Belagavi News In Kannada | News Belgaum

ಬಿಜೆಪಿ ಅಭ್ಯರ್ಥಿಗಳಿಬ್ಬರ ಗೆಲುವು ನಿಶ್ಚಿತ ಶಾಸಕ ಶ್ರೀಮಂತ ಪಾಟೀಲ

ಐನಾಪುರ, ಉಗಾರ, ಶಿರಗುಪ್ಪಿ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ವಿಧಾನ ಪರಿಷತ್ತಿನ ಪ್ರಚಾರ

ಬೆಳಗಾವಿ : ಐನಾಪುರ, ಉಗಾರ, ಶಿರಗುಪ್ಪಿ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ವಿಧಾನ ಪರಿಷತ್ತಿನ ಪ್ರಚಾರ

ಅಥಣಿ: ಪ್ರತಿನಿಧಿ ಕಳೆದ ಎಂಟು ವರ್ಷಗಳಲ್ಲಿ ಬಿಜೆಪಿ ಸರ್ಕಾರ ದೇಶದ ಅಭಿವೃದ್ಧಿ ಮಾಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿಯ ಆಗ್ತಾಯಿದೆ. ಅದೇ ರೀತಿ ಶಿಕ್ಷಕರ ಸಮಸ್ಯೆ ಬಗೆಹರಿಸಲು ಬಿಜೆಪಿ ಅಭ್ಯರ್ಥಿಗಳಿಬ್ಬರನ್ನು ಆಯ್ಕೆ ಮಾಡಿ, ಎಂದು ಮಾಜಿ ಸಚಿವರು ಹಾಗೂ ಕಾಗವಾಡ ಶಾಸಕರಾದ ಶ್ರೀಮಂತ್ ಪಾಟೀಲ್ ಹೇಳಿದರು.

ಬಿಜೆಪಿ ಇಬ್ಬರೂ ಅಭ್ಯರ್ಥಿಗಳು ಪ್ರಥಮ ಪ್ರಾಶಸ್ತ್ಯದ ಮತದ ಮೂಲಕ ಆಯ್ಕೆಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಶಾಸಕ ಶ್ರೀಮಂತ ಪಾಟೀಲ್ ಐನಾಪುರ, ಉಗಾರ ಖುರ್ದ, ಉಗಾರ ಬುದ್ರುಕ, ಶಿರಗುಪ್ಪಿ ಸೇರಿದಂತೆ ಶಾಲೆ, ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದರು. ಪದವಿ ವಿಭಾಗದ ಅಭ್ಯರ್ಥಿ ಹಣಮಂತ ನಿರಾಣಿ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಅರುಣ ಶಹಾಪುರ ಬಿರುಸಿನ ಪ್ರಚಾರವನ್ನು ಶಾಸಕರಾದ ಪಾಟೀಲ್ ಆರಂಭಿಸಿದ್ದಾರೆ.

ಶೈಕ್ಷಣಿಕ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ಶಾಸಕರಾದ ಪಾಟೀಲ, ಬಿಜೆಪಿ ಅಭ್ಯರ್ಥಿಗಳಿಬ್ಬರೂ ಮೊದಲು ಮತ ಚಲಾಯಿಸುವಂತೆ ಮನವಿ ಮಾಡಿದರು.

ಬಿಜೆಪಿ ಅಭಿವೃದ್ಧಿಗೆ ಮಾತ್ರ ಆದ್ಯತೆ ನೀಡಿದ್ದು, ಜಾತಿ ರಾಜಕಾರಣಕ್ಕೆ ಯಾವಾಗಲೂ ಆದ್ಯತೆ ನೀಡಿಲ್ಲ ಎಂದರು. ಕೇಂದ್ರದಲ್ಲಿ ಬಿಜೆಪಿ ಸರಕಾರ ಕಳೆದ ಎಂಟು ವರ್ಷಗಳಲ್ಲಿ ಸಾಧಿಸಿದ ಅಭಿವೃದ್ಧಿಯ ಗತಿ ಕಾಣುತ್ತಿದೆ.

ಜತೆಗೆ ಬೊಮ್ಮಾಯಿ ಸರಕಾರವೂ ರಾಜ್ಯದಲ್ಲಿ ಅಭಿವೃದ್ಧಿಯ ಮಾಡುತ್ತಿದೆ. ಹನಮಂತ ನಿರಾಣಿ ಒಂದು ಬಾರಿ, ಅರುಣ ಶಹಾಪುರ ಎರಡು ಬಾರಿ ಶಿಕ್ಷಕ ನೇತೃತ್ವ ಮಾಡಿದ್ದಾರೆ.

ಶಿಕ್ಷಕರ ಮತ್ತು ಪದವೀಧರರ ಸಮಸ್ಯೆಗಳ ಬಗ್ಗೆ ಅವರಿಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ, ಈ ಪ್ರದೇಶದ ಎಲ್ಲಾ ಸಮಸ್ಯೆಗಳನ್ನು ಅವರು ತಕ್ಷಣವೇ ಪರಿಹರಿಸುತ್ತಾರೆ. ಭವಿಷ್ಯದಲ್ಲಿ ಶಿಕ್ಷಕರ ಮತ್ತು ನಿರುದ್ಯೋಗಿ ಯುವಕರ ಉದ್ಯೊಗ ಸಮಸ್ಯೆ ಬಗೆಹರಿಸಬೇಕಾದರೆ ಬಿಜೆಪಿ ಅಭ್ಯರ್ಥಿಗಳಿಬ್ಬರನ್ನೂ ವಿಧಾನಪರಿಷತಗೆ ಕಳುಹಿಸುವಂತೆ ಮನವಿ ಮಾಡಿದರು.

ಜೂನ್ 13ರಂದು ಮತದಾನ ನಡೆಯಲಿದ್ದು, ಅದಕ್ಕೂ ಮುನ್ನ ಎಲ್ಲ ಶಾಲೆ, ಶಿಕ್ಷಣ ಸಂಸ್ಥೆಗಳು ಹಾಗೂ ಪದವೀಧರ ಮತದಾರರಿರುವ ಸ್ಥಳಗಳಲ್ಲಿ ಶಾಸಕ ಶ್ರೀಮಂತ ಪಾಟೀಲ್ ಪ್ರಚಾರ ಆರಂಭಿಸಿದ್ದಾರೆ. ಇವರೊಂದಿಗೆ ಬಿಜೆಪಿ ಪದಾಧಿಕಾರಿಗಳು, ಸ್ಥಳೀಯ ಕಾರ್ಯಕರ್ತರು, ಯುವಕರು ಭಾಗ್ ವಹಿಸುತ್ತಿದ್ದಾರೆ.