Belagavi News In Kannada | News Belgaum

ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಅಧ್ಯಯನ ಶೀಲರಾಗಿ: ರಾಜು ಗೋಳಸಾರ

ಮಂಗಳವಾರ ನಗರದ ಲಕ್ಷ್ಮೀ ಏಜ್ಯುಕೇಷನ್ ಟ್ರಸ್ಟ್‌ ಸಭಾ ಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಆರೋಗ್ಯ ಇಲಾಖೆ ಹಾಗೂ ಶ್ರೀ ಲಕ್ಷ್ಮಣರಾವ್‌ ಜಾರಕಿಹೊಳಿ ಪದವಿ ಮಹಾವಿದ್ಯಾಲಯದ ಎನ್‍ಎಸ್‍ಎಸ್ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನ ತಂಬಾಕು ಸೇವಿಸುತ್ತಿದ್ದಾರೆ. ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ವಿದ್ಯಾರ್ಥಿಗಳು ಇಂತಹ ದುಶ್ಚಟಗಳಿಂದ ದೂರವಿದ್ದು ಪ್ರಯತ್ನಶೀಲರಾಗಿ ತಮ್ಮ ಗುರಿಯನ್ನು ಮುಟ್ಟಿ ಸಮಾಜದಲ್ಲಿ ಗೌರವನ್ನು ಸಂಪಾಧಿಸಬೇಕು. ದಿನನಿತ್ಯ ಬಳಕೆಯ ಕಾನೂನುಗಳನ್ನು ತಿಳಿದು ಅವುಗಳ ಪಾಲನೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ್ ಜಾರಕಿಹೊಳಿ ವಹಿಸಿದ್ದರು. ವೇದಿಕೆ ಮೇಲೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸಿ ಡಿ ಹುಕ್ಕೇರಿ, ಪ್ರಾಚಾರ್ಯ ಐ ಎಸ್ ಪವಾರ, ಡಾ. ಆರ್ ಆರ್ ಅಂಟಿನ, ಡಾ. ಶ್ರೀದೇವಿ ಪೂಜೇರಿ, ಮಲ್ಲವ್ವ ನಾಯ್ಕ ಇದ್ದರು.//////