Belagavi News In Kannada | News Belgaum

ಕೆ.ಜೆ.ಯೂ ಬೆಳಗಾವಿ ಜಿಲ್ಲಾ ಘಟಕ ಅಸ್ಥಿತ್ವಕ್ಕೆ ಬೆಳಗಾವಿಯಲ್ಲಿ ಜಿಲ್ಲಾಧ್ಯಕ್ಷರಾಗಿ ಬೆಳಗಾವಿ ವರದಿ ದಿನ ಪತ್ರಿಕೆ ಸಂಪಾದಕ ಸತೀಶ್ ಗುಡಗನಟ್ಟಿ ನೇಮಕ

ಬೆಳಗಾವಿ: ನೂತನವಾಗಿ ಕರ್ನಾಟಕ ಜರ್ನಲಿಸ್ಟ ಯೂನಿಯನ್ ಪದಾಧಿಕಾರಿಗಳ ಆಯ್ಕೆಯೊಂದಿಗೆ ಕೆಜೆಯು ಬೆಳಗಾವಿ ಜಿಲ್ಲಾ ಘಟಕದ ಅಸ್ತಿತ್ವಕ್ಕೆ ಬಂದಿದೆ.
ಬೆಳಗಾವಿಯಲ್ಲಿ ಅವಿರೋಧವಾಗಿ ಸತೀಶ್ ಬ ಗುಡಗನಟ್ಟಿ ಅವರನ್ನು ಜಿಲ್ಲಾಧ್ಯಕ್ಷರನಾಗಿ ನೇಮಕ ಮಾಡಲಾಗಿದೆ
ನಗರದಲ್ಲಿ ಮೇ 25 ರಂದು ನಡೆದ ಕೆಜೆಯು ಸರ್ವ ಸದಸ್ಯರ ಸಭೆಯಲ್ಲಿ ಯೂನಿಯನ್ ಪದಾಧಿಕಾರಿಗಳ ಅವಿರೋಧ ಆಯ್ಕೆ ಮಾಡಲಾಗಿತ್ತು. ಪದಾಧಿಕಾರಿಗಳ ಪಟ್ಟಿಯನ್ನು ರಾಜ್ಯ ಸಮಿತಿಗೆ ಅನುಮೋದನೆ ಕುರಿತು ಸಲ್ಲಿಸಲಾಗಿ, ರಾಜ್ಯ ಕಾರ್ಯಕಾರಿ ಸಮಿತಿಯ ಅನುಮೋದನೆಯೊಂದಿಗೆ ಕರ್ನಾಟಕ ಜರ್ನಾಲಿಸ್ಟ್ ಯುನಿಯನ್ ರಾಜ್ಯ ಅದ್ಯಕ್ಷರಾದ ಬಿ. ನಾರಾಯಣ್ ರವರು ಜೂ 2 ರಂದು ಲಿಖಿತ ಆದೇಶ ಪತ್ರ ನೀಡುವುದರೊಂದಿಗೆ ಅಭಿನಂದಿಸಿದ್ದಾರೆ.

ಕರ್ನಾಟಕ ಜರ್ನಲಿಸ್ಟ ಯುನಿಯನ್ ಬೆಳಗಾವಿ ಜಿಲ್ಲಾ ಘಟಕದ ಪದಾಧಿಕಾರಿಗಳು:

೧) ಅಶೋಕ್ ವಿಠಲ ಸನದಿ (ಗೌರವಧ್ಯಕ್ಷರು)

೨) ಸತೀಶ್ ಬಸವಾಣಿ ಗುಡಗೇಟ್ಟಿ (ಅಧ್ಯಕ್ಷರು)

೩) ರತ್ನಾಕರ್ ಸುಭ್ಬರಾವ ಗೌಂಡಿ (ಪ್ರಧಾನ ಕಾರ್ಯದರ್ಶಿ)

೪) ನಿತೇಶ್ ಶಾಮ್ ಕಿತ್ತೂರು (ಖಜಾಂಚಿ)

೫) ಪೂಜಾ ಸ ಗುಡಗೆನಟ್ಟಿ (ಸದಸ್ಯರು)

೬)ವಿವೇಕ ಪ್ರಭುದೇವ್ ಕುದರಿಮಠ (ಸದಸ್ಯರು)

೭)ಲಕ್ಷ್ಮಣ್ ಗುಜಪ್ಪ ಗುರವ. (ಸದಸ್ಯರು)

೮) ವಿವೇಕಾನಂದ ಸಿದ್ಧಾರೂಢ ಕತ್ತಿ (ಸದಸ್ಯರು)

೯) ಯಲ್ಲಪ್ಪಾ ದುಂಡಪ್ಪಾ ಚಿಕ್ಕೋಡಿ