Belagavi News In Kannada | News Belgaum

ಯಾದವಾಡ ಗ್ರಾಮಕ್ಕೆ ಬಸ್‌ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಮನವಿ

ಗೋಕಾಕ: ಯಾದವಾಡ ಗ್ರಾಮಕ್ಕೆ  ಇಳಿಸಂಜೆ ಬಸ್‌ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ  ಗ್ರಾಮಸ್ಥರು  ಭಾನುವಾರ  ಗೋಕಾಕ ಸಾರಿಗೆ ಇಲಾಖೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಯಾದವಾಡ ಸೇರಿದಂತೆ ಹಲವು ಗ್ರಾಮಗಳಿಂದ  ಶಾಲಾ- ಕಾಲೇಜು ವಿದ್ಯಾರ್ಥಿಗಳು,  ಶಿಕ್ಷಕರು ಹಾಗೂ ಉದ್ಯೋಗಸ್ಥರು  ನಿತ್ಯವೂ  ಗೋಕಾಕ ನಗರಕ್ಕೆ  ಪ್ರಯಾಣ ಬೆಳೆಸುತ್ತಾರೆ.  ಇಳಿಸಂಜೆ ಗ್ರಾಮಗಳಿಗೆ ತೆರಳಲು ಬಸ್‌ಗಳ ಕೊರತೆ ಇದೆ. ಹೀಗಾಗಿ ಅಧಿಕಾರಿಗಳು ಈ ಮಾರ್ಗದ  ಗ್ರಾಮಗಳಿಗೆ  ಸಾಯಂಕಾಲ ಬಸ್‌ ವ್ಯವಸ್ಥೆ ಕಲ್ಪಿಸಬೇಕೆಂದು  ಆಗ್ರಹಿಸಿದರು.

ರಾತ್ರಿ ಸಮಯದಲ್ಲಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಇದೆ.  ಶಾಲಾ ಮಕ್ಕಳ ಹಿತದೃಷ್ಟಿಯಿಂದ ಯಾದವಾಡ ಗ್ರಾಮಕ್ಕೆ ಸಕಾಲಕ್ಕೆ ಬಸ್‌ ಬಿಡುಗಡೆ ಮಾಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ಶಾಲೆ, ಕಾಲೇಜುಗಳ ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ನೌಕರರು ಸೇರಿದಂತೆ ಯಾದವಾಡಿ ಗ್ರಾಮಸ್ಥರು ಇತರರು ಇದ್ದರು.//////