Belagavi News In Kannada | News Belgaum

ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋದ ಯುವಕ

ಹೈದರಾಬಾದ್: ಫ್ಲೋರಿಡಾದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದ ತೆಲಂಗಾಣದ 25 ವರ್ಷದ ವಿದ್ಯಾರ್ಥಿಯೊಬ್ಬ ದೋಣಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ.
ಮೃತ ದುರ್ದೈವಿಯನ್ನು ಯಶವಂತ್ ಕುಮಾರ್ ಎಂದು ಗುರುತಿಸಲಾಗಿದ್ದು, ಇವರು ರಾಜಣ್ಣ-ಸಿರ್ಸಿಲ್ಲಾ ಜಿಲ್ಲೆಯ ವೇಮುಲವಾಡ ನಿವಾಸಿಯಾಗಿದ್ದಾರೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಹೈದರಾಬಾದ್‍ನಲ್ಲಿ ಬಿಟೆಕ್ ಮುಗಿಸಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು.
ಭಾನುವಾರ ಯಶವಂತ್ ತನ್ನ ಸ್ನೇಹಿತರಾದ ಚರಣ್, ಮೈಸೂರ, ಶ್ರೀಕರ್ ಮತ್ತು ರ್ವರಿ ಅವರೊಂದಿಗೆ ಪಾಂಟೂನ್ ಬೋಟ್ ನಿಂದ ಪಶ್ಚಿಮ ಫ್ಲೋರಿಡಾ ಕ್ರ್ಯಾಬ್ ದ್ವೀಪಕ್ಕೆ ಹೊರಟಿದ್ದರು. ಈ ಮಧ್ಯೆ ದೋಣಿಯಲ್ಲಿ ಸಮಸ್ಯೆ ಕಂಡು ಬಂದಿದ್ದು, ನಂತರ ಕೆಲವರು ಪ್ರಾಣವನ್ನು ಉಳಿಸಿಕೊಳ್ಳಲು ನೀರಿಗೆ ಹಾರಿದ್ದಾರೆ.
ಈ ವೇಳೆ ಸಮುದ್ರದ ಅಲೆಯಲ್ಲಿ ಯಶವಂತ್ ಕುಮಾರ್ ಕೊಚ್ಚಿ ಹೋಗಿದ್ದಾರೆ. ನೀರಿನಲ್ಲಿ ಮುಳುಗಿದ್ದ ಉಳಿದ ನಾಲ್ವರನ್ನು ಒಕಲೂಸಾ ಕೌಂಟಿ ಶೆರಿಫ್ಸ್ ಆಫೀಸ್ (ಒಸಿಎಸ್‍ಒ ಹಡಗು) ಎಫ್‍ಡಬ್ಲೂ ಹಡಗು ಮತ್ತು ಯುಎಸ್‍ಸಿಜಿ ಹಡಗಿನ ಮೂಲಕ ರಕ್ಷಿಸಲಾಗಿದೆ. ಆದರೆ ಅಲೆಗಳು ಹೆಚ್ಚಾಗಿದ್ದ ಕಾರಣ ಯಶವಂತ್ ದೋಣಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಘಟನೆ ವೇಳೆ ನಾಪತ್ತೆಯಾಗಿದ್ದ ಯಶವಂತ್ ಮೃತದೇಹ ಸೋಮವಾರ ರಾತ್ರಿ ಪತ್ತೆಯಾಗಿದ್ದು, ಅಧಿಕಾರಿಗಳು ಅದನ್ನು ವಶಪಡಿಸಿಕೊಂಡಿದ್ದಾರೆ./////