Belagavi News In Kannada | News Belgaum

ಕಾನೂನು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ: ಎಡಿಜಿಪಿ ಅಲೋಕ್ ಕುಮಾರ್ ಎಚ್ಚರಿಕೆ

ಬೆಳಗಾವಿ: ರಾಜ್ಯದಲ್ಲಿ ಕಾನೂನು ಉಲ್ಲಂಘನೆ ಮಾಡಿದವರ ಮೇಲೆ ನಾವು ಕ್ರಮ ಜರಗಿಸುತ್ತಿದ್ದು, ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವವರ ಮೇಲೆ ರೆಕಾರ್ಡ್ ಬಿಲ್ಡ್ ಮಾಡ್ತಿದ್ದೇವೆ. ಯಾರು ಹೇಳಿಕೆ ಕೊಡುತ್ತಿದ್ದಾರೆ ಅದನ್ನು ರೆಕಾರ್ಡ್ ಮಾಡುತ್ತಾ ಇದ್ದೇವೆ ಎಂದು ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಚೋದನಕಾರಿ ಹೇಳಿಕೆ ನೀಡ್ತಿರುವವರ ಮೇಲೆ ರೆಕಾರ್ಡ್ ಬಿಲ್ಡ್ ಮಾಡ್ತಿದ್ದೇವೆ. ಯಾರು, ಯಾರು ಹೇಳಿಕೆ ಕೊಡುತ್ತಿದ್ದಾರೋ ಅದನ್ನು ರೆಕಾರ್ಡ್ ಮಾಡುತ್ತಾ ಇದ್ದೇವೆ ಎಂದರು.

ಸದ್ದು ಮಾಡುವ ಸಂಘಟನೆಗಳ ಮೇಲೆ ಪೊಲೀಸ ಕಣ್ಣು: ಯಾವ ಒಂದು ವರ್ಗಕ್ಕೆ ಮಾತ್ರ ಅಲ್ಲಾ ಎಲ್ಲಾ ಸಮುದಾಯದಯಕ್ಕೂ ಒಂದೇ ಕಾನೂನು ಇರುತ್ತದೆ. ಯಾವ ರೀತಿ ಮಾತನಾಡುತ್ತಾರೆ ಅದನ್ನು ರೆಕಾರ್ಡ್ ಬಿಲ್ಡ್ ಮಾಡಿಕೊಂಡು ಕ್ರಮಜರಗಿಸುತ್ತೇವೆ. ಕೆಲವು ಕಡೆ ಪ್ರಮೋದ್ ಮುತಾಲಿಕ್ ಹೋಗಬಾರದು ಅಲ್ಲಿ 144 ಸೆಕ್ಷನ್ ಹಾಕಿಸಿದ್ದೇವೆ. ಇಂದು ಬೀದರ್ ಹೋಗುತ್ತಿದ್ದರು ಅಲ್ಲಿ ಎಂಟ್ರಿಯಾಗಬಾರದು. ಅನುಭವ ಮಂಟಪ ವಿಚಾರಕ್ಕೆ ಕಾಲಿಡಬಾರದು. ಎಲ್ಲೇಲ್ಲಿ ಏನೂ ಕ್ರಮಜರುಗಿಸಬೇಕು. ಅದನ್ನು ನಾವು ಮಾಡುತ್ತಿದ್ದೇವೆ. ಪೊಲೀಸ್ ಇಲಾಖೆ ಏನೂ ಕೆಲಸ ಮಾಡಬೇಕು. ಅದನ್ನು ಮಾಡುತ್ತಿದೆ. ಸಂಘಟನೆಗಳ ಮೇಲೆ ಕಣ್ಣಿಟ್ಟಿದ್ದೇವೆ. ಆ ಸಂಘಟನೆಗಳ ವಿರುದ್ಧ ರೆಕಾರ್ಡ್ ಬಿಲ್ಡ್ ಮಾಡುತ್ತಿದ್ದೇವೆ. ಸಮಯ ಬಂದಾಗ ಏನು ಮಾಡೋದಿದೆ ಅದನ್ನು ಮಾಡುತ್ತೇವೆ ಎಂದರು.
ಕಿಚ್ಚು ಹಚ್ಚುವ ಸುದ್ದಿ ಬಂದ ಮಾಡಿ: ಮಾಧ್ಯಮದವರು ತಾಂಬೂಲ ಪ್ರಶ್ನೆಯಂತಹ ಸುದ್ದಿಗಳನ್ನು ಹೆಚ್ಚಾಗಿ ತೋರಿಸಬೇಡಿ. ನಿಮಗೂ ಕೂಡ ಜವಾಬ್ದಾರಿ ಇರುತ್ತದೆ. ಹೀಗಾಗಿ ಕೆಲವು ಜನರು ಪ್ರಚಾರ ಬಯಸಿ ಮಾಧ್ಯಮಗಳಲ್ಲಿ ಹೆಚ್ಚಾಗಿ ಮಾತನಾಡ್ತಿದ್ದಾರೆ. ಅವರ ಕವರೇಜ್ ಬಂದ್ ಮಾಡಿದರೆ ಮಾರನೇ ದಿನ ಮಾತನಾಡುವುದನ್ನು ತಾವೇ ಬಂದ್ ಮಾಡ್ತಾರೆ. ಎಷ್ಟು ಕವರೇಜ್ ಮಾಡಬೇಕು ಅಷ್ಟು ಮಾತ್ರ ಕವರ್ ಮಾಡಿ ಎಂದರು//////