Belagavi News In Kannada | News Belgaum

ಕಲುಷಿತ ನೀರು ಸರಬರಾಜು ಪ್ರಕರಣ: ಜೂ.ಇಂಜಿನಿಯರ್ ವಜಾ

ರಾಯಚೂರು: ಕಲುಷಿತ ನೀರು ಸರಬರಾಜು ಮಾಡಿ ಮೂರು ಜೀವಗಳನ್ನು ಬಲಿ ಪಡೆದಿರುವ ರಾಯಚೂರು ನಗರಸಭೆ ವಿರುದ್ಧ ಸಾರ್ವಜನಿಕರು ರೊಚ್ಚಿಗೆದ್ದಿದ್ದಾರೆ. ಈ ಹಿನ್ನೆಲೆ ಜನರು ರಾಯಚೂರು ಬಂದ್ ಮಾಡುವ ಮೂಲಕ ಜಿಲ್ಲಾಡಳಿತಕ್ಕೂ ಬಿಸಿ ಮುಟ್ಟಿಸಿದ್ದಾರೆ. ಕರ್ತವ್ಯಲೋಪವೆಸಗಿದ ಜೂ.ಇಂಜಿನಿಯರ್‌ನನ್ನು ವಜಾ ಮಾಡಲಾಗಿದೆ.
ರಾಯಚೂರು ನಗರಸಭೆ ಸರಬರಾಜು ಮಾಡುವ ನೀರು ಕುಡಿದು ಮೂವರು ಸಾವನ್ನಪ್ಪಿದ ಹಿನ್ನೆಲೆ ರಾಯಚೂರು ನಾಗರಿಕ ವೇದಿಕೆ ಕರೆ ನೀಡಿದ್ದ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರಸಭೆಯಿಂದ ಕಲುಷಿತ ನೀರು ಸರಬರಾಜು ಮಾಡಿದ್ದರಿಂದ ನೀರು ಕುಡಿದ ನೂರಾರು ಜನ ವಾಂತಿ, ಭೇದಿ, ಕಿಡ್ನಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಗರದ ಮಲ್ಲಮ್ಮ, ಅಬ್ದುಲ್ ಗಫರ್ ಮತ್ತು ನೂರು ಮೊಹಮದ್ ಕಿಡ್ನಿ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಸಾರ್ವಜನಿಕರು ನಗರಸಭೆ ವಿರುದ್ಧ ರೊಚ್ಚಿಗೆದ್ದಿದ್ದಾರೆ.
ಸಾರ್ವಜನಿಕರ ಆಕ್ರೋಶಕ್ಕೆ ಮಣಿದಿರುವ ಜಿಲ್ಲಾಡಳಿತ ನಗರಸಭೆ ಕಿರಿಯ ಅಭಿಯಂತರ ಕೃಷ್ಣಾ ಅವರನ್ನು ಸೇವೆಯಿಂದ ವಜಾ ಮಾಡಿದೆ. ರಾಂಪೂರ ಜಲ ಶುದ್ಧೀಕರಣ ಘಟಕದ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಜೆಇಯನ್ನು ಕರ್ತವ್ಯ ಲೋಪ ಹಿನ್ನೆಲೆ ರಾಯಚೂರು ಜಿಲ್ಲಾಧಿಕಾರಿ ಚಂದ್ರಶೇಖರ್ ನಾಯಕ್ ವಜಾಗೊಳಿಸಿ ಎಂದು ಆದೇಶ ಕೊಟ್ಟಿದ್ದಾರೆ./////