Belagavi News In Kannada | News Belgaum

ಬೆಳಗಾವಿ: ಕೆಎಸ್ ಆರ್ ಪಿ ತರಬೇತಿ ಶಾಲೆಯಲ್ಲಿ ಅಭ್ಯರ್ಥಿ ಮೇಲೆ ಪೊಲೀಸರಿಂದ ಹಲ್ಲೆ

ಬೆಳಗಾವಿ: ಎಪಿಎಂಸಿ ಬಳಿ ಇರುವ ಕೆಎಸ್ ಆರ್ ಪಿ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗೆ ಇಲ್ಲಿನ ಪೊಲೀಸ್ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ಮಾಡಿದ್ದಾರೆ ಎಂದು ನೊಂದ ಅಭ್ಯರ್ಥಿ ಸಿಎಂ ಬಸವರಾಜ ಬೊಮ್ಮಾಯಿಗೆ ಟ್ವಿಟ್ ಮಾಡಿದ್ದಾನೆ.

ವಿಶ್ವಾ ಯು.ಎಂ.  ಕೆಎಸ್ ಆರ್ ಪಿ ತರಬೇತಿ ಪಡೆಯುತ್ತಿರುವ ಅಭ್ಯರ್ಥಿ.  ಕಂಗ್ರಾಳಿಯ ಕೆಎಸ್ ಆರ್ ಪಿ ತರಬೇತಿ ಶಾಲೆಯಲ್ಲಿಇತ್ತೀಚೆಗಷ್ಟೆ ಕೆಲ ತರಬೇತಿ ಮುಗಿಸಿದ ಅಭ್ಯರ್ಥಿಗಳ ಪರೇಡ್ ನಲ್ಲಿ ವಿಶ್ವಾ ಯು.ಎಂ. ಸಡಗರದಿಂದ ಕೆಲಸ ನಿರ್ವಹಿಸಿದ್ದರು ಎನ್ನಲಾಗಿದೆ.
ಬೆಳಗಾವಿ ಕೆಎಸ್ ಆರ್ ಪಿ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ವಿಶ್ವಾಗೆ ಇಲ್ಲಿ ತರಬೇತಿ ನೀಡುವ ಪೊಲೀಸ್ ಸಿಬ್ಬಂದಿಗಳು ವೈಯಕ್ತಿಕ ನಿಂಧನೆ ಹಾಗೂ ಮನಸೋ ಇಚ್ಚೆ ಥಳಿಸಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಅವರ ಟ್ವಿಟರ್ ಖಾತೆಯಲ್ಲಿ ದೂರಿದ್ದಾನೆ. ಕೆಎಸ್ ಆರ್ ಪಿ ಅಭ್ಯರ್ಥಿ ವಿಶ್ವಾ ಮೇಲೆ ವೈಯಕ್ತಿಕ ನಿಂಧನೆ ಹಾಗೂ ಹಲ್ಲೆ ಮಾಡಿರುವ ಪೊಲೀಸ್ ಸಿಬ್ಬಂದಿಗಳ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..//////