Belagavi News In Kannada | News Belgaum

ಚನ್ನಮ್ಮ ಮೂರ್ತಿ ಬದಲು ಹನುಮಾನ್‌ ಮೂರ್ತಿ ಪ್ರತಿಷ್ಠಾಪನೆ: ನಾವಗೆ ಗ್ರಾಮದಲ್ಲಿ ಗೊಂದಲದ ವಾತಾವರಣ

ಬೆಳಗಾವಿ: ತಾಲೂಕಿನ ನಾವಗೆ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ಎದುರು ರಾಣಿ ಚನ್ನಮ್ಮನ ಮೂರ್ತಿ ಪ್ರತಿಷ್ಠಾಪನೆ ಮಾಡಲು ನಿಗದಿ ಮಾಡಿದ ಸರ್ಕಲ್‌ನಲ್ಲಿ ಹನುಮಾನ್‌ ಮೂರ್ತಿ ನಿಲ್ಲಿಸಿದ್ದರಿಂದ, ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಮಂಗಳವಾರ ತಡರಾತ್ರಿ ಯಾರೋ ಈ ಜಾಗದಲ್ಲಿ ಮೂರಡಿ ಎತ್ತರದ ಆಂಜನೇಯನ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ಇದರಿಂದ ಬುಧವಾರ ಬೆಳಗ್ಗೆಯಿಂದ ಗ್ರಾಮದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸ್ಥಳಕ್ಕೆ ಧಾವಿಸಿದ ಪೊಲೀಸರು ಜನರನ್ನ ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ನಂತರ ಪೊಲೀಸ್‌ ಅಧಿಕಾರಿಗಳೇ ಆಂಜನೇಯ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ, ಸ್ಥಳದಿಂದ ತೆರವು ಮಾಡಿದರು. ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಗ್ರಾಮದಲ್ಲಿ ಬಂದೋಬಸ್ತ್‌ ಮಾಡಿದ್ದಾರೆ./////