Belagavi News In Kannada | News Belgaum

ಪೋಲಿಸರು ರೌಡಿಸಂ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ನಡೆದಿದೆ

ಬೆಳಗಾವಿ: ಗೋಕಾಕ ಪೋಲಿಸ್ ಠಾಣಾ ವ್ಯಾಪ್ತಿಗೆ ನುಗ್ಗಿ ಘಟಪ್ರಭಾ ಪೋಲಿಸರು ರೌಡಿಸಂ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಕೊಣ್ಣೂರು ಪಟ್ಟಣದಲ್ಲಿ ನಡೆದಿದೆ. ತನ್ನ ತಂದೆಯ ಅನೈತಿಕ ಸಂಬಂಧ ಪ್ರಶ್ನಿಸಿದ ರಾಹುಲ್ ಕರನಿಂಗ್ ಎಂಬ ಯುವಕನ ಮೇಲೆ ಘಟಪ್ರಭಾ ಪೋಲಿಸರು ಮಾರಣಾಂತಿಕ ಹಲ್ಲೆ ನಡೆಸಿ, ರಾಕ್ಷಸಿತನ ಮೆರೆದಿದ್ದಾರೆ.

 

ಹಲ್ಲೆಗೊಳಗಾದ ರಾಹುಲ್ ತಂದೆ ಸಿದ್ದಪ್ಪ ಕರನಿಂಗ ಕುಲಗೋಡ ಪೋಲಿಸ್ ಠಾಣೆಯಲ್ಲಿ PSI ಆಗಿರೋ ತಂದೆ, ಸಂಬಂಧಿ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು ಇದನ್ನು ಪ್ರಶ್ನಿಸಿದ್ದಕ್ಕೆ ಪೋಲಿಸರನ್ನ ಭೂ ಬಿಟ್ಟು ಹಲ್ಲೆ ಮಾಡಿಸಿದ್ದಾನೆ ಎಂದು ಹಲ್ಲೆಗೊಳಗಾದ ರಾಹುಲ್ ಆರೋಪಿಸಿದ್ದಾನೆ.

ಕೊಣ್ಣೂರಿನಲ್ಲಿರುವ ಮಹಿಳೆ ಮನೆಗೆ ಹೋದ ರಾಹುಲ್ ಅನೈತಿಕ ಸಂಬಂಧದ ಕುರಿತು ಪ್ರಶ್ನಿಸಿದ್ದಾನೆ. ಈ ವೇಳೆ ರಾಹುಲ್ ತಂದೆ ಸಿದ್ದಪ್ಪನಿಗೆ ಕರೆ ಮಾಡಿದ ಮಹಿಳೆ ಮಗನಿಗೆ ತಾಕೀತು ಮಾಡುವಂತೆ ಹೇಳಿ ಕೂಡಲೇ 112 ವಾಹನಕ್ಕೆ ಕರೆ ಮಾಡಿದ್ದಾಳೆ

112 ವಾಹನದಲ್ಲಿ ಬಂದ ಘಟಪ್ರಭಾ ಪೋಲಿಸರು ರಾಕ್ಷಸರಂತೆ ವರ್ತಿಸಿದ್ದು ರಾಹುಲ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಘಟಪ್ರಭಾ ಪೋಲಿಸರು ಗೂಂಡಾಗಿರಿ ನಡೆಸಿದ್ದು ಘಟನೆ ಸಂಬಂಧ ಗೋಕಾಕ ಗ್ರಾಮೀಣ ಠಾಣೆಯಲ್ಲಿ FIR ದಾಖಲಾಗಿದೆ. ಘಟಪ್ರಭಾ ಪೋಲಿಸರು ಹಾಗೂ ಕುಲಗೋಡ ಠಾಣಾ PSI ಗೂಂಡಾಗಿರಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ಎಸ್ಪಿ ಲಕ್ಷಣ ನಿಂಬರಗಿ ತನಿಖೆಗೆ ಆದೇಶಿದ್ದಾರೆ.