ದೈಹಿಕ ಕ್ಷಮತೆ ಪ್ರಮಾಣ ಪತ್ರ ಮಾನ್ಯತೆ: ಬಿಮ್ಸ ಸ್ಪಷ್ಟನೆ

ಬೆಳಗಾವಿ ಜೂನ 9 : ಬಿಮ್ಸ್ ಫಿಟ್ನೆಸ್ ಪ್ರಮಾಣ ಪತ್ರದ ಮೇಲೆ ಅಧಿಕೃತ ಮುದ್ರೆ ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯು ಕೆಲವು ಫಿಟ್ನಸ್ ಪ್ರಮಾಣವನ್ನು ವಿವಿಧ ಉದ್ದೇಶಗಳಿಗಾಗಿ ನೀಡುತ್ತದೆ. ಆದರೆ ಅಧೀಕೃತ ಬಿಮ್ಸ್ ಮುದ್ರೆ ಇರುವ ಪ್ರಮಾಣ ಪತ್ರಗಳು ಮಾತ್ರವೇ ಮಾನ್ಯವಾಗಿರುತ್ತವೆ ಎಂದು ಸಂಸ್ಥೆಯು ತಿಳಿಸಿದೆ.
ಕೆಲವು ವೈದ್ಯಕೀಯ ಫೀಟ್ನಸ್ ಪ್ರಮಾಣ ಪತ್ರಗಳು ಅನುಮೋದಿತ ಬಿಮ್ಸ್ ಸೀಲ್ನ್ನು ಹೊಂದಿದ್ದು ಅವು ಮಾನ್ಯವಾಗಿರುತ್ತವೆ.
ಕೆಲವು ಪ್ರಮಾಣ ಪತ್ರಗಳು ಅಧಿಕೃತ ಬಿಮ್ಸ್ ಸೀಲ್ನ್ನು ಹೊಂದಿರುವುದಿಲ್ಲ. ಹೀಗಾಗಿ ಅಧೀಕೃತ ಮುದ್ರೆಯನ್ನು ಹೊಂದಿರದ ಪ್ರಮಾಣ ಪತ್ರವು ಮಾನ್ಯವಾಗಿರುವುದಿಲ್ಲ.
ಇತರ ಮುದ್ರೆಗಳನ್ನು ಹೊಂದಿರುವ ಯಾವದೇ ಪ್ರಮಾಣ ಪತ್ರ ಮಾನ್ಯವೆಂದು ಪರಿಗಣ ಸಲಾಗುದಿಲ್ಲ ಎಂದು ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.