Belagavi News In Kannada | News Belgaum

ಎಚ್‍ಡಿಎಫ್‍ಸಿ ಬ್ಯಾಂಕ್ ಗ್ರಾಮೀಣ ಬ್ಯಾಂಕಿಂಗ್ ವಿಸ್ತರಣೆ ಯೋಜನೆ

ಹುಬ್ಬಳ್ಳಿ : ಎಚ್‍ಡಿಎಫ್‍ಸಿ ಬ್ಯಾಂಕ್ ಗ್ರಾಮೀಣ ಬ್ಯಾಂಕಿಂಗ್ ಕಾರ್ಯ ವಿಸ್ತರಿಸಲು ಉಪಕ್ರಮವನ್ನು ಪ್ರಕಟಿಸಿದೆ. ಬ್ಯಾಂಕಿಂಗ್ ಉತ್ಪನ್ನಗಳನ್ನು ತಲುಪದ ಪ್ರದೇಶಗಳಿಗೂ ಕೊಂಡೊಯ್ಯುವ ಉದ್ದೇಶದ ರೂರಲ್ ಬ್ಯಾಂಕಿಂಗ್ ಈ ನಿಟ್ಟಿನಲ್ಲಿ ಬ್ಯಾಂಕಿಂಗ್‍ನ ಪ್ರಸ್ತುತ ಉಪಕ್ರಮಗಳನ್ನು ಕ್ರೋಢೀಕರಿಸಲಿದೆ ಮತ್ತು ಕೊನೆಯ ಹಂತಕ್ಕೆ ಹತ್ತಿರ ಕೊಂಡೊಯ್ಯಲಿದೆ.
ರೀಟೇಲ್ ಬ್ರಾಂಚ್ ಬ್ಯಾಂಕಿಂಗ್‍ನ್ನು ಬ್ಯಾಂಕ್‍ನ `ಫ್ಯೂಚರ್-ರೆಡಿ ಯೋಜನೆಯ ಭಾಗವಾಗಿ ರೂಪಿಸಲಾಗಿದ್ದು ರೂರಲ್ ಬ್ಯಾಂಕಿಂಗ್ ವಹಿವಾಟು ಅರೆಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಿಗೆ ಆದ್ಯತೆ ನೀಡುತ್ತದೆ, ಅದರ ಬಹಳಷ್ಟು ಪ್ರಮಾಣ ಇನ್ನೂ ಬಳಕೆಯಾಗಿಲ್ಲ.
19 ವರ್ಷಗಳಿಗೂ ಮೇಲ್ಪಟ್ಟು ಬ್ಯಾಂಕ್‍ನಲ್ಲಿರುವ ಅನಿಲ್ ಭಾವನಾನಿ ಅವರನ್ನು ನ್ಯಾಷನಲ್ ರೂರಲ್ ಬ್ಯಾಂಕಿಂಗ್ ಹೆಡ್ ಆಗಿ ನೇಮಕ ಮಾಡಲಾಗಿದೆ. ಬ್ಯಾಂಕ್ ಪ್ರಸ್ತುತ ತನ್ನ 6,342 ಶಾಖೆಗಳಲ್ಲಿ ಶೇ.50ರಷ್ಟು ಅರೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೊಂದಿದೆ ಮತ್ತು ಉಳಿದ ಶೇ.50ರಷ್ಟು ಮೆಟ್ರೊ ಮತ್ತು ನಗರ ಪ್ರದೇಶಗಳಲ್ಲಿವೆ. ಬ್ಯಾಂಕ್ ಕಾಮನ್ ಸರ್ವೀಸ್ ಸೆಂಟರ್‍ಗಳ(ssಸಿಎಸ್‍ಸಿ) ವಿಲೇಜ್ ಲೆವೆಲ್ ಆಂತ್ರಪ್ರಿನ್ಯೂರ್ಸ್(ವಿಎಲ್‍ಇ)ಗಳೊಂದಿಗೆ ದೂರ ಪ್ರದೇಶಗಳಲ್ಲಿ ಬ್ಯಾಂಕ್ ಶಾಖೆಗಳ ವಿಸ್ತರಣೆಯಾಗಿ ಕೆಲಸ ಮಾಡುತ್ತಿವೆ.
ರೂರಲ್ ಬ್ಯಾಂಕಿಂಗ್ ಬ್ಯುಸಿನೆಸ್ ಇಡೀ ಉತ್ಪನ್ನಗಳು ಹಾಗೂ ಸೇವೆಗಳ ಗುಚ್ಛವನ್ನು ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒದಗಿಸುತ್ತದೆ. ಈ ನಿಟ್ಟಿನಲ್ಲಿ ಬ್ಯಾಂಕ್ ಈ ಕೆಳಕಂಡ ವಿಧಾನ ಅಳವಡಿಸಿಕೊಳ್ಳುತ್ತದೆ:
1.ವಿತರಣಾ ಜಾಲ- ತನ್ನ ವಿತರಣಾ ಜಾಲವನ್ನು ಗ್ರಾಮೀಣ ಪ್ರದೇಶಗಳಿಗೆ ವಿಸ್ತರಿಸಲು ಈ ಹಣಕಾಸು ವರ್ಷದಲ್ಲಿ ಬ್ಯಾಂಕ್ ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 1,064 ಶಾಖೆಗಳನ್ನು ತೆರೆಯಲಿದೆ
2.ಕಾರ್ಯತಂತ್ರೀಯ ಸಹಯೋಗ- ಬ್ಯಾಂಕ್ ಆನಂದ್‍ನ ಇನ್ಸ್‍ಟಿಟ್ಯೂಟ್ ಆಫ್ ರೂರಲ್ ಮ್ಯಾನೇಜ್‍ಮೆಂಟ್‍ನೊಂದಿಗೆ ಸಹಯೋಗ ಹೊಂದಿದ್ದು ಗ್ರಾಹಕರ ವರ್ತನೆ, ಗ್ರಾಹಕರ ಸಂತೃಪ್ತಿ, ಸೇವಾ ವಿನ್ಯಾಸ ಮತ್ತು ಸೇವಾ ಪೂರೈಕೆ ಸಂಬಂಧಿಸಿದ ವಿಕಾಸಗೊಳ್ಳುವ ಡೈನಮಿಕ್ಸ್ ಅರ್ಥ ಮಾಡಿಕೊಂಡು `ರೂರಲ್ ಫಸ್ರ್ಟ್ ಕಾರ್ಯತಂತ್ರ ಸೃಷ್ಟಿಸುತ್ತದೆ
3.ಹೊಸ ಉತ್ಪನ್ನಗಳು ಮತ್ತು ಸೇವೆಗಳು- ಗ್ರಾಮೀಣ ಸಾರಿಗೆ ಅರ್ಥವ್ಯವಸ್ಥೆ, ಅರಣ್ಯ ಅರ್ಥವ್ಯವಸ್ಥೆ, ಕೃಷಿ ಅರ್ಥವ್ಯವಸ್ಥೆ ಮತ್ತಿತರೆ ಸಂಬಂಧಿಸಿದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹೊಸ ಉತ್ಪನ್ನ ಮತ್ತು ಸೇವೆಗಳನ್ನು ನಿರ್ಮಿಸುವುದು
4.ಒನ್-ಸ್ಟಾಪ್ ಶಾಪ್ ಪರಿಹಾರ- ಸಣ್ಣ ರೈತರು, ಕೆಲಸಗಾರರು ಮತ್ತು ವ್ಯಾಪಾರಿಗಳಿಗೆ ಒನ್ ಸ್ಟಾಪ್ ಶಾಪ್ ಒದಗಿಸಲು ಆದ್ಯತೆ
5.ಹಣಕಾಸು ಸಾಕ್ಷರತೆ ಅರಿವು- ಒಳ್ಳೆಯ ಉಳಿತಾಯ ಹವ್ಯಾಸಗಳು ಮತ್ತು ಹಣಕಾಸು ಸಾಕ್ಷರತೆ ಕುರಿತು ಅರಿವನ್ನು ವಿಸ್ತರಿಸುವುದು
ಬ್ಯಾಂಕ್‍ನ ವಿಶ್ವಮಟ್ಟದ ಉತ್ಪನ್ನಗಳು ಮತ್ತು ಸೇವೆಗಳನ್ನು ಭಾರತದ ಅತ್ಯಂತ ಕುಗ್ರಾಮದ ಮೂಲೆಗಳಿಗೂ ಕೊಂಡೊಯ್ಯಲು ನಾವು ಉತ್ಸುಕರಾಗಿದ್ದೇವೆ ಎಂದು ಎಚ್‍ಡಿಎಫ್‍ಸಿ ಬ್ಯಾಂಕ್‍ನ ಸೀನಿಯರ್ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್ ಮತ್ತು ನ್ಯಾಷನಲ್ ರೂರಲ್ ಬ್ಯಾಂಕಿಂಗ್ ಹೆಡ್ ಅನಿಲ್ ಭಾವನಾನಿ ಹೇಳಿದರು.