ಬಾಲಿವುಡ್ ಸ್ಟಾರ್ ನಟರಾದ ಸಲ್ಮಾನ ಖಾನ್ ಹಾಗು ‘ಕತ್ರಿನಾ ಕೈಫ್’ ಗೂ ಕೊರೋನಾ ಪಾಸಿಟಿವ್..!

ಮುಂಬೈ: ಬಾಲಿವುಡ್ ಇಬ್ಬರು ಸ್ಟಾರ್ ನಟರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಚಿಕಿತ್ಸೆಗಾಗಿ ಹೋಂ ಕ್ವಾರೇಂಟನ್ ಆಗಿರುವ ವರದಿಯಾಗಿದೆ.
ಕೊರೋನಾ ಎರಡನೇ ಏಲ್ ಜೋರಾಗಿದೆ. ಪ್ರಸ್ತುತ ಕೆಲ ದಿನಗಳಿಂದ ಬಾಲಿವುಡ್ ಗೆ ಎಂಟ್ರಿ ಕೊಟ್ಟಿರುವ ಕೊರೋನಾ ಕಳೆದ ಮೂರೂ ನಾಲ್ಕು ದಿನಗಳಲ್ಲಿ, ಅಕ್ಷಯ ಕುಮಾರ್, ವಿಕಿ ಕೌಶಲ್, ಭೂಮಿ ಪಡ್ನೆಕರ್, ಗೋವಿಂದ ಕಾರ್ತಿಕ್ ಆರ್ಯನ್ ಗೆ ಕೊರೋನಾ ಪಾಸಿಟಿವ್ ಆಗಿದೆ. ಇಂದು ಮತ್ತೊಬ್ಬ ಬಾಲಿವುಡ್ ನಟಿಗೆ ಕೊರೋನಾ ಪಾಸಿಟಿವ್ ಆಗಿದೆ. ಅದು ಬೇರೆ ಯಾರು ಅಲ್ಲ ಕತ್ರಿನಾ ಕೈಫ್. ನಟ ಸಲ್ಮಾನ ಖಾನ್ ಅವರಿಗೆ ಕೊವಿಡ್ ಪಾಸಿಟಿವ್ ಬಂದಿದೆ.
ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದು ಕೊಂಡಿರುವ ಕತ್ರಿನಾ ಕೈಫ್’, “ನಾನು ಕೋವಿಡ್ 19 ಪಾಸಿಟಿವ್ ಆಗಿದೆ. ನಾನು ತಕ್ಷಣ ಹೋಂ ಕ್ವಾರಂಟೈನ್ ಆಗಿದ್ದೇನೆ. ನಾನು ವೈದ್ಯರ ಸಲಹೆಯ ಮೇರೆಗೆ ಕೋವಿಡ್ ಗೆ ಸಂಬಂಧಿಸಿದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತಿದ್ದೇನೆ. ನನ್ನ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬರು ಕೂಡಲೇ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ವಿನಂತಿಸುತ್ತಿದ್ದೇನೆ.” ಬರೆದು ಕೊಂಡಿದ್ದಾರೆ/////