂಕ್‌ಗಳಲ್ಲಿ ಡೀಸೆಲ್ ಸಿಗದೇ ಗ್ರಾಹಕರು ಪರದಾಡುವಂತಾಗಿದೆ./////