ಸ್ಕೂಟಿಗೆ ಲಾರಿ ಡಿಕ್ಕಿ: ಇಬ್ಬರು ನಿವೃತ್ತ ಶಿಕ್ಷಕರ ದುರ್ಮರಣ

ಹುಬ್ಬಳ್ಳಿ: ಸ್ಕೂಟಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ನಿವೃತ್ತ ಶಿಕ್ಷಕರು ಮೃತಪಟ್ಟಿರುವ ಘಟನೆ ನೂಲ್ವಿ ಕ್ರಾಸ್ ಬಳಿ ನಡೆದಿದೆ.
ಡಿ.ಬಿ.ಹರಕುಣಿ ಹಾಗೂ ಸಕ್ರನಾಯ್ಕರ ಮೃತಪಟ್ಟ ನಿವೃತ್ತ ಶಿಕ್ಷಕರು ಎಂದು ಗುರುತಿಸಲಾಗಿದೆ. ಇವರು ಮದುವೆ ಕಾರ್ಯಕ್ರಮ ಮುಗಿಸಿಕೊಂಡು ಸ್ಕೂಟಿಯಲ್ಲಿ ಬರುತ್ತಿದ್ದ ಇಬ್ಬರು ನಿವೃತ್ತ ಶಿಕ್ಷಕರಿಗೆ ಲಾರಿಯೊಂದು ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡು ನಿವೃತ್ತ ಶಿಕ್ಷಕರನ್ನು ಆಸ್ಪತ್ರೆಗೆ ಸಾಗಿಸುವಾಗಲೇ ಇಬ್ಬರು ಸಾವಿಗೀಡಾಗಿದ್ದಾರೆ. ಮೃತರ ಮರಣೋತ್ತರ ಪರೀಕ್ಷೆ ನಡೆಸಿ, ಅಮರಗೋಳದ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ.//////