Belagavi News In Kannada | News Belgaum

ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿ ಅಧಿಕಾರಿಗಳಿಗೆ ಮುತ್ತಿಗೆ ಹಾಕಿದ ರೈತರು

ಅಥಣಿ: ತಾಲೂಕಿನ ಸಂಕೋನಟ್ಟಿ ಗ್ರಾಮ
ಪ೦ಚಾಯತಿ ವ್ಯಾಪ್ತಿಯಲ್ಲಿ ಬರುವ
ಸಣ್ಣ ರೈತರ ಕೃಷಿ ಭೂಮಿಯನ್ನು ನೆರೆ
ಸಂತ್ರಸ್ತರ ಪುನರ್ವಸತಿ ಕೇಂದ್ರ ನಿರ್ಮಿಸುವ
ನಿರ್ಧಾರಕ್ಕೆ ಸಣ್ಣ ಮತ್ತು ಅತಿ ಸಣ್ಣ ರೈತರು ವಿರೋಧ
ವ್ಯಕ್ತಪಡಿಸಿ ಅಧಿಕಾರಿಗಳಿಗೆ ಮುತ್ತಿಗೆ ಹಾಕಿದ ಘಟನೆ ಜರುಗಿದೆ‌. ಅಥಣಿ ಗ್ರಾಮೀಣ ಪಂಚಾಯಿತಿ ವ್ಯಾಪ್ತಿಯ ರಿ.ಸ ನಂ 839 ಹಾಗೂ ಅಕ್ಕ ಪಕ್ಕದ ಜಮೀನು
ಸೇರಿದಂತೆ ಅಂದಾಜು 130 ಎಕರೆ ರೈತರ
ಫಲವತ್ತಾದ ಭೂಮಿಯನ್ನು ವಶಪಡಿಸಿಕೊಳ್ಳಲು
ಮುಂದಾಗುತ್ತಿರುವ ಸರ್ಕಾರದ
ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತರು, ಮಹಿಳೆಯರು ಮತ್ತು ಮಕ್ಕಳು ಬುಧವಾರ ಹಿಪ್ಪರಗಿ ಅಣೆಕಟ್ಟು ಯೋಜನೆಯ ಅಧಿಕಾರಿಗಳು ಪುನರ್ವಸತಿ ಕೇಂದ್ರಕ್ಕಾಗಿ ಭೂಮಿಯ ಸರ್ವೆ ಮಾಡಲು ಬಂದ ಅಧಿಕಾರಿಗಳನ್ನ ತರಾಟೆಗೆ  ತೆಗೆದುಕೊಂಡರು
ನೆರೆ ಸಂತ್ರಸ್ತರ ಪುನರ್ವಸತಿ ನಿರ್ಮಾಣ ಕೇಂದ್ರ ನಮ್ಮ ಫಲವತ್ತಾದ ಭೂಮಿಯನ್ನು ನಾವು ಬಿಟ್ಟುಕೊಡುವುದಿಲ್ಲ, ಈ ಭೂಮಿಗಳು ಹೋದರೆ ನಾವು ಶಾಶ್ವತವಾಗಿ ಸಂತ್ರಸ್ತರಾಗುತ್ತೇವೆ. ನೆರೆ ಸಂತ್ರಸ್ತರಿಗೆ ಬೇರೆಡೆಗೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಪಟ್ಟು ಹಿಡಿದರು.ಮತ್ತು ಬೋರ್ವೆಲ್ ಗಳನ್ನು ತೋರಿಸಿ ಕೊಂಡು ಬದುಕು ಕಟ್ಟಿಕೊಂಡಿದ್ದೇವೆ. ಈ ಭೂಮಿಯನ್ನು
ಭೂಸ್ವಾಧೀನ ಪಡಿಸಿಕೊಂಡರೆ ನಾವು ಶಾಶ್ವತವಾಗಿ
ಸಂತ್ರಸ್ತ ರಾಗುತ್ತೇವೆ. ಯಾವುದೇ ಕಾರಣಕ್ಕೂ ನಾವು
ಈ ಭೂಮಿಗಳನ್ನು ಬಿಟ್ಟುಕೊಡಲು ಸಿದ್ಧರಿಲ್ಲ,
ಅಧಿಕಾರಿಗಳು ನೆರೆಸಂತ್ರಸ್ಥರಿಗಾಗಿ ಬೇರೆ ಕಡೆಗೆ
ಇಲ್ಲವೇ ಸರ್ಕಾರಿ ಜಮೀನುಗಳನ್ನು ನೀಡಬೇಕು.
ನಮಗೆ ಬಂದ ಮಾಹಿತಿಯ ಪ್ರಕಾರ
ಮತ್ತು ಅತಿ ಸಣ್ಣ ರೈತರ ಫಲವತ್ತಾದ ಒಕ್ಕಲುತನದ
ಭೂಮಿಯನ್ನು ವಶಪಡಿಸಿಕೊಂಡು ಬಡ ರೈತ
ಕುಟುಂಬಗಳನ್ನ ಬಿದಿಗೆ ತರಲು ಮುಂದಾಗಿರುವ
ತಾಲೂಕಾಡಳಿತದ ಅಧಿಕಾರಿಗಳು ಮತ್ತು ಸರಕಾರ
ಕೂಡಲೇ ಈ ನಿರ್ಧಾರವನ್ನ ಕೈ ಬಿಡುವಂತೆ
ಆಗ್ರಹಿಸಿದರು.
ನಂತರ ಭೂಸ್ವಾಧೀನಾಧಿಕಾರಿಗಳಾದ ನಾಗಪ್ಪ ಎಮ್ ಜಿ ಕೆ ಪತ್ರಕರ್ತರಿಗೆ ಮಾಹಿತಿ ನೀಡುತ್ತಾ,ನಮ್ಮ ಮೇಲಾಧಿಕಾರಿಗಳು ನೆರೆಹಾವಳಿಗೆ ತುತ್ತಾದ ಗ್ರಾಮಗಳಾದ ಹುಲಗಬಾಳ,ಸಪ್ತಸಾಗರ, ನದಿ ಇಂಗಳಗಾಂವ,ಗ್ರಾಮಗಳಿಗೆ ಪುನರ್ವಸತಿಗಾಗಿ ಭೂಮಿ ಸರ್ವೇ ಕಾರ್ಯ ಮಾಡಲು ಹೇಳಿದಾಗ ನಾವು ಬಂದಿದ್ದೇವೆ ಆದರೆ ಇಲ್ಲಿ ರೈತರು ಭೂಮಿ ನೀಡಲು ಹಿಂದೇಟು  ಹಾಕುತ್ತಿದ್ದಾರೆ ಇದನ್ನ ಮೇಲಾಧಿಕಾರಿಗಳಿಗೆ ತಿಳಿಸಲಾಗುವದು ಎಂದರು
ಈ ವೇಳೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ
ಮಹೇಶ ಮೇತ್ರಿ ಮಾತನಾಡಿ ತಾಲೂಕಾಡಳಿತದಿಂದ
ಈಗಾಗಲೇ ನಮ್ಮ ಜಮೀನುಗಳ ಸುತ್ತಮುತ್ತಲು
ಸರ್ವೇ ಕಾರ್ಯ ನಡೆಸಿ 130 ಎಕರೆ ಕೃಷಿ ಭೂಮಿಯನ್ನು
ನೆರೆ ಸಂತ್ರಸ್ತರ ಮನರ್ವಸತಿಗಾಗಿ ಭೂಸಾಧೀನ
ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ.
ನಾವು ಇದೇ ಭೂಮಿಯನ್ನು ನಂಬಿ ಜೀವನ
ಕಟ್ಟಿಕೊಂಡಿದ್ದೇವೆ. ಇರುವ ಭೂಮಿಯನ್ನು
ಕಸಿದುಕೊಂಡರೆ ನಾವು ಬದುಕುವುದು ಹೇಗೆ..?
ನಾವು ಸಣ್ಣ ಮತ್ತು ಅತಿ ಸಣ್ಣ ರೈತರು, ನಮಗೆ
ಯಾವುದೇ ನೀರಾವರಿ ವ್ಯವಸ್ಥೆ ಇಲ್ಲದಿದದ್ದರೂ ಜೀವನ ನಡೆಸುತ್ತಿದ್ದೇವೆ.
ನದಿ ಇಂಗಳಗಾಂವ, ಸಪ್ತಸಾಗರ, ತಿರ್ಥ,
ಹುಲಗಬಾಳ, ಗ್ರಾಮದ ನೇರೆ ಸಂತ್ರಸ್ಥರಿಗೆ
ಪುನರ್ವಸತಿ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ
ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ ಎನ್ನಲಾಗಿದೆ. ಮುಂದಿನ ದಿನಮಾನಗಳಲ್ಲಿ ರಕ್ತಕ್ರಾಂತಿಯಾದರೂ
ಸರಿಯೇ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ
ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಜಯಶ್ರೀ ಗಸ್ತಿ,ನಮ್ಮ ಮನೆಯಲ್ಲಿ ಯಾರಿಗೂ ನೌಕರಿ ಇದೆ ಜಮೀನಿನಲ್ಲಿ ನಾವು ಹೊಟ್ಟೆ ತುಂಬಿಸಿಕೊಳ್ಳುತಗತಿದ್ದೇವೆ ಇಂತಹ ಸಂದರ್ಭದಲ್ಲಿ ಜಮೀನು ಪುನರ್ವಸತಿಗಾಗಿ ಸರ್ವೆ ಮಾಡಲು ಅಧಿಕಾರಿಗಳು ಬಂದಿದ್ದಾರೆ ನಾವು ನಮ್ಮ ಪ್ರಾಣ ಹೋದರೂ ಚಿಂತೆಯಿಲ್ಲ ನಮ್ಮ ಜಮೀನು ಮಾತ್ರ ಯಾರಿಗೂ ಬಿಟ್ಟು ಕೊಡುವದಿಲ್ಲ ಎಂದರು
ಈ ಸಂದರ್ಭದಲ್ಲಿ ಪ್ರಭು ಲಗಳಿ, ಡಾ. ಸಾಧಿಕ ಗಲಗಲಿ,
 ಶ್ರೀಶೈಲ ಹಳದಮಳ, ಆಕಾಶ ಬುಟಾಳಿ, ಚನ್ನಪ್ಪ
ಗಸ್ತಿ,  ಅಶೋಕ ಭಜಂತ್ರಿ,ಸದಾಶಿವ ತೊದಲಬಾಗಿ,ತಮ್ಮಣ್ಣ ಭಜಂತ್ರಿ,ಆತಿಕ ಮೋಮಿನ,ಸೋಮು ಮಲಾಬಾದ,ನೀರಾವರಿ ಇಲಾಖೆಯ ಎಇಇ ನಾಗಪ್ಪ ಎಮ್ ಜಿ‌ಕೆ,ಎಸ್ ಜೆ.ಲಾಂಡಗೆ,ಭರತೇಶ ಮಹೀಷವಾಡಗಿ ಹಾಗೂ ದುಂಡಪ್ಪ ತಳವಾರ  ಸೇರಿದಂತೆ ಹಲವರು ಉಪಸ್ಥಿತರಿದ್ದರು.