Belagavi News In Kannada | News Belgaum

ಕರ್ನಾಟಕ ಅಲ್ಪಂಖ್ಯಾತರ ಅಭಿವೃಧ್ಧಿ ನಿಗಮ: ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

 

ಬೆಳಗಾವಿ,ಜೂನ್08: ಕರ್ನಾಟಕ ಅಲ್ಪಸಂಖ್ಯಾತರ ಅಬಿವೃಧ್ಧಿ ನಿಗಮವು ರಾಜ್ಯದ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಜೈನ, ಕ್ರಿಶ್ಚಿಯನ್, ಬೌಧ್ದ, ಸಿಖ್ಖರು, ಪಾರ್ಸಿ ಜನಾಂಗದವರ ಸಾಮಾಜಿಕ ಶೈಕ್ಷಣ ಕ ಮತ್ತು ಆರ್ಥಿಕಾಭಿವೃಧ್ಧಿಗಾಗಿ ಅನುಷ್ಠಾನಗೊಳಿಸುತ್ತಿರುವ ರಾಜ್ಯ ಸರ್ಕಾರ ಪ್ರಾಯೋಜಿತ ಈ ಕೆಳಕಂಡ ಯೋಜನೆಗಳಡಿಯಲ್ಲಿ 2022-23 ನೇ ಸಾಲಿನಲ್ಲಿ ಸಾಲ ಹಾಗೂ ಸಹಾಯಧನ ಸೌಲಭ್ಯ ಪಡೆಯಲು ಆನ್‍ಲೈನ ಮೂಲಕ  https://kmdconline.karnataka.gov.in/    ವೆಬ್‍ಪೇಜ್‍ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರಿವು ಸಾಲ (ವಿಧ್ಯಾಭ್ಯಾಸ ಸಾಲ) ಯೋಜನೆ:
ಈ ಯೋಜನೆಯಡಿ ವೃತ್ತಿಪರ ಕೋರ್ಸಗಲ್ಲಿ ವ್ಯಾಸಾಂಗ ಮಾಡುತ್ತಿರುವ ಬಡ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ನಿಗಮದಿಂದ ಎಂ.ಬಿ.ಬಿ.ಎಸ್, ಎಂ.ಡಿ, ಎಂ.ಎಸ್, ಬಿ.ಇ, ಬಿ.ಟೆಕ್, ಎಂಇ, ಎಂಟೆಕ್, ಬಿಡಿಎಸ್, ಎಂಡಿಎಸ್, ಬಿ.ಆಯುಷ್, ಎಂಆಯುಷ್, ಎಂ.ಬಿ.ಎ, ಎಂ.ಸಿ.ಎ, ಎಲ್.ಎಲ್.ಬಿ, ಬಿಆರ್ಕ್, ಎಂಆರ್ಕ್ ವೃತ್ತಿಪರ ಕೋರ್ಸಗಳಿಗೆ ರೂ.50,000/- ಗಳಿಂದ ವ್ಯಾಸಾಂಗಕ್ಕೆ ಅನುಗುಣವಾಗಿ ರೂ.3,00,000/-ಗಳ ವರೆಗೆ ಶೇ.2%ರ ಬಡ್ಡಿ ದರದಲ್ಲಿ ಸಾಲಸೌಲಭ್ಯ ಒದಗಿಸಲಾಗುವುದು.

ಪ್ಯಾಸೆಂಜರ್ ಅಟೋರಿಕ್ಷಾ/ಟ್ಯಾಕ್ಸಿ/ಗೂಡ್ಸ ವಾಹನ ಖರೀದಿಸಲು ಸಹಾಯಧನ ಯೊಜನೆ:
ಪ್ಯಾಸೆಂಜರ್ ಅಟೋರಿಕ್ಷಾ ವಾಹನ ಖರೀದಿಗೆ ರೂ.75,000/- ಸಹಾಯಧನ ಹಾಗೂ ಟ್ಯಾಕ್ಸಿ/ಗೂಡ್ಸ ವಾಹನ ಖರೀದಿಸಲು ರಾಷ್ಟ್ರೀಕೃತ ಬ್ಯಾಂಕಗಳಿಂದ ಪಡೆಯುವ ಪಡೆಯುವ ಸಾಲಕ್ಕೆ ವಾಹನ ಮೌಲ್ಯದ ಶೇ.33% ರಷ್ಟು ಸಹಾಯಧನ ಗರಿಷ್ಠ ರೂ.2.50 ಲಕ್ಷಗಳ ಸಹಾಯಧನ ಸೌಲಭ್ಯ ಒದಗಿಸಲಾಗುವುದು.

ಶ್ರಮಶಕ್ತಿ ಸಾಲ ಯೋಜನೆ:
ಅಲ್ಪಸಂಖ್ಯಾತರ ಸಮುದಾಯದ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಮತ್ತು ಕುಲಕಸುಬುದಾರರಿಗೆ ಅವರ ವೃತ್ತಿ ಕೌಶಲ್ಯವನ್ನು ಅಭಿವಧ್ಧಿ ಪಡಿಸಿಕೊಳ್ಳಲು ಗರಿಷ್ಠ ರೂ.50,000/-ವರೆಗೆ ಹಾಗೂ ಇತರೆ ವೃತ್ತಿಗಳಿಗೆ ಗರಿಷ್ಠ ರೂ.25,000/-ವರೆಗೆ ಶೇ.4%ರ ಬಡ್ಡಿ ದರದಲ್ಲಿ ಸಾಲಸೌಲಭ್ಯ ಒದಗಿಸಲಾಗುವುದು.

ಸ್ವಯಂ ಉದ್ಯೋಗ ಯೋಜನೆ :
ಈ ಯೋಜನೆಯಡಿ ವ್ಯಾಪಾರ, ಸಣ್ಣ ಪ್ರಮಾಣ ವ್ಯಾಪಾರ, ಗುಡಿ ಕೈಗಾರಿಕೆ, ಸೇವಾ ಕ್ಷೇತ್ರ, ಕೃಷಿ ಆಧಾರಿತ ಚಟುವಟಿಕೆಗಳು, ಮುಂತಾದ ಉದ್ದೇಶಗಳ ಘಟಕಗಳನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿ ಪಡೆಸಲು ರಾಷ್ಟ್ರೀಕೃತ/ಷೆಡ್ಯೂಲ ಬ್ಯಾಂಕಗಳ ಸಹಯೋಗದೊಂದಿಗೆ ಸಾಲ ಮತ್ತು ಸಹಾಯಧನ ಒದಗಿಸಲಾಗುವುದು. ಘಟಕ ವೆಚ್ಚದ ಶೇ.33% ಅಥವಾ ಗರಿಷ್ಠ ಮಿತಿ ರೂ.1.00 ಲಕ್ಷದ ಸಹಾಯಧನ ಸೌಲಭ್ಯ ಒದಗಿಸಲಾಗುವುದು.

ಆನ್‍ಲೈನ ಮೂಲಕ  https://kmdconline.karnataka.gov.in/  ವೆಬ್‍ಪೇಜನಲ್ಲಿ ಅರ್ಜಿಗಳನ್ನು ಸಲ್ಲಿಸಲು ಹಾಗೂ ಆನ್‍ಲೈನ್ ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಜುಲೈ 15ರೊಳಗಾಗಿ ಜಿಲ್ಲಾ ಕಚೇರಿಗೆ ಸಲ್ಲಿಸಬಹುದು ಹೆಚ್ಚನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರ ಕಚೇರಿಯ ವಿಳಾಸ ಮೌಲಾನಾ ಆಝಾದ ಅಲ್ಪಸಂಖ್ಯಾತರ ಭವನ, ಕೆ.ಎಸ್.ಸಿ.ಎ. ಕ್ರಿಕೇಟ್ ಕ್ರೀಡಾಂಗಣ ಎದುರುಗಡೆ, ರಾಮತೀರ್ಥ ನಗರ, ಬೆಳಗಾವಿ – 590016. ಕಛೇರಿ ದೂರವಾಣ ಸಂಖ್ಯೆ:0831-2950794ನ್ನು ಸಂಪರ್ಕಿಸಹಬಹುದು ಎಂದು ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ