Belagavi News In Kannada | News Belgaum

ಅಪ್ಪು ಮತ್ತು ಸಂಚಾರಿ ವಿಜಯ್ ಹೆಸರಿನಲ್ಲಿ ‘ಮೊಬೈಲ್ ಕ್ಲಿನಿಕ್’

ಬೆಂಗಳೂರು: ಕನ್ನಡ ಸಿನಿಮಾ ರಂಗದ ಇಬ್ಬರು ಪ್ರತಿಭಾವಂತ ನಟರ ಹೆಸರಿನಲ್ಲಿ ಮೊಬೈಲ್ ಕ್ಲಿನಿಕ್ ಮಾಡಲು ಮುಂದಾಗಿದೆ ರೋಟರಿ ಸಂಸ್ಥೆ. ರಾಷ್ಟ್ರ ಪ್ರಶಸ್ತಿ ವಿಜೇತ ನಟರಾದ ಪುನೀತ್ ರಾಜ್ ಕುಮಾರ್ ಮತ್ತು ಸಂಚಾರಿ ವಿಜಯ್ ಅವರ ಹೆಸರಿನಲ್ಲಿ ಸುಸಜ್ಜಿತ 4 ಮೊಬೈಲ್ ಕ್ಲಿನಿಕ್ – ಲ್ಯಾಬ್ ಬ್ಯುಲ್ಟ್ ಆನ್ ವೀಲ್ಸ್ ರೆಡಿ ಮಾಡಿದೆ.

ಇವುಗಳಿಗೆ ಇಂದು ವಿಧಾನಸೌಧದ ಮುಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದರು.  ಈ ಮೊಬೈಲ್ ಕ್ಲಿನಿಕ್ ಗಾಗಿ ಇನ್ಫೋಸಿಸ್ ಫೌಂಡೇಶನ್ ಸುಮಾರು ನಾಲ್ಕು ಕೋಟಿ ರೂ. ಅನುದಾನವನ್ನು ಸಿ.ಎಸ್.ಆರ್ ಅನುದಾನದ ಅಡಿಯಲ್ಲಿ ನೀಡಿದೆಯಂತೆ. ರೋಟರಿ ಬೆಂಗಳೂರು ಹೈಗ್ರೌಂಡ್ಸ್, ರೋಟರಿ ಬೆಂಗಳೂರು ಈಸ್ಟ್ ವೆಸ್ಟ್, ರೋಟರಿ ಬೆಂಗಳೂರು ಎಚ್.ಎಸ್.ಆರ್ ಸಹಯೋಗದೊಂದಿಗೆ ಸಾಯಿಕಾರ್ಪ್ ಸಂಸ್ಥೆಯು ಇವುಗಳನ್ನು ನಿರ್ಮಾಣ ಮಾಡಿದೆ.
ಈ ಮೊಬೈಲ್ ಕ್ಲಿನಿಕ್ ನಲ್ಲಿ ಟೆಲಿ ಮೆಡಿಸಿನ್, ಫಾರ್ಮಸಿ, ವ್ಯಾಕ್ಷಿನ್ ಮತ್ತು ಇತರ ಔಷಧಿಗಳನ್ನು ಹೊಂದಿದ್ದು, ತುರ್ತು ಚಿಕಿತ್ಸೆಗಾಗಿ ಆಕ್ಸಿಜನ್ ಜೊತೆ ಪ್ರತ್ಯೇಕ ಬೆಡ್ ವುಳ್ಳ ಕೊಠಡಿ ಕೂಡ ಹೊಂದಿದೆಯಂತೆ. ಗ್ರಾಮೀಣ ಭಾಗದ ಜನರಿಗೆ ಸೂಕ್ತ ಚಿಕಿತ್ಸೆ ನೀಡುವಲ್ಲಿ ಇವುಗಳು ನೆರವಾಗಲಿವೆ ಎಂದಿದೆ ಸಂಸ್ಥೆ./////