Belagavi News In Kannada | News Belgaum

ಶ್ರೀಲಂಕಾದಲ್ಲಿ ಮತ್ತೋರ್ವ ಪ್ರಭಾವಿ ರಾಜೀನಾಮೆ

ಶ್ರೀಲಂಕಾ;  ದ್ವೀಪರಾಷ್ಟ್ರ  ಶ್ರೀಲಂಕಾದಲ್ಲಿ ಮತ್ತೊಂದು ಹೊಸ ಬೆಳವಣಿಗೆ ನಡೆದಿದ್ದು, ಅಧ್ಯಕ್ಷ ಗೊಟಬಯ ರಾಜಪಕ್ಸೆ ಸಹೋದರ ಬಾಸಿಲ್ ರಾಜಪಕ್ಸೆ ಗುರುವಾರ  ಸಂಸತ್ತಿಗೆ ರಾಜೀನಾಮೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಇಂದಿನಿಂದ ನಾನು ಯಾವುದೇ ಸರ್ಕಾರಿ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ನಾನು ರಾಜಕೀಯದಿಂದ ಹಿಂದೆ ಸರಿಯುವುದಿಲ್ಲ ಮತ್ತು ಅದರಿಂದ ದೂರವೂ ಇರುವುದಿಲ್ಲ ಎಂದು ಎಂದು ಅವರು ಹೇಳಿದ್ದಾರೆ.

ರಾಜಕೀಯ ದಳ್ಳುರಿಗಳ ಹಿನ್ನೆಲೆಯಲ್ಲಿ ಗೊಟಬಯ ರಾಜಪಕ್ಸೆ ಅವರ ಹಿರಿಯ ಸಹೋದರ, ಮಹಿಂದಾ ರಾಜಪಕ್ಸೆ ಕಳೆದ ತಿಂಗಳು ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿ ಭೂಗತರಾಗಿದ್ದಾರೆ. ಇದರ ನಡುವೆಯೇ ಈ ಹೊಸ ಬೆಳವಣಿಗೆ ನಡೆದಿದೆ.
ಶ್ರೀಲಂಕಾದ ತೀವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಆಡಳಿತದಿಂದ ಹಿಂದೆ ಸರಿಯುವ ಪ್ರಭಾವಿ ಕುಟುಂಬದ ಎರಡನೆ ಸದಸ್ಯ ಬಾಸಿಲ್ ಆಗಿದ್ದಾರೆ./////