Belagavi News In Kannada | News Belgaum

2ನೇ ಪಡೆ ಕೆ.ಎಸ್.ಆರ್.ಪಿ ಬೆಳಗಾವಿ ಘಟಕದಲ್ಲಿ ವಿಶ್ವ ಪರಿಸರ ದಿನಾಚರಣೆ

ಬೆಳಗಾವಿ: 2ನೇ ಪಡೆ ಕೆ.ಎಸ್.ಆರ್.ಪಿ ಬೆಳಗಾವಿ ಘಟಕದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಶ್ರೀ ಹಂಜಾ ಹುಸೇನ್ ಕಮಾಂಡೆಂಟ್ ರವರ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ 3000 ಸಾವಿರ ಸಸಿಗಳನ್ನು ನೆಟ್ಟು ಅವುಗಳ ಸಂರಕ್ಷಣೆ ಹಾಗೂ ಪೋಷಣೆ ಮಾಡಿದ್ದರಿಂದ ದೊಡ್ಡ ಗಿಡಗಳಾಗಿ ಬೆಳೆದು ಹೂ, ಹಣ್ಣು ಕೊಡುತ್ತಿವೆ. ಕರೋನಾ ದಂತಹ ಸಂಧರ್ಭದಲ್ಲಿ ಆಮ್ಲಜನಕ, ಜೀವ ವೈವಿಧ್ಯತೆ ಹಾಗೂ ಪಕ್ಷಿಗಳಿಗೆ ಆಹಾರ ನೀರು ಹಾಗೂ ವಾಸಸ್ಥಾನ ನೀಡಿದ್ದು ಸುತ್ತಮುತ್ತಲಿರುವ ಕೈಗಾರಿಕೆಗಳ ವಾಯುಮಾಲಿನ್ಯದಿಂದ ರಕ್ಷಣೆ ನೀಡುತ್ತಿದೆ.

        ಇದರಿಂದ ಪಡೆಯ ಆವರಣದಲ್ಲಿ ವಾಸಿಸುವ ಅಧಿಕಾರಿ/ಸಿಬ್ಬಂದಿಗಳ ಹಾಗೂ ಕುಟುಂಬ ವರ್ಗದವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿರುತ್ತದೆ.
   ಈ ವರ್ಷವು ಕೂಡಾ ಪಡೆಯ ಆವರಣ ಹಾಗೂ ಧಾರವಾಡದ ಬೇಲೂರಿನ ಬಯಲು ಪ್ರದೇಶದಲ್ಲಿ 2000 ಸಾವಿರ ಸಸಿನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಸದರಿ ಕಾರ್ಯಕ್ರಮದಲ್ಲಿ ಶ್ರೀ ಚನ್ನಬಸವ ಸಹಾಯಕ ಕಮಾಂಡಂಟ್ ಮತ್ತು ಎಲ್ಲಾ RPI ಗಳು 2ನೇ ಪಡೆಯ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು//////