Belagavi News In Kannada | News Belgaum

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ನೇತೃತ್ವದಲ್ಲಿ ಯುವ ಸ್ಪಂದನ ತಿಂಗಳ ಸಭೆ

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ: ಜೂ.6 ರವರೆಗೆ ಪ್ರವೇಶ ಅರ್ಜಿ ಪರಿಶೀಲನೆ

 

ಬೆಳಗಾವಿ,ಜೂನ್.2: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ 2022 ನೇ ಸಾಲಿನ ಆಫಲೈನ್ ಮುಖಾಂತರ ಪ್ರವೇಶ ಕಾರ್ಯ ಮೇ 25 2022ರಿಂದ ಆರಂಭವಾಗಿದ್ದು, ಅರ್ಜಿ ಹಾಗೂ ಧಾಖಲಾತಿ ಪರಿಶೀಲನೆ ಕೊನೆಯ ದಿನಾಂಕ ಜೂನ್ 6 2022ರ ಸಾಯಂಕಾಲ 5.30 ರ ವರೆಗೆ ಇರುತ್ತದೆ.

ಈ ಸಂಸ್ಥೆಯಲ್ಲಿ ಈ ಕೆಳಕಂಡ ವೃತ್ತಿಗಳಿಗೆ ಪ್ರವೇಶ ಮಾಡಿಕೊಳ್ಳಲಾಗುವುದು.

  1. COMPUTER OPERATER PROGRAMMING ASSISTANT (1 YEARCOURSE)
  2. ELECTRONIC MECHANIC (2 YEARCOURSE).

ಈ ಕೆಳಕಂಡ ವೃತ್ತಿಗಳಿಗೆ ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇರೆಗೆ ನೇರ ಪ್ರವೇಶಾತಿಯನ್ನು ನೀಡಲಾಗುವುದು.

  1. SECRETARIAL PRACTICE (1 YEARCOURSE)
  2. ADVANCED CNC MACHINING (2 YEAR COURSE)
  3. MECHANIC ELECTRIC VEHICLE (2 YEAR COURSE)

ಈ ಸಂಸ್ಥೆಯು ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಾಗಿರುವುದರಿಂದ ಪ್ರವೇಶಕಾರ್ಯದಲ್ಲಿ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುವುದು. ನಂತರ ಉಳಿದ ಸೀಟುಗಳಿಗೆ, ಪುರುಷರಿಗೂ ಸಹ ಪ್ರವೇಶ ಮಾಡಿಕೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ಖುದ್ದಾಗಿ ಪ್ರಾಚಾರ್ಯರು, ಸ.ಕೈ.ತ.ಸಂಸ್ಥೆ ಮಹಿಳಾ ಮಜಗಾಂವ ರೋಡ ಉದ್ಯಮಬಾಗ ಬೆಳಗಾವಿ ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.///

 

ಬೆಳಗಾವಿ,ಜೂನ್.2  : ಜಿನೇಶ್ವರ್ ಪಡನಾಡ ಮಾನ್ಯ ಉಪನಿರ್ದೇಶಕರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ನೇತೃತ್ವದಲ್ಲಿ ಯುವ ಸ್ಪಂದನ ತಿಂಗಳ ಸಭೆ ನಡೆಯಿತು.. ತಾಲೂಕ ಯುವ ಸ್ಪಂದನ ಕೇಂದ್ರಗಳ ಸ್ಥಾಪನೆ,ಮತ್ತು ಯುವ ಪರಿವರ್ತಕರ,ನೇಮಕಾತಿ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚೆ ಮಾಡಲಾಯಿತು ಈ ಸಂದರ್ಭದಲ್ಲಿ ಕ್ಷೇತ್ರ ಸಂಪರ್ಕ ಅಧಿಕಾರಿಗಳಾದ ವೆಂಕೋಬಾ ಸರ, ಕ್ರೀಡಾ ಇಲಾಖೆ ಅಸಿಸ್ಟೆಂಟ್ ಆದ ರಾಜು ಸರ, ಯುವ ಸಮಾಲೋಚಕರು ಯುವ ಪರಿವರ್ತಕರು ಉಪಸ್ಥಿತರಿದ್ದರು.//