Belagavi News In Kannada | News Belgaum

ಪಡಿತರದಾರರಿಗೆ ಇ-ಕೆವೈಸಿ ಕಡ್ಡಾಯ: ಜೂನ್ ಅಂತ್ಯದವರೆಗೂ ಅವಕಾಶ

ಬೆಳಗಾವಿ: ಜಿಲ್ಲೆಯ ಪಡಿತರ ಚೀಟದಾರರು ಸಮೀಪದ ನ್ಯಾಯಬೆಲೆ ಅಂಗಡಿಗೆ ಹೋಗಿ ಇ- ಕೆವೈಸಿಯನ್ನು ಮಾಡಿಸಿಕೊಳ್ಳುಲು ಇಲಾಖೆಯ ತಂತ್ರಾಂಶದಲ್ಲಿ ಜೂನ್ ಕೊನೆಯವರೆಗೂ ಅವಕಾಶವನ್ನು ಕಲ್ಪಿಸಲಾಗಿದೆ.
ಬಾಕಿ ಉಳಿದ ಪಡಿತರ ಚೀಟದಾರರು ಮುಂದಿನ ದಿನಳಲ್ಲಿ ನಿರಂತರವಾಗಿ ಪಡಿತರ ಪದಾರ್ಥಗಳನ್ನು ಪಡೆಯಲು ಕಡ್ಡಾಯವಾಗಿ ಇ-ಕೆವೈಸಿ ಯನ್ನು ಮಾಡಿಸಿಕೊಳ್ಳುಬೇಕು ಒಂದು ವೇಳೆ ಇ-ಕೆವೈಸಿ ಮಾಡಿಸದಿದ್ದರೆ ಪಡಿತರ ಸ್ಥಗಿತಗೊಳ್ಳಲಿದೆ.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯಹಾರಗಳ ಇಲಾಖೆಯ ಆಯುಕ್ತರ ಜೊತೆಗೆ ವಿಡಿಯೋ ಸಂವಾದದಲ್ಲಿ ಇ-ಕೆವೈಸಿ ಕುರಿತಾಗಿ ಚರ್ಚಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 68.960 ಅಂತ್ಯೋದಯ ಚೀಟಿಗಳ ಪೈಕಿ 50.051 ಪಡಿತರದಾರರು ಇ-ಕೆವೈಸಿ ಮಾಡಿಸಿಕೊಂಡಿದ್ದು, 18.909 ಪಡಿತರದಾರರು ಬಾಕಿ ಉಳಿದುಕೊಂಡಿದ್ದಾರೆ. 10.75.635 ಬಿಪಿಎಲ್ ಪಡಿತರ ಚೀಟಿಗಳ ಪೈಕಿ 8.92.392 ಪಡಿತರದಾರರು ಇ-ಕೆವೈಸಿ ಮಾಡಿಸಿಕೊಂಡಿದ್ದು1,83,243 ಪಡಿತರದಾರರು ಬಾಕಿ ಉಳಿದುಕೊಂಡಿದ್ದಾರೆ. ಜೂನ್ ಅಂತ್ಯದೊಳಗಾಗಿ ಬಾಕಿ ಉಳಿದ ಪಡಿತರದಾರರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳಲೇಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////