Belagavi News In Kannada | News Belgaum

ಪೋಲಿಸರ ಆರೊಗ್ಯ ವ್ರದ್ದಿಗೆ ಸಿಪಿಐ ತಹಸೀಲ್ದಾರ ನೇತ್ರತ್ವದಲ್ಲಿ ಯೋಗಾಸನ ಕ್ರಿಕೆಟ್‌

ಹುಕ್ಕೇರಿ: ಪೋಲಿಸರ ಆರೊಗ್ಯ ವ್ರದ್ದಿಗೆ ಸಿಪಿಐ ತಹಸೀಲ್ದಾರ ನೇತ್ರತ್ವದಲ್ಲಿ ಯೋಗಾಸನ ಕ್ರಿಕೆಟ್‌ ಹುಕ್ಕೇರಿ ಪೋಲಿಸ್ ಠಾಣೆಯಲ್ಲಿ ಪೋಲಿಸ್ ಸಿಬ್ಬಂದಿಗಳ ಪಿಜಿಕಲ್ ಪಿಟ್ನೆಸ್ ಹಾಗೂ ಆರೋಗ್ಯದ ಕಡೆ ಗಮನ ಇರಲಿ ಎಂದು ಪೋಲೀಸ್ ಠಾಣೆಯ ಎಲ್ಲಾ ಸಿಬ್ಬಂದಿಗಳಿಗೂ ಪ್ರತಿ ರವಿವಾರ ಬೆಳಿಗ್ಗೆ ೬ ಗಂಟೆಗೆ ಪರೇಡ್ ಯೋಗಾಸನ ಕ್ರಿಕೇಟ್ ಹಾಗೂ ರನ್ ಆ್ಯಂಡ ವಾಕ್ ಶ್ರಮಧಾನ ಸ್ವಚ್ಚತಾ ಕಾರ್ಯಕ್ರಮ ಹೀಗೆ ಹಲವು ಪೀಠಿಕೆಗಳನ್ನ ಅನುಸರಿಸಿ ಸಿಬ್ಬಂದಿಗಳಿಗೆ ಒಳ್ಳೆಯ ಗುಣಮಟ್ಟದ ಆರೋಗ್ಯ ಕಾಪಾಡುವ ದ್ರಷ್ಟಿಯಿಂದ ಶಾಲೆಯಲ್ಲಿ ಪಾಠದ ಜೊತೆಗೆ ಆಟ ಎಂಬಂತೆ ಪೋಲಿಸ ಕೆಲಸದ ಜೋತೆಗೆ ಯೋಗಾಸನ ಕ್ರೀಡೆ ರನ್ ಆ್ಯಂಡ ವಾಕ್ ಮಾಡಿಸತ್ತಿರುವದು ವಿಷೇಶವಾಗಿದೆ.ಈ ರವಿವಾರ ಯೋಗಾಸನ ಮಾಡಿದರೆ ಮುಂದಿನ ರವಿವಾರ ಕ್ರಿಕೇಟ ಹಾಗೆ ಪ್ರತಿ ರವಿವಾರಕ್ಕೋಮ್ಮೆ ಹೊಸ ಹೊಸ ಬಗೆಯ ಆಯಾಮಗಳಲ್ಲಿ ಕ್ರೀಡೆಗಳನ್ನ ಇಟ್ಟುಕೊಂಡು ಸಿಬ್ಬಂದಿಗಳೊಂದಿಗೆ ಅಧಿಕಾರಿ ಎನ್ನುವದಕ್ಕಿಂತ ಗೆಳೆಯರ ಹಾಗೇ ಕಾರ್ಯನಿರ್ವಸುತ್ತಾರೆಂದು ಸಿಬ್ಬಂದಿಗಳು ಶ್ಲಾಘಿಸುತ್ತಾರೆ.

 

ಕೆಲ ಸಿಬ್ಬಂದಿಗಳ ಭೌತಿಕವಾಗಿ ಹಾಗೂ ಮಾನಸಿಕವಾಗಿ ಬಲ ಹೊಂದಬೇಕು ನಮ್ಮ ಶರೀರ ನಮಗೆ ಜಡವಾಗವಾರದು .ಅದಕ್ಕೆ ಪ್ರತಿ ರವಿವಾರ ಅಷ್ಟೆ ಅಲ್ಲ ದಿನಾಲೂ ವ್ಯಾಯಾಮ ಯೋಗಾಸನ ಧ್ಯಾನ ಕ್ರೀಡೆ ಹೀಗೆ ಹಲವೂ ಕಾರ್ಯಕ್ರಮದಲ್ಲಿ ತೊಡಗಿಕೊಂಡು ಆರೋಗ್ಯ ವ್ರದ್ದಿಸಿಕೊಂಡು ನಗುನಗುತಾ ಇರಬೇಕೆಂದು ಸಿಪಿಐ ಮಹಮ್ಮದ ರಪೀಕ ತಹಶೀಲ್ದಾರ (CPI) ಇವರು ಸಿಬ್ಬಂದಿಗಳಿಗೆ ಒಳ್ಳೆಯ ಉದಾಹರಣೆ ಆಗಿದ್ದಾರೆ.

ಪರೇಡ್ ಯೋಗಾಸನ ಕ್ರಿಕೆಟ್ ರನ್ ಆಂಡ ವಾಕ್ ಎಲ್ಲಾ ಮುಗಿದ ಮೇಲೆ ಬೆಳಗಿನ ಉಪಹಾರವನ್ನು ಕೂಡ ಸಿಪಿಐ ರಪೀಕ ಸರ್ ವ್ಯವಸ್ಥೆ ಮಾಡಿಸಿರುತ್ತಾರೆ.ಇನ್ನೂ ಕ್ರೀಡೆಯಲ್ಲಿ ಪಿಎಸ್ಐ ಸಿದ್ರಾಮಪ್ಪ ಉನ್ನದ ಪ್ರೋಬೆಶನರಿ ಪಿಎಸ್ಐ ಜ್ಯೋತಿ ವಾಲಿಕರ ಎಎಸ್ಐ ಶೆಟ್ಟನ್ನವರ ಸಿಬ್ಬಂದಿಗಳಾದ ರವಿ ಢಂಗ ಅಜೀತ ನಾಯಿಕ ಮಂಜುನಾಥ ಕಬ್ಬೂರೆ ಉಮೇಶ ಅರಭಾಂವಿ ಬಿ ವ್ಹಿ ನೆರಲಿ ಮೂಸಾ ಅತ್ತಾರ ಎಲ್ಲ ಸಿಬ್ಬಂದಿಗಳೂ ಹಾಜರಿದ್ದರು.