ಕೆಲಸ ಕೊಡಿಸುವುದಾಗಿ ಯುವತಿಯರಿಂದ ಪೋನ್ ಮಾಡಿ ವಂಚನೆ: ಇಬ್ಬರ ಬಂಧನ

ಬೆಂಗಳೂರು:ಕೆಲಸ ಕೊಡಿಸುವುದಾಗಿ ನಂಬಿಸಿ ಸಾವಿರಾರು ನಿರುದ್ಯೋಗಿಗಳಿಗೆ ವಂಚಿಸಿದ್ದ ಇಬ್ಬರನ್ನು ಈಶಾನ್ಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜರಾಜೇಶ್ವರಿನಗರದ ರಘು ಅಲಿಯಾಸ್ ನವನೀತ್(27) ಮತ್ತು ಗಾಯತ್ರಿನಗರದ ಸಾಯಿಕಿರಣ್(25) ಬಂಧಿತ ವಂಚಕರು.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 11 ಮೊಬೈಲ್ಗಳು, 2 ಸಿಪಿಯು, 1 ಲ್ಯಾಪ್ಟಾಪ್ ಹಾಗೂ 43 ಸಾವಿರ ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಕಾನ್ ಲಾಬೊರೆಟೋರಿಸ್ ಇಂಡಿಯಾ ಪ್ರೈ.ಲಿ., ಎಂಬ ಕಂಪನಿಯ ಹೆಸರನ್ನು ಬಳಸಿಕೊಂಡು ಅಪರಿಚಿತ ಯುವತಿಯರು ಕಳೆದ ಡಿಸೆಂಬರ್ 23ರಿಂದ 29ರವರೆಗೆ ಪಿರ್ಯಾದುದಾರರಿಗೆ ಮೊಬೈಲ್ನಲ್ಲಿ ಕರೆ ಮಾಡಿ ತಾವು ಕಂಪನಿಯ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾರೆ.
ನಿರುದ್ಯೋಗಿಗಳಿಗೆ ಅಲ್ಕಾನ್ ಕಂಪನಿಯಲ್ಲಿ ಕೆಲಸ ಕೊಡಿಸುತ್ತೇ ವೆಂದು ನಂಬಿಸಿ ನಕಲಿ ಈಮೇಲ್ ಸೃಷ್ಟಿಸಿಕೊಂಡು ಆ ಕಂಪನಿಯ ಲೋಗೋವನ್ನು ಪ್ರೊಫೈಲ್ನಲ್ಲಿ ಅಳವಡಿಸಿಕೊಂಡು ನಂಬಿಕೆ ಬರುವಂತೆ ಮಾಡಿದ್ದಾರೆ. ಇವರ ಮಾತನ್ನು ನಂಬಿದ ನಿರುದ್ಯೋಗಿಗಳಿಗೆ ಸಂದರ್ಶನ ಮತ್ತು ಪರೀಕ್ಷೆಗಳನ್ನು ಸಹ ನಡೆಸಿ ತಮ್ಮ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿಕೊಂಡಿಕೊಂಡು ವಂಚಿಸುತ್ತಿದ್ದರು.
ಈ ಕಾರ್ಯಾಚರಣೆಯನ್ನು ಇನ್ಸ್ಪೆಕ್ಟರ್ ಸಂತೋಷ್ರಾಮ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಕೈಗೊಂಡು ವಂಚಕರನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿ ಯಾಗಿದೆ.//////