Belagavi News In Kannada | News Belgaum

ನೂತನ ರಚನೆಯಾಗುವ ಚಿಕ್ಕೋಡಿ ಜಿಲ್ಲೆಗೆ ಡಾ. ಬಿ.ಆರ್. ಅಂಬೇಡ್ಕರ ಜಿಲ್ಲೆ ಎಂದು ನಾಮಕರಣಕ್ಕೆ ಒತ್ತಾಯ

ಚಿಕ್ಕೋಡಿ: ಚಿಕ್ಕೋಡಿ ಉಪವಿಭಾಗದಲ್ಲಿ ರಚನೆಯಾಗುವ ನೂತನ ಜಿಲ್ಲೆಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಜಿಲ್ಲೆ ಎಂದು ನಾಮಕರಣ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ  ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಭೌಗೋಳಿಕ ಹಾಗೂ ಜನಸಂಖ್ಯೆ ದೃಷ್ಠಿಯಿಂದ ಬೆಳಗಾವಿ ಜಿಲ್ಲೆಯು ಅತ್ಯಂತ ದೊಡ್ಡ ಜಿಲ್ಲೆಯಾಗಿದೆ. ಸುಗಮ ಆಡಳಿತ ದೃಷ್ಠಿಯಿಂದ ಬೆಳಗಾವಿಯನ್ನು ಮೂರು ಜಿಲ್ಲೆಗಳಾಗಿ ರಚಿಸಿಬೇಕೆಂದು ಹೋರಾಟ ನಿರಂತರಾಗಿ ನಡೆದಿವೆ. ಇತ್ತಿಚ್ಚೆಗೆ ಜಿಲ್ಲೆಯ ಸಚಿವ ಉಮೇಶ ಕತ್ತಿ ನೂತನ ಜಿಲ್ಲೆಗೆ ಸಕಾರಾತ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಐತಿಹಾಸಿಕ ಮತ್ತು ಬಹುಜನರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಚಿಕ್ಕೋಡಿ ಉಪವಿಭಾಗದ ವ್ಯಾಪ್ತಿಯ ರಚನೆಯಾಗುವ ಜಿಲ್ಲೆಗೆ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಜಿಲ್ಲೆ ಎಂಬ ನಾಮಕರಣ ಮಾಡಬೇಕೆಂದು ಪದಾಧಿಕಾರಿಗಳು ಒತ್ತಾಯಿಸಿದರು.ೀ ಈ ವೇಳೆ ಸವಿತಾ ರಾಜು ಅಸೋದೆ, ಪರಶುರಾಮ ಟೋನಪೆ, ರಾಜು ಅಸೋದೆ, ಸಚೀನ ಸುಣಾವನೆ ಸೇರಿದಂತೆ ಮುಂತಾದವರು ಇದ್ದರು./////