Belagavi News In Kannada | News Belgaum

ವಾಯವ್ಯ ಪದವಿಧರ ಮತ್ತು ಶಿಕ್ಷಕ ಕೇತ್ರಗಳ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಅತ್ಯಧಿಕ ಅಂತರದಿಂದ ಗೆಲವು ಸಾಧಿಸುವದು ನಿಶ್ಚಿತ ಎಂದು ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ

ಬೆಳಗಾವಿ: ವಾಯವ್ಯ ಪದವಿಧರ ಮತ್ತು ಶಿಕ್ಷಕ ಕೇತ್ರಗಳ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಅತ್ಯಧಿಕ ಅಂತರದಿಂದ ಗೆಲವು ಸಾಧಿಸುವದು ನಿಶ್ಚಿತ ಎಂದು ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಹೇಳಿದರು.
ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯಿಂದ ರವಿವಾರದಂದು ಒಂದು ದಿನದ ಮತದಾರರ ಮಹಾಸಂಪರ್ಕ ಅಭಿಯಾನದಲ್ಲಿ ಮಾತನಾಡಿ, ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಪದವಿಧರ ಮತ್ತು ಶಿಕ್ಷಕ ಮತದಾರರ ಮನೆ ಮನೆಗೆ ಬಿಜೆಪಿ ಕಾರ್ಯಕರ್ತರು ಸಂಪರ್ಕ ಅಭಿಯಾನ ಪ್ರಾರಂಭಿಸಿದ್ದು ಪ್ರತಿ ಮತದಾರರ ಬಾಗಿಲಗೆ ನಮ್ಮ ನಡೆ ಎಂದರು.
ಮತದಾರರ ಹತ್ತಿರ ಮತಯಾಚನೆ ಮಾಡುವಾಗ ಪ್ರತಿಯೊಬ್ಬ ಪ್ರಬುದ್ದ ಮತದಾರರು ಬಿಜೆಪಿ ಸರ್ಕಾರದ ಸಾಧನೆಗಳು ಪ್ರಧಾನಿ ಮೊದಿಯವರ ಕಾರ್ಯಕ್ಷಮತೆ ಹಾಗೂ ಕಳೆದ ಅವಧಿಯಲ್ಲಿ ಪದವಿಧರ ಕ್ಷೇತ್ರದಿಂದ ಐತಿಹಾಸಿಕ ಗೆಲುವು ಸಾಧಿಸಿದ ಹಣಮಂತ ನಿರಾಣಿಯವರ ಸರಳ ಸಜ್ಜನಿಕೆ ಹಾಗೂ ನಿರುದ್ಯೋಗ ಯುವಕರಿಗೆ ಉದ್ಯೋಗಗಳನ್ನು ಕೊಡಿಸುವದು, ನೀರಾವರಿ ಹೊಸ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ಮತ್ತು ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ವಿಧಾನಪರಿಷತ್ ನಲ್ಲಿ ಧ್ವನಿ ಎತ್ತುವ ಮೂಲಕ ಜನಮಾನಸದಲ್ಲಿ ಉಳಿದಿದ್ದಾರೆ. ಶಿಕ್ಷಕ ಕ್ಷೇತ್ರದಿಂದ ಯಶಸ್ವಿಯಾಗಿ ಎರಡು ಅವಧಿಯಲ್ಲಿ ಉತ್ತಮ ಕಾರ್ಯಮಾಡುವ ಮೂಲಕ ಅತಿಥಿ ಉಪನ್ಯಾಸಕರ ವೇತನ ತಾರತಮ್ಯ ಸರಿದೂಗಿಸಿ, ಅನೇಕ ಶಿಕ್ಷಣ ಸಂಸ್ಥೆಗಳನ್ನು ಅನುದಾನಕ್ಕೆ ಒಳಪಡಿಸಿದ ಕಿರ್ತಿ ಅರುಣ ಶಹಾಪುರ ಅವರಿಗೆ ಸಲ್ಲುತ್ತದೆ ಎಂದು ಮತದಾರರೆ ಅಭಿಪ್ರಾಯ ಪಟ್ಟಿದ್ದಾರೆ ಎಂದರು.
ಚುನಾವಣಾ ಕಣದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಉತ್ತಮ ವಾತಾವರಣ ನಿರ್ಮಾಣವಾಗಿದ್ದು ಎರಡು ಕ್ಷೇತ್ರಗಳಲ್ಲಿ ಬಹಲ ಅಂತರದ ಗೆಲವು ನಿಶ್ಚಿತ ಎಂದರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಚುನಾವಣಾ ಉಸ್ತುವಾರಿ ಎಫ್.ಎಸ್.ಸಿದ್ದನಗೌಡರ, ಜಿಲ್ಲಾ ಕಾನುನು ಘಟಕದ ಸಂಚಾಲಕ ರಾಜೇಂದ್ರ ಧರಿಗೌಡರ ಹಾಗೂ ಅನೇಕ ಕಾರ್ಯಕರ್ತರು ನಗರದಲ್ಲಿ ಮತದಾರರ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರಗೈಯದರು.