ಅಕ್ರಮವಾಗಿ ಪಡೀತರ ಚೀಟಿ ಅಕ್ಕಿ ಸಾಗಾಟಗಾರರ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ

ಅಕ್ರಮವಾಗಿ ಪಡೀತರ ಚೀಟಿ ಅಕ್ಕಿ ಸಾಗಾಟಗಾರರ ವಿರುದ್ಧ ಬೆಳಗಾವಿಯಲ್ಲಿ ಪ್ರತಿಭಟನೆ
ಬೆಳಗಾವಿ : ಇತ್ತಿಚ್ಚೀಗೆ ಕರ್ನಾಟಕ ರಾಜ್ಯಾದ್ಯಾಂತ ಪಡೀತರ ಚೀಟಿ ಅಕ್ಕಿಯ ಅಕ್ರಮ ಸಾಗಾಟ ಎಗ್ಗಿಲ್ಲದೆ ಸಾಗುತ್ತಿದೆ ಪ್ರತಿದಿನವೂ ಹಳ್ಳಿ ಹಳ್ಳಿಗೆ ಹೋಗಿ ಎಲ್ಲ ಅಕ್ರಮವಾಗಿ ಪಡೀತರ ಚೀಟಿಯ ಅಕ್ಕಿಯನ್ನು ಪಡೆದುಕೊಂಡು ತದನಂತರ ಅದನ್ನು ಒಂದು ಹತ್ತಿರು ದಾಸ್ತಾನು ಮಾಡಿ ಎಲ್ಲ ಅಕ್ಕಿಯನ್ನು ಸುಸಜ್ಜಿತವಾಗಿ ಚೀಲಗಳಲ್ಲಿ ತುಂಬಿ ಅದಕ್ಕೆ ಡುಪ್ಲಿಕೇಟ್ ಬಿಲ್ ಅನ್ನು ರೇಡಿ ಮಾಡಿ ಲಾರಿಗಳಲ್ಲಿ ಸುಮಾರು ಟನ್ ಗಟ್ಟಲೇ ನೆರೆಯ ರಾಜ್ಯ ಮಹಾರಾಷ್ಟ್ರಕ್ಕೆ ದುಡ್ಡಿನ ಆಸೆಗಾಗಿ ಸಾಗಿಸುತ್ತಾರೆ. ಮೊನ್ನೆಯಷ್ಟೇ ಬೆಳಗಾವಿ ಜಿಲ್ಲೆಯ ಕಾಕತಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಇ ತರಹದ ಎರೆಡು ಲಾರಿಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯದ ಕಾರ್ಯಕರ್ತರು ಅನುಮಾನಸ್ಪದವಾಗಿ ಹಿಡಿದು ನೋಡಿದಾಗ ಆ ಲಾರಿಗಳಲ್ಲಿ ಅಕ್ರಮ ಪಡಿತರ ಅಕ್ಕಿ ಇರುವುದು ದೃಢವಾಗಿದೆ. ತದನಂತರ 112 ತುರ್ತುವಾಹಿನಿಗೆ ಕರೆ ಮಾಡಿ ಮಾಹಿತಿ ನೀಡಿರುತ್ತಾರೆ ನಂತರ ಸಂಬಂಧಪಟ್ಟ ಆಹಾರ ಇಲಾಖೆ ಅಧಿಕಾರಿಗಳಿಗೂ ಸುದ್ದಿ ಮುಟ್ಟಿಸಿ ಆ ಎರೆಡೂ ಲಾರಿಗಳನ್ನು ಕಾಕತಿ ಪೋಲಿಸ್ ಠಾಣೆಗೆ ಒಪ್ಪಿಸಿರುತ್ತಾರೆ. ಇದೇ ರೀತಿ ಮುಂದೆ ನಡೆಯಬಾರದೆಂದು ಇಂದು ಬೆಳಗಾವಿಯ ಚೆನ್ನಮ್ಮಾ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ಸಂಘಟನೆಯ ಬೆಳಗಾವಿ ಜಿಲ್ಲಾಧ್ಯಕ್ಷರಾದ ಬಾಳಪ್ಪ ಗುಡಗನಟ್ಟಿ, ಮಹಿಳಾ ಜಿಲ್ಲಾಧ್ಯಕ್ಷರಾದ ಸಂಗೀತಾ ಕಾಂಬಳೆ, ಗೋಕಾಕ ತಾಲೂಕಾ ಅಧ್ಯಕ್ಷರಾದ ಅಶೋಕ ಗಾಡಿವಡ್ಡರ, ಸಂಘಟನೆಯ ಪದಾಧಿಕಾರಿಗಳಾದ ರವಿ ಗಾಡಿವಡ್ಡರ, ಮಂಜುನಾಥ ಗಾಡಿವಡ್ಡರ, ಜಯಶ್ರೀ ಮೇಖಳಿ ಹಾಗೂ ಅನೇಕ ಕನ್ನಡ ಸಂಘಟನೆಯ ಪದಾಧಿಕಾರಿಗಳು ಸೇರಿ ಹೋರಾಟವನ್ನು ಮಾಡಿ ಸರ್ಕಾರಕ್ಕೆ ಈ ರೀತಿಯ ಪ್ರಕರಣಗಳು ನಡೆಯದಂತೆ ಮನವಿ ಮಾಡಿದರು.