Belagavi News In Kannada | News Belgaum

ರಾಷ್ಟ್ರ ಮಟ್ಟದ ಚದುರಂಗ ಸ್ಪರ್ಧೆಗೆ ಶಿಕ್ಷಕಿ ಮಠಪತಿ ಆಯ್ಕೆ

ಹುಕ್ಕೇರಿ: ತಾಲೂಕಿನ ಗುಡಸ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಕನ್ನಡ ಭಾಷಾ ಶಿಕ್ಷಕಿ ಆರ್.ಸಿ. ಮಠಪತಿ ಅವರು ರಾಷ್ಟ್ರ ಮಟ್ಟದ ಚದುರಂಗ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ ಚದುರಂಗ ಸ್ಪರ್ಧೆಯಲ್ಲಿ ಮಠಪತಿ ವಿಜೇತರಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಿಕ್ಷಕಿ ಮಠಪತಿ ಅವರ ಸಾಧನೆಗೆ ಸಚಿವ ಉಮೇಶ ಕತ್ತಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ಬಿಇಒ ಮೋಹನ ದಂಡಿನ್, ಬಿಆರ್‌ಸಿ ಎಸ್.ಡಿ. ನಾಯಿಕ, ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಎಸ್.ಎಸ್. ಹಿರೇಮಠ, ಶಾಲಾ ಸಿಬ್ಬಂದಿ ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ./////