ಸರ್ಕಾರಿ ಕಚೇರಿಯಲ್ಲಿ ಬರ್ತ್ ಡೇ ಆಚರಣೆ: ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಡಿಸಿ

ಬೆಳಗಾವಿ: ಖಾನಾಪೂರ ತಹಶೀಲ್ದಾರ್ ಕಚೇರಿಯಲ್ಲಿನ ಎಫ್ ಡಿಎ ಓರ್ವ ಬರ್ತ್ ಡೇಯನ್ನು ಕಚೇರಿಯಲ್ಲಿಯೇ ಆಚರಿಸಿದ ಘಟನೆ ನಡೆದಿದೆ.
ಖಾನಾಪೂರ ತಹಶೀಲ್ದಾರ್ ಕಚೇರಿ ಎಫ್ ಡಿಎ ರಮೇಶ್ ಕೋಲಕಾರ ಎಂಬಾತನ ಬರ್ತ್ ಡೇಯನ್ನು ಅಲ್ಲಿನ ಸಿಬ್ಬಂದಿಗಳು ಕಚೇರಿಯಲ್ಲಿ ಆಚರಿಸಿರುವ ಪೋಟೊಗಳು ಇದೀಗ ವೈರಲ್ ಆಗಿದೆ. ಅಲ್ಲದೆ ಸಿಬ್ಬಂದಿಗಳಿಗೆ ಸರ್ಕಾರದ ಆದೇಶ ಮತ್ತು ಸೂಚನೆಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬುದು ಸ್ಪಷ್ಟವಾಗಿದೆ.
ಸರ್ಕಾರಿ ಕಚೇರಿಯಲ್ಲಿನ ಸಿಬ್ಬಂದಿ ಮತ್ತು ಅಧಿಕಾರಿಗಳು ಸರ್ಕಾರದ ಆದೇಶ ಪಾಲನೆ ಮಾಡಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಅಷ್ಟೇ ಅಲ್ಲದೆ ಏಜೆಂಟರು ತಮ್ಮ ಬರ್ತ್ ಡೇ ಯನ್ನು ಸಂಭ್ರಮದಿಂದ ಆಚರಿಸುವಂತ ವಾತಾವರಣ ನಿರ್ಮಾಣವಾಗಿರುವುದು ವಿಪರ್ಯಾಸ.
ಈ ಘಟನೆ ಬಗ್ಗೆ ಬೆಳಗಾವಿ ಡಿಸಿ ನಿತೇಶ್ ಪಾಟೀಲ ಅವರು ಖಾನಾಪೂರ ತಹಶೀಲ್ದಾರ್ ಕಡೆಯಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಆ ಸಿಬ್ಬಂದಿ ಕಾನೂನು ಕ್ರಮ ಜರುಗಿಸುವುದಾಗಿ ತಿಳಿದು ಬಂದಿದೆ./////