Belagavi News In Kannada | News Belgaum

ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಲು ಯಡಿಯೂರಪ್ಪ ಕರೆ

ಚಿಕ್ಕೋಡಿ: ವಿದ್ಯಾರ್ಥಿಗಳು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಬೇಕಾಗಿರುವ ಕೌಶಲ್ಯಭರಿತ ಉತ್ತಮ ಶಿಕ್ಷಣ ನೀಡುವ ಮಹತ್ತರ ಕಾರ್ಯ ರಾಜ್ಯದಲ್ಲಿ ಬಿಜೆಪಿ ಸರಕಾರ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಪಟ್ಟಣದಲ್ಲಿ ಬುಧುವಾರ ಭಾರತೀಯ ಜನತಾ ಪಾರ್ಟಿ ಹಮ್ಮಿಕೊಂಡಿದ್ದ ಪದವೀಧರ ಮತ್ತು ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿಗಳ ಪರ ಪ್ರಚಾರ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿ, ಮನುಷ್ಯನ ಬದುಕಿನ ರಕ್ಷಣೆಗಾಗಿ ಬೇಕಾಗಿರುವ ಉತ್ತಮ ಶಿಕ್ಷಣ ರೈತರ ಮಕ್ಕಳು ಪಡೆಯಬೇಕು ಎಂಬ ಉದ್ದೇಶದಿಂದ ರಾಜ್ಯದಲ್ಲಿ ಬಿಜೆಪಿ ಸರಕಾರ ರೈತರ ಮಕ್ಕಳಿಗೆ ಶಿಷ್ಯವೇತನ ಕೊಡುತ್ತಿದೆ ಎಂದರು.
ಶಿಕ್ಷಕರ ವೇತನ ಸಮಸ್ಯೆ ಹೋಗಲಾಡಿಸುವ ಜತೆಗೆ 6ನೇ ವೇತನ ಆಯೋಗದ ಜಾರಿ ಮಾಡಲಾಗಿದೆ. ಸಮಾನ ವೇತನ ಯೋಜನೆ ಜಾರಿಗೊಳಿಸಿರುವುದು ಸೇರಿದಂತೆ ಶಿಕ್ಷಕರಿಗಾಗಿ ಹಲವಾರು ಯೋಜನೆಗಳನ್ನು ಬಿಜೆಪಿ ಸರಕಾರ ಜಾರಿಗೊಳಿಸಿದೆ ಎಂದರು.

4359 ಜನ ಶಿಕ್ಷಕರನ್ನು ಖಾಯಂ ಮಾಡಲಾಗಿದೆ. 1995ರವರೆಗೆ ಅನುದಾನ ರಹಿತ ಶಾಲೆಗಳಿಗೆ ಅನುದಾನ ಕೊಡಲಾಗಿದೆ. 1450 ಅರೆಕಾಲಿಕ ಉಪನ್ಯಾಸಕರನ್ನು ಖಾಯಂಗೊಳಿಸಿದ್ದೇವೆ. 425 ಗುತ್ತಿಗೆ ಶಿಕ್ಷಕರನ್ನು ಖಾಯಂಗೊಳಿಸಲಾಗಿದೆ. 435 ಮೂರಾರ್ಜಿ ದೇಸಾಯಿ ಶಾಲೆಯ ಶಿಕ್ಷಕರನ್ನು ಖಾಯಂಗೊಳಿಸಿರುವುದು ಬಿಜೆಪಿ ಸರಕಾರ ಎಂದು ಹೇಳಿದರು.
ನಮ್ಮ ಸಾಧನೆ ಮಾತನಾಡಬೇಕು. ಮಾತನಾಡುವುದೇ ಸಾಧನೆಯಾಗಬಾರದು. ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಂಕಲ್ಪವನ್ನು ಪ್ರತಿಯೊಬ್ಬರು ಮಾಡಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಮೊದಲಿನಿಂದಲೂ ಜನರಿಗೆ ಮೋದ ಮಾಡುತ್ತ ಬಂದಿರುವ ಕಾಂಗ್ರೆಸ್‍ನವರು ಜಾತಿ-ಜಾತಿಗಳ ಮಧ್ಯೆ ಮತ್ತು ಧರ್ಮ-ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡಿದ್ದಾರೆಯೇ ಹೊರತು ರೈತರು ಮತ್ತು ದಲಿತರು ಜನ ಸಾಮಾನ್ಯರ ಉದ್ದಾರಕ್ಕಾಗಿ ಏನೂ ಮಾಡಿಯೇ ಇಲ್ಲ. ರಾಜ್ಯದಲ್ಲಿ ಅಷ್ಟೇ ಅಲ್ಲಾ ದೇಶದಲ್ಲಿ ಕಾಂಗ್ರೆಸ್ ಮುಳಗುವ ಹಡುಗವಾಗಿದೆ. ಆದ್ದರಿಂದ ಸೋಲು ಬೀತಿಯಿಂದ ಹತಾಶ ಭಾವನೆಯಿಂದ ಬಾಯಿಗೆ ಬಂದಂತೆ ಕಾಂಗ್ರೆಸ್‍ನವರು ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸಚಿವ ಉಮೇಶ ಕತ್ತಿ ಮಾತನಾಡಿ, ಈ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದವರಿಗೆ ಅಭ್ಯರ್ಥಿಗಳು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಶೀಕ್ಷಕರ ಕ್ಷೇತ್ರದ ಮತ್ತು ಪದವೀಧರ ಕ್ಷೇತ್ರದ ಬಗ್ಗೆ ಯಾವುದೇ ಗಂಧ ಗಾಳಿಯೂ ಗೊತ್ತಿಲ್ಲದಂತಹ ನಿರಾಶ್ರಿತರು ಮತ್ತು ನಿರುದ್ಯೋಗಿಗಳನ್ನು ತಂದು ಚುನಾವಣೆಗೆ ನಿಲ್ಲಿಸಿದ್ದಾರೆ. ಆದ್ದರಿಂದ ಅಂತವರನ್ನು ಬಿಟ್ಟು ಸಮಸ್ಯೆಗೆ ಸ್ಪಂಧಿಸುವಂತಹ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.
ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ಶಿಕ್ಷಕರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿರುವ ಬಿಜೆಪಿ ಸರಕಾರ ಶೀಘ್ರದಲ್ಲಿಯೇ 7ನೇ ವೇತನ ಆಯೋಗ ಜಾರಿಗೆ ತರಲಿದೆ. ಪಿಂಚಣಿ ಯೋಜನೆಯ ಗೊಂದಲವನ್ನು ಶೀಘ್ರದಲ್ಲಿಯೇ ಸರಕಾರ ಹೋಗಲಾಡಿಸಲಿದೆ ಎಂದು ಹೇಳಿದರು.
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪೂರ, ಪದವೀಧರ ಕ್ಷೇತ್ರದ ಅಭ್ಯರ್ಥಿ ಹನುಮಂತ ನಿರಾಣಿ ಮಾತನಾಡಿದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕರಾದ ದುರ್ಯೋಧನ ಐಹೋಳೆ, ಪಿ.ರಾಜೀವ್, ಮಹೇಶ ಕುಮಠಳ್ಳಿ, ವೈ.ನಾರಾಯಣಸ್ವಾಮಿ,ಎನ್.ರವಿಕುಮಾರ, ಉಜ್ವಲಾ ಬಡವನಾಚೆ, ಮಾಜಿ ಸಚಿವ ಶಶಿಕಾಂತ ನಾಯಿಕ, ಮಾಜಿ ಶಾಸಕ ಬಾಳಾಸಾಹೇಬ ವಡ್ಡರ, ಭರತೇಶ ಬನವಣೆ, ಮಲ್ಲಿಕಾರ್ಜುನ ಕೋರೆ, ಮಹೇಶ ಭಾತೆ, ದುಂಡಪ್ಪಾ ಬೆಂಡವಾಡೆ, ಪ್ರವೀಣ ಕಾಂಬಳೆ  ಇತರರು ಇದ್ದರು.

ಬಿಜೆಪಿ ಜಿಲ್ಲಾ ಅಧ್ಯಕ್ಷ ಡಾ. ರಾಜೇಶ ನೇರ್ಳಿ ಸ್ವಾಗತಿಸಿದರು. ಮಾಜಿ ವಿಧಾನ ಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಪ್ರಾಸ್ತಾವಿಕ ಮಾತನಾಡಿದರು. ಸಾಗರ ಬೀಸ್ಕೊಪ್ಪ ನಿರೂಪಿಸಿದರು. ಸತೀಶ ಅಪ್ಪಾಜಿಗೋಳ ವಂದಿಸಿದರು.   //////