Belagavi News In Kannada | News Belgaum

ಸಿದ್ದರಾಮಯ್ಯ ಭೇಟಿ ಮಾಡಿ ಬೆಂಬಲ ಕೇಳುತ್ತೇನೆ ಎಂದ ರೇವಣ್ಣ

ಹಾಸನ: ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಬೆಂಬಲ ಕೇಳುತ್ತೇನೆ. ಸಿದ್ದರಾಮಯ್ಯ ಮತ್ತು ನನ್ನ ನಡುವೆ ಇಲ್ಲಿಯವರೆಗೂ ವಿಶ್ವಾಸ ಚೆನ್ನಾಗಿದೆ ಎಂದು ಮಾಜಿ ಸಚಿವ ಹೆಚ್‍.ಡಿ. ರೇವಣ್ಣ ತಿಳಿಸಿದರು.

ರಾಜ್ಯಸಭೆ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡ್ರು ಎಂತಹದ್ದನ್ನೆಲ್ಲಾ ಬಿಟ್ಟು ಹಾಕಿದ್ದಾರೆ. ಪ್ರಾದೇಶಿಕ ಪಕ್ಷ ಉಳ್ಕಳ್ಳಿ, ನಾವು ಯಾವತ್ತಾದರೂ ಉಪ್ಪಿನಕಾಯಿತರ ಉಪಯೋಗಕ್ಕೆ ಬರ್ತೀವಿ. ನಾನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್, ಕುಮಾರಸ್ವಾಮಿ ಎಲ್ಲರಲ್ಲೂ ಮನವಿ ಮಾಡುತ್ತೇನೆ. ಎಲ್ಲರೂ ಒಟ್ಟಾಗಿ ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಕುಪೇಂದ್ರ ರೆಡ್ಡಿ ಅವರನ್ನು ಬೆಂಬಲಿಸಿ ಎಂದು ಕೇಳಿಕೊಂಡರು.

ಸಿದ್ದರಾಮಯ್ಯ ಅವರು ಸ್ವಲ್ಪ ಕೂಲ್ ಆಗಲಿ, ನಾನೂ ಹೋಗಿ ಭೇಟಿ ಮಾಡಿ ಬೆಂಬಲ ಕೇಳುತ್ತೇನೆ. ಸಿದ್ದರಾಮಯ್ಯ ಮತ್ತು ನನ್ನ ನಡುವೆ ಇಲ್ಲಿಯವರೆಗೂ ವಿಶ್ವಾಸ ಚೆನ್ನಾಗಿದೆ, ಮುಂದೆಯೂ ಚೆನ್ನಾಗಿರುತ್ತೆ. ನನಗೆ ಕೊನೆಯವರೆಗೂ ನಂಬಿಕೆಯಿದೆ. ಕೋಮುವಾದಿಗಳನ್ನು ದೂರವಿಡಬೇಕು ಅಂದ್ರೆ ನಾವೆಲ್ಲಾ ಒಗ್ಗಟ್ಟಾಗಬೇಕು. ಕೋಮುವಾದಿಗಳನ್ನು ದೂರವಿಡಲು ನಮಗೆ ಬೆಂಬಲ ಕೊಡುತ್ತಾರೆ ಅಂದುಕೊಂಡಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು./////