Belagavi News In Kannada | News Belgaum

ಚಿಕಿತ್ಸೆಗಾಗಿ ತನ್ನ ಮರಿಯೊಂದಿಗೆ ವೈದ್ಯನ ಬಳಿ ಬಂದ ಕೋತಿ

ಬಿಹಾರ: ಗಾಯಗೊಂಡ ಕೋತಿಯೊಂದು ತನ್ನ ಮರಿಯೊಂದಿಗೆ ಸಹಾಯ ಕೋರಿ ವೈದ್ಯನ ಬಳಿ ಬಂದಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಘಟನೆ ಬಿಹಾರದ ರೋಹ್ತಾಸ್‌ನಲ್ಲಿ ನಡೆದಿದೆ.
ಹೆಣ್ಣು ಕೋತಿ ಹಾಗೂ ಅದರ ಮರಿಗೆ ಗಾಯವಾಗಿದೆ. ಇದರಿಂದ ನರಳಾಡಿದ ಕೋತಿ ತನ್ನ ಮಗುವನ್ನು ಎದೆಗೆ ಅಪ್ಪಿಕೊಂಡು ಮಂಗಳವಾರ ಖಾಸಗಿ ಕ್ಲಿನಿಕ್‌ ಮುಂದೆ ಕುಳಿತಿತ್ತು. ಇದನ್ನು ಗಮನಿಸಿದ ವೈದ್ಯರು, ಚಿಕಿತ್ಸೆಯ ಸಹಾಯ ಕೋರುತ್ತಿದೆ ಎಂದು ಭಾವಿಸಿ, ಕ್ಲಿನಿಕ್ ಒಳಗೆ ಬರುವಂತೆ ಸೂಚಿಸಿದ್ದಾರೆ. ಈ ವೇಳೆ ಅಸಹಾಯಕತೆಯಿಂದ ಕೋತಿ ಒಳಗೆ ಬಂದು ಬೇಂಚ್‌ ಮೇಲೆ ಕುಳಿತುಕೊಂಡು ತನಗಾದ ಗಾಯವನ್ನು ತೋರಿಸಿದೆ. ತಾಯಿ ತಲೆಗೆ ಹಾಗೂ ಮಗುವಿನ ಕಾಳುಗಳಿಗೆ ಗಾಯವಾಗಿದ್ದನ್ನು ಗಮನಿಸಿದ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ನಂತ್ರ, ಕೋತಿಗಳು ತಾವಾಗಿಯೇ ಕ್ಲಿನಿಕ್‌ನಿಂದ ಹೊರ ಹೋದವು ಎಂದು ವೈದ್ಯ ಡಾ.ಎಸ್.ಎಂ. ಖಾನ್ ತಿಳಿಸಿದ್ದಾರೆ.
ಈ ವೇಳೆಗಾಗಲೇ ಕ್ಲಿನಿಕ್‌ನ ಹೊರಗೆ ಅಪಾರ ಸಂಖ್ಯೆಯ ಜನರು ಜಮಾಯಿಸಿದ್ದರು.//////