Belagavi News In Kannada | News Belgaum

ಕೆಲಸಕ್ಕೆ ಹಾಜರಾಗುವಂತೆ ಶಾವಿಗೆ ಮಲ್ಲಮ್ಮಳಿಗೆ ಡಿಸಿ ಸೂಚನೆ

ಬೆಳಗಾವಿ: ಸುವರ್ಣ ವಿಧಾನಸೌಧದ ಆವರಣದಲ್ಲಿ ಶಾವಿಗೆ ಒಣಗಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲಸ ಕಳೆದುಕೊಂಡ,  ಮಲ್ಲಮ್ಮಳಿಗೆ ಮರಳಿ ಕೆಲಸಕ್ಕೆ ಹಾಜರಾಗುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ   ಅವರು ಸೂಚನೆ  ನೀಡಿದ್ದಾರೆ.

ಸರ್ಕಾರ ನಿರ್ಧಾರಕ್ಕೆ ರಾಜ್ಯಾದ್ಯಂತ  ಆಕ್ಷೇಪ ವ್ಯಕ್ತವಾಗಿತ್ತು, ಮಲ್ಲಮಳ ಪರವಾಗಿ ಧ್ವನಿ ಎತ್ತಿದ್ದರು. ಇದರಿಂದ ಮುಜುಗರಕ್ಕೆ ಒಳಗಾದ ಜಿಲ್ಲಾಡಳಿತ ಮಹಿಳೆಯನ್ನು ಕೆಲಸಕ್ಕೆ ನೇಮಿಸಿಕೊಂಡಿದೆ. ಮನೆ ನಿರ್ಮಿಸಿ ಕೊಡುವುದಾಗಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ   ಅವರು ಭರವಸೆ ನೀಡಿದ್ದಾರೆ.

ಶಾವಿಗೆ ಒಣ ಹಾಕಿದ ಪ್ರಕರಣದ ಬೆನ್ನಲ್ಲೇ ಮಲ್ಲಮ್ಮಳಿಗೆ ಮನೆ ನೀರ್ಮಿಸಿಕೊಡುವಂತೆ ಸರ್ಕಾರಕ್ಕೆ ಜನಸಾಮಾನ್ಯರು ಒತ್ತಾಯಿಸಿದ ಹಿನ್ನಲೆಯಲ್ಲಿ, ಆದಷ್ಟು ಬೇಗ ಸೂರು ಕಲ್ಪಿಸುವ ಭರವಸೆಯನ್ನು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ನೀಡಿದ್ದಾರೆ.//////