Belagavi News In Kannada | News Belgaum

2.77 ಲಕ್ಷ ಮೌಲ್ಯದ ಮದ್ಯ ಜಪ್ತಿ

ರಾಯಚೂರು: ಅಕ್ರಮವಾಗಿ ಲಕ್ಷಾಂತರ ರೂ. ಮೌಲ್ಯದ ಮದ್ಯ ಸಾಗಣೆ ಮಾಡುತ್ತಿದ್ದ ಆರೋಪಿಯನ್ನ ಅಬಕಾರಿ ಪೊಲೀಸರು ರೆಡ್‍ಹ್ಯಾಂಡ್ ಆಗಿ ಹಿಡಿದಿದ್ದಾರೆ.

ರಾಯಚೂರು ತಾಲೂಕಿನ ಚಿಕ್ಕಮಂಚಾಲಿ ಬಳಿ ಮದ್ಯ ಸಾಗಾಟ ಮಾಡುತ್ತಿದ್ದ ಆಟೋ ಜಪ್ತಿ ಮಾಡಿದ್ದಾರೆ. ತಲಮಾರಿ ಗ್ರಾಮದ ಖಾಜಾ ಹುಸೇನ್ ಎಂಬಾತ ಅಕ್ರಮವಾಗಿ ಮದ್ಯ ಸಾಗಾಣೆ ಮಾಡುತ್ತಿದ್ದ. ದಾಳಿ ವೇಳೆ ಅಬಕಾರಿ ಪೊಲೀಸರು 2,41,920 ಲೀಟರ್ ಮದ್ಯ ಮತ್ತು 78 ಸಾವಿರ ಲೀಟರ್ ಬಿಯರ್ ಜಪ್ತಿಮಾಡಿದ್ದಾರೆ.

ಸುಮಾರು 2,77,996 ರೂ.ಮೌಲ್ಯದ ಮದ್ಯ ಜಪ್ತಿಯಾಗಿದೆ. ದಾಳಿ ಹಿನ್ನೆಲೆ ರಾಯಚೂರು ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////