Belagavi News In Kannada | News Belgaum

ಜನರ ಭಾವನೆ ಉದ್ರೇಕಗೊಳಿಸುವುದು, ಸಮಾಜದಲ್ಲಿ ಗೊಂದಲ ಉಂಟು ಮಾಡುವುದು ಕಾಂಗ್ರೆಸ್‍ನ ಕೀಳುಮಟ್ಟದ ಟೂಲ್ ಕಿಟ್ ಟೆರರಿಸಮ್ ಎಂದು ಕುಡಚಿ ಶಾಸಕ ಪಿ.ರಾಜೀವ್ ಕಿಡಿಕಾರಿದ್ದಾರೆ.

ಪಠ್ಯಕ್ರಮದ ವಿಷಯದಲ್ಲಿ ಜನರ ಭಾವನೆ ಉದ್ರೇಕಗೊಳಿಸುವುದು, ಸಮಾಜದಲ್ಲಿ ಗೊಂದಲ ಉಂಟು ಮಾಡುವುದು ಕಾಂಗ್ರೆಸ್‍ನ ಕೀಳುಮಟ್ಟದ ಟೂಲ್ ಕಿಟ್ ಟೆರರಿಸಮ್ ಎಂದು ಕುಡಚಿ ಶಾಸಕ ಪಿ.ರಾಜೀವ್ ಕಿಡಿಕಾರಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಶಾಸಕ ಪಿ.ರಾಜೀವ್ ಮುಗ್ಧ ಜನರು, ಸಾಹಿತಿಗಳನ್ನು ಉದ್ರೇಕಗೊಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಹಿಟ್ ಆಂಡ್ ರನ್ ಎಂಬುವುದು ಕಾಂಗ್ರೆಸ್‍ನ ಸಂಸ್ಕøತಿಯಾಗಿದೆ. ಬಿಟ್ ಕ್ವಾಯಿನ್, ಸಾಹಿತ್ಯದ ವಿಷಯ ತೆಗೆದುಕೊಳ್ಳುತ್ತಾರೆ. ಅದು ಪೂರ್ಣಗೊಳ್ಳವುದು ಕಡಿಮೆ ಹೀಗಾಗಿ ಈಗ ಪಠ್ಯ ಕ್ರಮದ ಬಗ್ಗೆ ಅಪಸ್ವರ ಎತ್ತಿರುವುದು ಕಾಂಗ್ರೆಸ್‍ನ ಕೀಳು ಮಟ್ಟದ ಟೂಲ್ ಕಿಟ್ ಟೆರರಿಸಮ್ ಎಂದು ಗುಡುಗಿದರು.
ಬರಗೂರು ರಾಮಚಂದ್ರಪ್ಪನವರ ಸೈದ್ಧಾಂತಿಕ ವಿಚಾರ ಏನೇ ಇದ್ದರೂ ಅವರ ಅಕ್ಷರಗಳನ್ನು ಗೌರವಿಸುತ್ತೇನೆ. ಆದರೆ ಅವರ ಮೊಂಡು ವಾದ ಸರಿಯಲ್ಲ. ರೋಹಿತ ಚಕ್ರತೀರ್ಥ ಪಠ್ಯಕ್ರಮದ ಸಮಿತಿಯನ್ನು ವಿರೋಧ ಮಾಡುತ್ತಿರುವ ಬರಗೂರು ರಾಮಚಂದ್ರಪ್ಪನವರು ಸಿದ್ದರಾಮಯ್ಯನವರ ಸರಕಾರದಲ್ಲಿ ಏನೂ ಮಾಡಿದರು ಎನ್ನುವುದನ್ನು ಒಮ್ಮೆ ನೆನಪಿಸಿಕೊಳ್ಳಲಿ. ಬಸವಣÐವರ ವಚನಗಳನ್ನು ಪಠ್ಯಕ್ರಮದಲ್ಲಿ ಕೈ ಬಿಟ್ಟಿಲ್ಲ. ಬರಗೂರು ರಾಮಚಂದ್ರಪ್ಪನವರ ಪಠ್ಯಕ್ರಮದಲ್ಲಿ ಕರ್ನಾಟಕದಲ್ಲಿ ಬ್ರಿಟಿμï ಆಡಳಿತದ ವಿರೋಧಗಳು ಎಂಬ ವಿಷಯದಲ್ಲಿ ಕೇವಲ ಟಿಪ್ಪು ಸುಲ್ತಾನ್, ಹೈದರಾಲಿ ಸೇರಿದಂತೆ ಕೆಲವೇ ಕೆಲವು ಜನರ ವಿಷಯ ಹಾಕಿದ್ದರು. ಯಾಕೆ ಕಿತ್ತೂರು ರಾಣಿ ಚೆನ್ನಮ್ಮ, ವೀರಮದಕರಿ ಅಂಥವರ ಹೆಸರನ್ನು ಸೇರಿಸುವ ಪ್ರಯತ್ನ ಮಾಡಲಿಲ್ಲ ಎಂದು ಪಿ.ರಾಜೀವ್ ಪ್ರಶ್ನಿಸಿದರು.

ಬರಗೂರು ರಾಮಚಂದ್ರಪ್ಪನವರ ಸೈದ್ಧಾಂತಿಕ ವಿಚಾರ ಏನೇ ಇದ್ದರೂ ಅವರ ಅಕ್ಷರಗಳನ್ನು ಗೌರವಿಸುತ್ತೇನೆ. ಆದರೆ ಅವರ ಮೊಂಡು ವಾದ ಸರಿಯಲ್ಲ. ರೋಹಿತ ಚಕ್ರತೀರ್ಥ ಪಠ್ಯಕ್ರಮದ ಸಮಿತಿಯನ್ನು ವಿರೋಧ ಮಾಡುತ್ತಿರುವ ಬರಗೂರು ರಾಮಚಂದ್ರಪ್ಪನವರು ಸಿದ್ದರಾಮಯ್ಯನವರ ಸರಕಾರದಲ್ಲಿ ಏನೂ ಮಾಡಿದರು ಎನ್ನುವುದನ್ನು ಒಮ್ಮೆ ನೆನಪಿಸಿಕೊಳ್ಳಲಿ. ಬಸವಣÐವರ ವಚನಗಳನ್ನು ಪಠ್ಯಕ್ರಮದಲ್ಲಿ ಕೈ ಬಿಟ್ಟಿಲ್ಲ. ಬರಗೂರು ರಾಮಚಂದ್ರಪ್ಪನವರ ಪಠ್ಯಕ್ರಮದಲ್ಲಿ ಕರ್ನಾಟಕದಲ್ಲಿ ಬ್ರಿಟಿμï ಆಡಳಿತದ ವಿರೋಧಗಳು ಎಂಬ ವಿಷಯದಲ್ಲಿ ಕೇವಲ ಟಿಪ್ಪು ಸುಲ್ತಾನ್, ಹೈದರಾಲಿ ಸೇರಿದಂತೆ ಕೆಲವೇ ಕೆಲವು ಜನರ ವಿಷಯ ಹಾಕಿದ್ದರು. ಯಾಕೆ ಕಿತ್ತೂರು ರಾಣಿ ಚೆನ್ನಮ್ಮ, ವೀರಮದಕರಿ ಅಂಥವರ ಹೆಸರನ್ನು ಸೇರಿಸುವ ಪ್ರಯತ್ನ ಮಾಡಲಿಲ್ಲ ಎಂದು ಪಿ.ರಾಜೀವ್ ಪ್ರಶ್ನಿಸಿದರು.ಮುಂದುವರಿದು ಮಾತನಾಡಿದ ಪಿ.ರಾಜೀವ್ ಸಿಂಧೂ ಸಂಸ್ಕøತಿಯ ಪಾಠ ಕೈಬಿಟ್ಟ ಬರಗೂರು ರಾಮಚಂದ್ರಪ್ಪನವರು ನೆಹರೂ ಪಾಠ ಎಂದು ಸೇರಿಸಿ ಸೋನಿಯಾ ಗಾಂಧಿ, ಸಿದ್ದರಾಮಯ್ಯನವರ ಮನವೊಲಿಸುವ ಕೆಲಸ ಮಾಡಿದ್ದರು. ಅದನ್ನು ರೋಹಿತ ಚಕ್ರತೀರ್ಥ ಮರು ಸೇರ್ಪಡೆ ಮಾಡಿದ್ದಾರೆ. 8ನೇ ತರಗತಿಯಲ್ಲಿ ಧರ್ಮಗಳು ಅಂತಾ ಪಾಠ ಇತ್ತು, ಕ್ರಿಶ್ಚಿಯನ್ ಧರ್ಮ, ಇಸ್ಲಾಂ ಧರ್ಮ, ಕೊನೆಯಲ್ಲಿ ಜೈನ್ ಧರ್ಮ, ಬೌದ್ಧ ಧರ್ಮಗಳು ಅಂತಾ ಇತ್ತು. ಆದ್ರೆ ಎಲ್ಲಿಯೂ ಹಿಂದು ಧರ್ಮ ಇದೇ ಅಂತಾ ಹೇಳಿಯೇ ಇಲ್ಲ. ನರೇಂದ್ರ ಮೋದಿ ಪ್ರಧಾನಮಂತ್ರಿ ಆದಾಗ ಸಾಹಿತಿಗಳು ಪ್ರಶಸ್ತಿ ವಾಪಸ್ ಮಾಡಿದ್ರು. ಎಲ್ಲಾ ಸಾಹಿತಿಗಳು ಸತ್ಯಾಸತ್ಯೆ ಪರಿಶೀಲನೆ ಮಾಡಿ ವಿರೋಧಿಸಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಗ್ರಾಮೀಣ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ, ನಗರ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ದಾದಾಗೌಡಾ ಬಿರಾದಾರ, ಮುರುಘೇಂದ್ರಗೌಡ ಪಾಟೀಲ ಸೇರಿ ಇನ್ನಿತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು

 

 

* ದೇಶಕ್ಕೆ ಮತ್ತು ರಾಜ್ಯ ಸಾಹಿತಿಗಳು ಮತ್ತು ಚಿಂತಕರ ಕೊಡುಗೆ ಅಪಾರವಾಗಿದೆ. ಸೃಜನಶೀಲತೆಯನ್ನು ಹೊಂದಿರುವ ಸಾಹಿತಿಗಳು ಭಾವುಕ ಮನಸ್ಸಿನವರು ಮತ್ತು ಜನಪರ ಸಂವೇದನ ಶೀಲರು.

* ಕೇವಲ ಸುಳ್ಳನ್ನೇ ನೂರಾರು ಬಾರಿ ಹೇಳುವುದರ ಮೂಲಕ ಅದನ್ನೇ ಸತ್ಯವೆಂಬಂತೆ ಜನರನ್ನು ದಾರಿ ತಪ್ಪಿಸುವುದು ಕಾಂಗ್ರೆಸ್ಸಿನ ಟೂಲ್‌ಕಿಟ್‌ನ ಒಂದು ಭಾಗವಾಗಿದೆ.

* ಈ ನಾಡಿನ ಸಾಹಿತಿಗಳು, ಚಿಂತಕರು ಮತ್ತು ಸ್ವಾಮಿಜಿಗಳಿಗೆ ಪಠ್ಯ ಪುಸ್ತಕ ಕೇಸರೀಕರಣ ಎಂಬ ಆಧಾರ ರಹಿತ ಅತೀ ಸುಳ್ಳನ್ನು ಹುಟ್ಟು ಹಾಕುವುದರ ಮೂಲಕ ತನ್ನ ಕೀಳು ರಾಜಕಾರಣವನ್ನು ಮುಂದುವರೆಸಿದೆ.

* ಕಾಂಗ್ರೆಸ್ಸಿನ ಈ ಟೂಲ್‌ಕಿಟ್‌ ಭಯೋತ್ಪಾದನೆಗೆ ಬಲಿಯಾಗದೇ ಸತ್ಯಾಸತ್ಯತೆಯನ್ನು ಅರಿತುಕೊಳ್ಳಬೇಕೆಂದು ಈ ನಾಡಿನ ಎಲ್ಲ ಜನರಲ್ಲಿ ವಿನಂತಿಸುತ್ತೇನೆ.

* 2014-I5 ರಲ್ಲಿ ಬಡಂಬಡಿಪ್ಪಾಯ್ ಪಠ್ಯ ಮಸ್ತಕ ಪರಿಷ್ಕರಣಾ ಸಮಿತಿ ಪಠ್ಯಕ್ರಮವನ್ನು ನೀಡಿತ್ತು. ನಂತರದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಬರಗೂರು ರಾಮಚಂದ್ರ ಸಮಿತಿ ಸ್ಥಾಪಿಸಿತು.

* ಬರಗೂರು ರಾಮಚಂದ್ರಪ್ಪರವರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಈ ನಾಡಿಗೆ ಅವರ ಅಕ್ಷರ ಸೇವೆಯನ್ನು ನಾನು ಗೌರವಿಸುತ್ತೇನೆ. ಆದರೆ ಅಂದಿನ ಸರ್ಕಾರವನ್ನು ಮೆಚ್ಚಿಸಲಿಕ್ಕಾಗಿ ಅವರು ಕೈಗೊಂಡಿರುವ ತೀರ್ಮಾನಗಳು ದೇಶದ ಅಸ್ಮಿತೆಗೆ ಹೊಡೆತವನ್ನು ಕೊಟ್ಟಿವೆ ಎಂದು ಹೇಳದೇ ವಿಧಿಯಿಲ್ಲ.

* ರೋಹಿತ್ ಚಕ್ರತೀರ್ಥ ಸಮಿತಿ ಕುವೆಂಪು ರವರನ್ನು ಅವಮಾನಿಸಿದೆ ಎಂದು ಆರೋಪಿಸಲಾಗುತ್ತಿದೆ. ಆದರೆ ಬರಗೂರು ರಾಮಚಂದ್ರಪ್ಪ ಸಮಿತಿ ರಾಷ್ಟ್ರಕವಿ ಕುವೆಂಪು ರವರ ಎಂಟು ಕೃತಿಗಳನ್ನು ಏಳಕ್ಕೆ ಇಳಿಸಿತ್ತು.

* ರೋಹಿತ್ ಚಕ್ರತೀರ್ಥರವರು ಕುವೆಂಪುರವರ ಹತ್ತು ಕೃತಿಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಿದ್ದಾರೆ. ಭಗತ್ ಸಿಂಗ್‌ರವರ ಪಠ್ಯವನ್ನು ಕೈಬಿಡಲಾಗಿದೆಯೆಂದು ಸುಳ್ಳನ್ನು ಹರಡಲಾಗುತ್ತಿದೆ. ಆದರ ಭಗತ್‌ಸಿಂಗ್‌ರವರೊಂದಿಗೆ ನೇಣಿಗೆ ಶರಣಾದ ರಾಜ್‌ಗುರು ಮತ್ತು ಸುಖದೇವ್‌ರವರ ವಿವರವನ್ನೂ ಸೇರಿಸಲಾಗಿದೆ.

* ಬಸವಣ್ಣನವರಿಗೆ ಅವಮಾನಿಸಲಾಗಿದೆಯೆಂದು ಸಾಮಾಜಿಕ ಶಾಂತಿ ಕದಡುವ ಕಾಂಗ್ರೆಸ್ಸಿನ ಟೂಲ್‌ಕಿಟ್ ಟೆರರಿಸಂ ಹೇಳಿಕೆಯ ಹಿಂದೆ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿ ಅಶಾಂತಿಯನ್ನು ಹುಟ್ಟು ಹಾಕುವ ಹುನ್ನಾರವಿದೆ. ಇದು ಸಂಪೂರ್ಣ ಸತ್ಯಕ್ಕೆ ದೂರವಾಗಿದೆ. ಬಸವಣ್ಣವರ ವಚನಗಳಿಗೆ ಪಠ್ಯಕ್ರಮದಲ್ಲಿ ಆದ್ಯತೆ ನೀಡಲಾಗಿದೆ.
* 10 ನೇ ತರಗತಿಯ ಸಮಾಜ ವಿಜ್ಞಾನ ವಿಷಯದಲ್ಲಿ ಕರ್ನಾಟಕದಲ್ಲಿ ಬ್ರಿಟೀಷ್ ಆಳ್ವಿಕೆಗೆ ವಿರೋಧಗಳು ಅಧ್ಯಾಯದಲ್ಲಿ ಹೈದರಾಲಿ ಮತ್ತು ಟಿಪ್ಪುಸುಲ್ತಾನ್ ಇವರಿಬ್ಬರನ್ನೇ ವೈಭವಿಕರಿಸಲಾಗಿದೆ. ಸಂಗೋಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ವೀರ ಮದಕರಿ ನಾಯಕ ಹಾಗೂ 1947 ಕ್ಕೆ ಮುಂಚೆಯೆ ಸ್ವಾತಂತ್ರ ಪಡೆಯಲು ಹವಣಿಸಿದ್ದ ಶಿವಮೊಗ್ಗ ಜಿಲ್ಲೆಯ ಈಸೂರು ಗ್ರಾಮ ಇವುಗಳ ಬಗ್ಗೆ ಯಾವ ಉಲ್ಲೇಖವೂ ಇರುವುದಿಲ್ಲ.

* ಬರಗೂರು ರಾಮಚಂದ್ರಪ್ಪ ಸಮಿತಿ ಕೈಬಿಟ್ಟಿದ್ದ 10 ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯದಲ್ಲಿದ್ದ ಸ್ವಾಮಿ ವಿವೇಕಾನಂದ, ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಕುರಿತ ಉದಾತ್ತ ಚಿಂತನೆಗಳು ಗದ್ಯವನ್ನು ರೋಹಿತ್ ಚಕ್ರತೀರ್ಥ ಸಮಿತಿ ಸೇರ್ಪಡೆ ಮಾಡಿದೆ.

* ಬರಗೂರು ಸಮಿತಿ 8 ನೇ ತರಗತಿಯ ಸಂಧೂ ಸಂಸ್ಕೃತಿ ಅಧ್ಯಾಯವನ್ನು ಕೈಬಿಟ್ಟು ಕೈಬಿಟ್ಟು ಸಿದ್ದರಾಮಯ್ಯ ಸರ್ಕಾರವನ್ನು ಓಲೈಸಲು ನೆವರು ಗಳು ಪಾಠವನ್ನು ಸೇರಿಸಿದ್ದರು. ಮತ್ತು ಹಿಂದೂ ಸಂಸ್ಕೃತಿ ನಾಗರಿಕತೆ ಪಾಠವನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ತಿರ್ಮಾನಿಸಿರುವುದು ತಪ್ಪೇ?

* ಪ್ರಸಿದ್ಧ ದೇವಾಲಯಗಳು ಶಿರ್ಷಿಕೆಯಡಿಯಲ್ಲಿ ಕ್ರೈಸ್ತ ಮತ್ತು ಮುಸ್ಲಿಂ ಸ್ಥಳಗಳ ಚಿತ್ರಗಳನ್ನು ಮಾತ್ರ ಮುದ್ರಿಸಿ ಯಾವುದೇ ದೇವಾಲಯದ ಚಿತ್ರಗಳನ್ನು ಸೇರಿಸಿರುವುದಿಲ್ಲ. ಈ ಪಠ್ಯದಲ್ಲಿ ಟಿಪ್ಪು ಮುದ್ರಿಸಿ ದೇವಾಲಯಗಳನ್ನು ಕೈಬಿಟ್ಟಿದ್ದು ಸರಿಯೇ? ಅರಮನೆಯ ಚಿತ್ರವನ್ನು

* 8 ನೇ ತರಗತಿಯಲ್ಲಿ ಧರ್ಮಗಳು ಎಂಬ ವಿಷಯದಲ್ಲಿ ಕ್ರಿಶ್ಚಿಯಾನಿಟಿ, ಇಸ್ಲಾಂ ಇವುಗಳಿಗೆ ಹೆಚ್ಚಿನ ಪದಗಳನ್ನು ಮೀಸಲಿರಿಸಿ ಇವುಗಳಿಗಿಂತ ನೂರಾರು ವರ್ಷ ಮೊದಲೇ ರೂಪಗೊಂಡಿದ್ದ ಜೈನ, ಬುದ್ಧ ಮತಗಳನ್ನು ಕೊನೆಯಲ್ಲಿ ಅಲ್ಪವಿವರಣೆಯಲ್ಲಿ ಮುಕ್ತಾಯಗೊಳಿಸಿದ್ದು, ಹಿಂದೂ ಧರ್ಮ ಎಂಬ ಉಲ್ಲೇಖ ಎಲ್ಲಿಯೂ ಇರಲಿಲ್ಲ ಹಾಗಾಗಿ ಅತ್ಯಂತ ಪುರಾತನವಾದ ಸಂಸ್ಕೃತಿಯನ್ನು ಕುರಿತ ಸನಾತನ ಧರ್ಮ ಎಂಬ ಪಾಠವನ್ನು ಸೇರಿಸಿರುವುದು ತಪ್ಪೇ?

* 7 ನೇ ತರಗತಿಯಲ್ಲಿದ್ದ ಏಣಗಿ ಬಾಳಪ್ಪ ಜೀವನ ಕುರಿತ ನನ್ನ ಬಾಲ್ಯ ಪಾಠವನ್ನು ಕೈಬಿಡಲಾಗಿತ್ತು. ಕಾಸರಗೂಡಿನ ಕಯ್ಯಾರ ಕಿಞ್ಞಣ್ಣ ರೈ ರವರ ‘ಏರುತಿಹುದು, ಹಾರುತಿಹುದು ನೋಡು ನಮ್ಮ ಬಾವುಟ, ಕೆ.ಎಸ್.ನರಸಿಂಹಸ್ವಾಮಿಯವರ ಭಾರತಿಯತೆ ಕವನ ಕೈಬಿಡಲಾಗಿತ್ತು. ಅವುಗಳನ್ನು ಸೇರಿಸಲಾಗಿದೆ.

* ಲಿಂಗಾಯತ ಸಾಹಿತಿಗಳಾದ, ಸಂಗಮೇಶ ನಿಡಗುಂದ, ಕಾಶಿ ಮರುಳಯ್ಯ, ಸರ್ಪಭೂಷಣ ಶಿವಯೋಗಿ ಮುಂತಾದದವರ ರಚನೆಗಳನ್ನು ಕೈಬಿಟ್ಟಿದ್ದರು. ಅವುಗಳಿಗೆ ನ್ಯಾಯವನ್ನೊದಗಿಸುವ ಪ್ರಯತ್ನ ರೋಹಿತ್ಚಕ್ರತೀರ್ಥ ಎಂಬ ಸಮಿತಿಯಿಚಿದ ಸಾಗಿದೆ.
* ರಾಜಕೀಯ ಪ್ರೇರಿತವಾಗಿ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಕುರಿತ ಮಾಹಿತಿಯನ್ನು ಕೈಬಿಡಲಾಗಿತ್ತು. 2 ನೇ ತರಗತಿಯಲ್ಲಿ ಕೆಂಪೆಗೌಡರ ಕುರಿತು ಹೊಸ ಪಠ್ಯವನ್ನು ಸೇರ್ಪಡೆ ಮಾಡಲಾಗಿದೆ.

* 6 ನೇ ತರಗತಿಗೆ ಹುಬ್ಬಳ್ಳಿಯ ಸಿದ್ಧಾರೂಢ ಜಾತ್ರೆ 9 ನೇ ತರಗತಿಗೆ ಸಂಪೂರ್ಣವಾಗಿ ಕೈಬಿಟ್ಟಿದ್ದ ಡಾ.ಎಸ್.ಎಲ್.ಭೈರಪ್ಪ ಅವರ ಲೇಖನವನ್ನು ಸೇರ್ಪಡಿಸಿರುವುದು ತಪ್ಪೇ? ಪಚಜೇ ಮಂಗೇಶರಾಯರು, ಮಂಜೇಶ್ವರ ಗೋವಿಂದ ಪೈ ಇವರ ಲೇಖನಗಳನ್ನು ಬರಗೂರು ಸಮಿತಿ ನಿರ್ಲಕ್ಷಿಸಿತ್ತು ಅವುಗಳನ್ನು ಸೇರಿಸಲಾಗಿದೆ.

* ದೇಶದಲ್ಲಿ ಸಂಪೂರ್ಣವಾಗಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿರುವ ಕಾಂಗ್ರೆಸ್ ವಾಮಮಾರ್ಗದಿಂದಾದರೂ ಸರಿ, ಅಧಿಕಾರವನ್ನು ಪಡೆಯುವ ಏಕೈಕ ಉದ್ದೇಶದಿಂದ ಲಿಂಗಾಯತ ಧರ್ಮವನ್ನು ಒಡೆಯುವ ಪ್ರಯತ್ನ ಮಾಡಿ ಜನರಿಂದ ತಿರಸ್ಕೃತಗೊಂಡಿದೆ.

* ಆರ್ಯ-ದ್ರಾವೀಡ ಎಂಬ ತಲೆಬುಡವಿಲ್ಲದ ಸಂಗತಿಯನ್ನು ಜನರೊಳಗೆ ತುರುಕಿ ಮತ್ತಷ್ಟು ಜನರನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿದೆ. ಸಾಹಿತಿಗಳಿಗೆ ತಪ್ಪು ಸಚಿದೇಶವನ್ನು ರವಾನಿಸುವುದರ ಮೂಲಕ ಸಾಹಿತಿಗಳನ್ನು ವಚಚಿಸುವ ಕುತಂತ್ರ ಬಯಲಾಗಿದೆ. ಕಾಂಗ್ರೆಸ್ಸಿನ ಟೂಲ್‌ಕಿಟ್ ಟೆರರಿಸಂಗೆ ಈ ನಾಡಿನ ಜನತೆ ಬಲಿಪಶುಗಳಾಗಬಾರದೆಂದು ಎನಚಿತಿಸುತ್ತೇನೆ.
ಇಂದು ಬೆಳಗಾವಿಯ ಸನ್ಮಾನ್ ಹೋಟೆಲ ದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಪಠ್ಯಪುಸ್ತಕ ಬದಲಾವಣೆಯ ಬಗ್ಗೆ ಸುದ್ದಿಗೋಷ್ಠಿಯನ್ನು ಕರೆಯಲಾಗಿತ್ತು ಸುದ್ದಿಗೋಷ್ಠಿಯಲ್ಲಿ ಭಾರತೀಯ ಜನತಾ ಪಾರ್ಟಿಯ ವಕ್ತಾರರು ಹಾಗೂ ಶಾಸಕರು ಪಿ ರಾಜೀವ . ಬೆಳಗಾವಿ ಗ್ರಾಮಾಂತರ ಜಿಲ್ಲೆ ಅಧ್ಯಕ್ಷರು ಹಾಗೂ ಮಾಜಿ ಶಾಸಕರು ಸಂಜಯ ಪಾಟೀಲ. ಬೆಳಗಾವಿ ಮಹಾನಗರ ಜಿಲ್ಲೆ ಪ್ರದಾನ ಕಾರ್ಯದರ್ಶಿ ಮುರುಗೇಂದ್ರ ಗೌಡ ಪಾಟೀಲ ಮತ್ತು ದಾದಾಗೌಡ ಬಿರಾದಾರ. ಬೆಳಗಾವಿ ಗ್ರಾಮಾಂತರ ಪ್ರದಾನ ಕಾರ್ಯದರ್ಶಿ ಸುಭಾಷ ಪಾಟೀಲ. ಬೆಳಗಾವಿ ಮಹಾನಗರ ಜಿಲ್ಲಾ ವಕ್ತಾರರು ಪ್ರಭು ಹೂಗಾರ. ಬೆಳಗಾವಿ ಮಹಾನಗರ ಜಿಲ್ಲಾ ಮಾಧ್ಯಮ ಪ್ರಮುಖರು (ಸಂಚಾಲಕರು) ಶರದ ಪಾಟೀಲ. ಬೆಳಗಾವಿ ಗ್ರಾಮೀಣ ಮಾಧ್ಯಮ ಪ್ರಮುಖರು (ಸಂಚಾಲಕರು) ಎಫ ಎಸ ಸಿದ್ದನಗೌಡರ. ಬೆಳಗಾವಿ ಗ್ರಾಮೀಣ ಸಾಮಾಜಿಕ ಜಾಲತಾನ ಪ್ರಮುಖರು ನಿತಿನ ಚೌಗುಲೆ. ಬೆಳಗಾವಿ ಮಹಾನಗರ ಜಿಲ್ಲಾ ಸಹ ವಕ್ತಾರರು ಶಶಿ ಬಡಕರ. ಮಾಧ್ಯಮ ಸಹ ಪ್ರಮುಖರು ಪ್ರಜ್ವಲ ಅಥಣಿಮಠ ಹಾಗೂ ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು ಇ ಸಂಧರ್ಭದಲ್ಲಿ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮಾಧ್ಯಮ ಮಿತ್ರರಿಗೆ ಶುಭವನ್ನು ಹಾರೈಸಲಾಯಿತು ಮತ್ತು ಸುದ್ಧಿಗೋಷ್ಠಿಯ ಸ್ವಾಗತ ಮತ್ತು ನಿರೂಪಣೆ ಮಾಧ್ಯಮ ಪ್ರಮುಖ ಶ್ರೀ ಶರದ ಪಾಟೀಲರವರು ನೆರವೆರಿಸಿದರು.