Belagavi News In Kannada | News Belgaum

ಯಲ್ಲಮ್ಮನಗುಡ್ಡದಲ್ಲಿ ಜೆಸಿಬಿ ಆರ್ಭಟ: ಲಾಂಬಾಣಿ ಜನಕ್ಕೆ ಸಂಕಷ್ಟ

ಬೆಳಗಾವಿ: ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡದಲ್ಲಿ ಏಕಾಏಕಿ ಜೆಸಿಬಿಯ ಆರ್ಭಟ ನಡೆದಿದ್ದು, ಶೆಡ್ಡು ನಿರ್ಮಿಸಿಕೊಂಡು ಜೀವನ ನಡೆಸುತ್ತಿರುವ ಬಡಪಾಯಿ ಜನರ ಮೇಲೆ ದಬ್ಬಾಳಿಕೆ ನಡೆದಿದೆ.
ಶೆಡ್ಡುಗಳನ್ನು ಜೆಸಿಬಿ ಮೂಲಕ ಒಡೆದು ಹಾಕಿ ಖಾಲಿ ಮಾಡಿಸುತ್ತಿರುವ ಅಧಿಕಾರಿಗಳ ವರ್ತನೆ ವಿರುದ್ಧ ಜನ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಮನೆಗಳನ್ನು ಕಳೆದುಕೊಂಡು ಗೋಳಾಡುತ್ತಿರುವ ಯಲ್ಲಮ್ಮಗುಡ್ಡದ ಬಡಪಾಯಿ ಜನರು ಮುಂದೇನು ಎಂದು ತಲೆ ಮೇಲೆ ಕೈ ಇಟ್ಟುಕೊಳ್ಳುವಂತಾಗಿದೆ.
ಯಾಕೇ ಏಕಾಏಕಿ ಖಾಲಿ ಮಾಡಿಸುತ್ತಿರಿ ಎಂದು ಕೇಳಲು ಹೋಗುವ ಬಡಪಾಯಿ ಜನರಿಗೆ ಲಾಠಿ ತೋರಿಸಿ ಸಿಪಿಐ ಮಂಜುನಾಥ ನಡುವಿನಮನಿ ದೂರ ಸರಿಸುತ್ತಿದ್ದಾರೆ. ದಿಕ್ಕು ತೋಚದಂತೆ ಆಗಿರುವ ಶಡ್ಡುಗಳನ್ನು ನಿರ್ಮಿಸಿಕೊಂಡು ಮನೆ ಕಟ್ಟಿಕೊಂಡ ಬಡಪಾಯಿಗಳಿಗೆ ಈಗ ಆಸರೆ ಇಲ್ಲದಂತಾಗಿದೆ. ಸುಮಾರು ವರ್ಷಗಳಿಂದ ಯಲ್ಲಮ್ಮಗುಡ್ಡದ ಮೇಲೆ ವಾಸಿಸುತ್ತಿರುವ ಲಂಬಾಣಿ ಜನ ಈಗ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.///////