Belagavi News In Kannada | News Belgaum

ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಬಸವಣ್ಣನವರಿಗೆ ಅವಮಾನ ಖಂಡಿಸಿ ಪ್ರತಿಭಟನೆ

ಬೆಳಗಾವಿ: ಪಠ್ಯಪುಸ್ತಕ ಪರಿಷ್ಕರಣಾ ಸಮೀತಿಯು 9ನೇ ತರಗತಿ ಪುಸ್ತಕದಲ್ಲಿ ಬಸವಣ್ಣನವರ ಕುರಿತು ತಪ್ಪು ವಿಷಯಗಳನ್ನು ಪ್ರಕಟಿಸಿದ್ದು, ಈ ಕ್ರಮವನ್ನು ಶೀಘ್ರವೇ  ಸರಿಪಡಿಸಬೇಕೆಂದು ಆಗ್ರಹಿಸಿ ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಬಸವ ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಮಹಾಸಭಾ ಅಧ್ಯಕ್ಷ ಬಸವರಾಜ ರೊಟ್ಟಿ ಅವರು ಮಾತನಾಡಿ, ಪಠ್ಯಪುಸ್ತಕ ಪರಿಷ್ಕರಣಾ ಸಮೀತಿಯು 9ನೇ ತರಗತಿಯ ಸಮಾಜ ವಿಜ್ಙಾನ ಪಠ್ಯಪುಸ್ತಕದಲ್ಲಿ ಬಸವಣ್ಣನವರ ಜೀವನಕ್ಕೆ ಸಂಬಂಧಿಸಿದಂತೆ ಹಲವಾರು ಲೋಪದೋಷವಿರುವ ವಿಷಗಳನ್ನು ಅಳವಡಿಸಿದ್ದು, ಅದು ಅನೈತಿಹಾಸಿಕ ಜೀವನಚರಿತ್ರೆಯಾಗಿದೆ ಕೂಡಲೆ ಇದನ್ನು ಗಮನಿಸಿ ಸೂಕ್ತಕ್ರಮದಲ್ಲಿ ಸರಿಪಡಿಸಬೇಕು ಇಲ್ಲದಿದ್ದರೆ ಉಗ್ರಹೋರಾಟ ಮಾಡಲಾಗುವುದು ಎಂದರು.
ಪಠ್ಯಪುಸ್ತಕದಲ್ಲಿ ಬಸವಣ್ಣನವರು ವೀರಶೈವ ಮತವನ್ನು ಅಭಿವೃದ್ಧಿ ಪಡಿಸಿದರು ಎಂದು ಬರೆಯಲಾಗಿದೆ ಆದರೆ ಬಸವಣ್ಣನವರು ಕೇವಲ ಲಿಂಗಾಯತ ಧರ್ಮದ ಸ್ಥಾಪಕರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ವೀರಶೈವ ಅಭಿವೃದ್ಧಿ ಪಡಿಸಿದರು ಎನ್ನುವುದು ಶುದ್ಧ ಸುಳ್ಳು ಎಂದು ಆರೋಪಿಸಿದರು.
ಪಠ್ಯಪುಸ್ತಕದಲ್ಲಿ ವಸವಣ್ಣನವರ ಕುರಿತು ಈ ಎಲ್ಲ ತಪ್ಪು ಮಾಹಿತಿಗಳನ್ನು ಸೇರಿಸಲಾಗಿದ್ದು ಕೂಡಲೇ ಇದನ್ನು ಪರಿಶೀಲಿಸಿ ಒಂದು ವಾರದ ಒಳಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಉಗ್ರಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಈ ವೇಳೆ ಶಂಕರ ಗುಡಸ, ಅರವಿಂದ ಪಾರುಶೆಟ್ಟಿ, ಎ ವೈ ಬೆಂಡಿಗೇರಿ, ಎಸ್ ಜಿ ಸಿದ್ನಾಳ, ಬಿ ಎಸ್ ಸುಲ್ತಾನಪುರಿ, ಸತೀಶ್ ಚೌಗಲಾ ಸೇರಿದಂತೆ ಇತರರು ಇದ್ದರು.//////